Asianet Suvarna News Asianet Suvarna News

ಹಿಂದಿ ರಿಮೇಕ್ ಸೀರಿಯಲ್‌ನಲ್ಲಿ 'ಅಗ್ನಿಸಾಕ್ಷಿ' ಸಿದ್ದಾರ್ಥ !

ಡಿಂಪಲ್ ಬಾಯ್ ಸಿದ್ದಾರ್ಥ್ ಅಗ್ನಿಸಾಕ್ಷಿ ಧಾರಾವಾಹಿಯಿಂದ ಹೊರ ಬಂದು ಅಭಿಮಾನಿಗಳಿಗೆ ಬಿಗ್ ಶಾಕ್ ನೀಡಿದ್ದರು. ಮದುವೆ ನಂತರ ಫ್ಯಾಮಿಲಿಗೆ ಟೈಂ ಕೊಡಬೇಕೆಂದು ನಿರ್ಧರಿಸಿದ ಸಿದ್ದು ಈಗ ತಮ್ಮ ಅಭಿಮಾನಿಗಳಿಗೆ ಮತ್ತೊಂದು ಶಾಕ್ ನೀಡುತ್ತಿದ್ದಾರೆ. ಈ ಶಾಕ್ ಸ್ವೀಟಾ? ಗಾಟಾ? ಇಲ್ಲಿದೆ ನೋಡಿ........

Agnishakshi Fame Vijay Surya to act new soap Prema lokha
Author
Bangalore, First Published Jun 19, 2019, 1:32 PM IST
  • Facebook
  • Twitter
  • Whatsapp

ಸಿದ್ದಾರ್ಥ ಉರ್ಫ್ ವಿಜಯ್ ಸೂರ್ಯ ಸೈಡ್‌ ಸ್ಮೈಲ್ ಹಾಗೂ ಗುಳಿ ಕೆನ್ನೆಗೆ ಹುಡುಗಿಯರಿಂದ ಅಜ್ಜಿಯಂದಿರವರೆಗೂ ಫುಲ್ ಫಿದಾ ಆಗಿದ್ದರು. ಸೀರಿಯಲ್‌ನಿಂದ ಹೊರ ಬರುವುದನ್ನು ಕೇಳಿ ಯಾಕ್ರೀ ನೀವು ಇಲ್ಲದೆ ಸೀರಿಯಲ್ ನೋಡ್ಬೇಕು? ಅಂತೆಲ್ಲಾ ಮಾತನಾಡಲು ಆರಂಭಿಸಿದ್ದರು.

ಗುಳಿಕೆನ್ನೆ ಚೆಲುವೆಯೊಂದಿಗೆ ಸಪ್ತಪದಿ ತುಳಿದ 'ಅಗ್ನಿಸಾಕ್ಷಿ'ಯ ಸಿದ್ಧಾರ್ಥ!

 

ಇನ್ನು ಸೋಷಿಯಲ್ ಮಿಡಿಯಾದಲ್ಲಿ 'ಯಾಕ್‌ ಸಾರ್ ಸೀರಿಯಲ್‌ನಿಂದ ಹೊರ ಬಂದ್ರಿ?' ಅಂತ ಮೆಸೇಜ್‌ ಮಾಡುತ್ತಿದ್ದ ಅಭಿಮಾನಿ ದೇವರುಗಳಿಗೆ ಗುಡ್‌ ನ್ಯೂಸ್ ಕೊಟ್ಟಿದ್ದಾರೆ! ಅದೇನು ಗೊತ್ತಾ?

'ಅಗ್ನಿಸಾಕ್ಷಿ' ಧಾರಾವಾಹಿಯಿಂದ ಹೊರಬಿದ್ದ ಸಿದ್ಧಾರ್ಥ್

ಖ್ಯಾತ ಹಿಂದಿ ಧಾರಾವಾಹಿ ಕಸೂಟಿ ಜಿಂದಗಿ ಕಿ' ಧಾರಾವಾಹಿ ರಿಮೇಕ್ 'ಪ್ರೇಮಲೋಕ'ವೆಂದು ಕನ್ನಡದಲ್ಲಿ ಪ್ರಸಾರವಾಗಲಿದೆ. ಅದರಲ್ಲಿ ಲವರ್ ಬಾಯ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಸೂಟಿ ಜಿಂದಗಿ ಕೇಯಲ್ಲಿ ಅನುರಾಗ್ ಪಾತ್ರ ಫುಲ್ ಫೇಮಸ್ ಆಗಿತ್ತು ಈಗ ಅದೇ ಪಾತ್ರಕ್ಕೆ ಕನ್ನಡದಲ್ಲಿ ಮತ್ತಷ್ಟು ಜೀವ ತುಂಬಿ, ಬೆರಗು ತರಲು, ವಿಜಯ್ ಮನಸ್ಸು ಮಾಡಿ, ಒಪ್ಪಂದಕ್ಕೆ ಸಹಿ ಮಾಡಿದ್ದಾರೆ. 'ಪ್ರೇಮಲೋಕ' ಧಾರಾವಾಹಿ ವಿಶೇಷತೆ ಏನೆಂದರೆ ಅಗ್ನಿಸಾಕ್ಷಿ ನಿರ್ದೇಶಕರಾದ ಮೈಸೂರು ಮಂಜು ಅವರೇ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಪ್ರೋಮೋ ಶೂಟಿಂಗ್ ಮುಗಿದಿದ್ದು, ಸದ್ಯದಲ್ಲೇ ರಿಲೀಸ್ ಆಗಲಿದೆ.

ಸನ್ನಿಧಿ-ಸಿದ್ಧಾರ್ಥ್ ರೊಮ್ಯಾನ್ಸಿಗೇ ಜನರು ಫಿದಾ ಆಗಿದ್ದರು. ಇನ್ನು ಅನುರಾಗ್ ಪಾತ್ರದಲ್ಲಿ ಹೇಗೆ ಮಿಂಚುತ್ತಾರೋ ವಿಜಯ್ ಸೂರ್ಯ ಕಾದು ನೋಡಬೇಕು.

Follow Us:
Download App:
  • android
  • ios