ಬಾಲಿವುಡ್ ನಟ ರಾಹುಲ್ ಬೋಸ್ ಕಳೆದ ಮೂರ್ನಾಲ್ಕು ದಿನಗಳಿಂದ ಟ್ರೆಂಡಿಂಗ್ ನಲ್ಲಿದ್ದಾರೆ. ಕೆಲದಿನಗಳ ಹಿಂದೆ ಹೊಟೇಲ್ ಮ್ಯಾರಿಯತ್ ನಲ್ಲಿ ಎರಡು ಬಾಳೆಹಣ್ಣು ತೆಗೆದುಕೊಂಡಿದ್ದಕ್ಕೆ 445 ರೂ ಬಿಲ್ ಮಾಡಿರುವುದು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿತ್ತು. ನೆಟ್ಟಿಗರು ಮಾರಿಯತ್ ಹೊಟೇಲನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಧಿಕ ಬಿಲ್ ಮಾಡಿದ್ದನ್ನು ಪ್ರಶ್ನಿಸಿದ್ದರು.

 

ಅತ್ತ ಸೋಷಿಯಲ್ ಮೀಡಿಯಾದಲ್ಲಿ ಎಲ್ಲರೂ ಹೊಟೇಲ್ ಮ್ಯಾರಿಯಟ್‌ನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರೆ ಇತ್ತ ತಾಜ್ ಹೊಟೇಲ್ ಸಂಸ್ಥಾಪಕ ದೀಪಕ್ ಶೆಣೈ ಹೊಸ ಅನೌನ್ಸ್ ಮೆಂಟ್ ಮಾಡಿರುವುದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತಾಜ್ ಗೆ  ಬರುವ ಅತಿಥಿಗಳಿಗೆ ಆಯಾ ಸೀಸನ್ ನಲ್ಲಿ ಸಿಗುವ ಹಣ್ಣುಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಆಫರ್ ನೀಡಿದ್ದಾರೆ. 

ದೇಶದ ಬಹುತೇಕ ಪಂಚತಾರಾ ಹೊಟೇಲ್ ಗಳಲ್ಲಿ ಈ ರೀತಿಯ ಪ್ರಾಕ್ಟೀಸ್ ಇದೆ.