ಪ್ರೇಮಿಗಳ ದಿನದಂದೇ ದಾಂಪತ್ಯಕ್ಕೆ ಕಾಲಿಟ್ಟ 'ಅಗ್ನಿಸಾಕ್ಷಿ'ಯ ಸಿದ್ಧಾರ್ಥ!
ಸನ್ನಿಧಿ, ಸಿದ್ಧಾರ್ಥನೆಂದರೆ ಟಿವಿ ಪ್ರಿಯರಿಗೆ ಎಲ್ಲಿಲ್ಲದ ವ್ಯಾಮೋಹ. ಆ ಮುದ್ದು ಮುಖದ, ಗುಳಿಕೆನ್ನೆಯ ಚೆಲುವನ ಬಗ್ಗೆ ಸಾಕಷ್ಟು ಊಹಾಪೋಹಗಳಿದ್ದವು. ಸನ್ನಿಧಿಯನ್ನೇ ನಿಜ ಜೀವನದಲ್ಲಿಯೂ ವರಿಸುತ್ತಾರೆಂಬ ಸುದ್ದಿಗಳು ಹರಿದಾಡುತ್ತಿದ್ದವು. ಆದರೆ, ಈ ಎಲ್ಲವಕ್ಕೂ ಇದೀಗ ತೆರೆ ಬಿದ್ದಿದೆ. ಪ್ರೇಮಿಗಳ ದಿನದಂದೇ ಸೂರ್ಯ ಸಪ್ತಪದಿ ತುಳಿದಿದ್ದಾರೆ. ಯಾರೂ ಆ ಚೆಲುವೆ?
'ಅಗ್ನಿಸಾಕ್ಷಿ' ಖ್ಯಾತಿಯ ವಿಜಯ್ ಸೂರ್ಯ ಸಂಬಂಧಿ ಚೈತ್ರಾರೊಂದಿಗೆ ಸಪ್ತಪದಿ ತುಳಿದಿದ್ದಾರೆ.
ಕಿರುತೆರೆಯ ಲವ್ ಬಾಯ್ ಮದುವೆಗೆ ಬಂಧು ಮಿತ್ರರು ಬಂದು ಹರಸಿದರು.
ಗುಳಿಕೆನ್ನೆಯ ಚೆಲುವನಿಗೆ ಸಿಕ್ಕಳು ಗುಳಿಕೆನ್ನೆಯ ಚೆಲುವೆ.
ಸೂರ್ಯ-ಚೈತ್ರಾಳಿಗೆ ತಾಳಿ ಕಟ್ಟಿದ ಶುಭ ವೇಳೆ.
ಮುದ್ದು ಮೊಗದ ಮದು ಮಗನಿಗೆ ಅರಿಷಿಣ ಶಾಸ್ತ್ರ.
ಪ್ರೇಮಿಗಳ ದಿನದಂದೇ ಒಳ್ಳೆ ಮಹೂರ್ತವೂ ಇದ್ದು, ಸಪ್ತಪದಿ ತುಳಿದಿದ್ದಾರೆ ಅಗ್ನಿಸಾಕ್ಷಿ ಹೀರೋ.
ನಟಿ ಹಿತಾ ಚಂದ್ರಶೇಖರ್ ಅವರೊಂದಿಗೆ ವಿಜಯ್ ಸೂರ್ಯ.