ಮುಂಬೈ:  ಬಾಲಿವುಡ್ ಫಿಲ್ಮ್ ಮೇಕರ್  ಕರಣ್ ಜೋಹಾರ್ ನಿರ್ಮಿಸಿದ್ದ ಲಸ್ಟ್ ಸ್ಟೋರೀಸ್ ನಲ್ಲಿ ನಟಿಸಿದ್ದ ಕಿಯಾರ  ಅಡ್ವಾಣಿ ಹಾಗೂ ವಿಕ್ಕಿ ಕೌಶಾಲ್ ಬಗ್ಗೆ ಮತ್ತೊಂದು ಹೊಸ ಸಂಗತಿ  ಹೊರ ಬಿದ್ದಿದೆ.

ಈಗಾಗಲೇ ಜನ ಮೆಚ್ಚಿಕೊಂಡಿರುವ ಈ ಸೂಪರ್ ಕಪಲ್ ಇದೀಗ  ಮತ್ತೊಮ್ಮೆ ಸ್ಕ್ರೀನ್ ಮೇಲೆ ಬರಲು  ಸಜ್ಜಾಗಿದೆ. ಈ ಬಗ್ಗೆ ಇತ್ತೀಚೆಗಷ್ಟೇ  ಚಿತ್ರವೊಂದನ್ನು  ಹಂಚಿಕೊಂಡಿರುವ ರಾಜೀ ಸ್ಟಾರ್ ವಿಕ್ಕಿ  ಶೀಘ್ರದಲ್ಲೇ ಮತ್ತೆ  ಒಂದಾಗುತ್ತಿರುವುದಾಗಿ ತಿಳಿಸಿದ್ದರು.

 ವಿಕ್ಕಿ ಹಾಗೂ ಕಿಯಾರ ಒಂದು ವಾಣಿಜ್ಯಿಕ  ಹೌಸಿಂಗ್ ಆ್ಯಪ್  ಒಂದರ ಜಾಹಿರಾತಿನಲ್ಲಿ  ಕಾಣಿಸಿಕೊಳ್ಳಲಿದ್ದಾರೆ. 

ಆ್ಯಪ್ ಪ್ರಮೋಶನ್ ಗಾಗಿ ಯಂಗ್ ಹಾಗೂ ಸೂಪರ್ ಫೇಸ್ ಗಳಿಗಾಗಿ ಹುಡುಕಾಡುತ್ತಿದ್ದ ಈ  ಕಂಪನಿಗೆ ಈ ಜೋಡಿ ಕಣ್ಣಿಗೆ ಬಿದ್ದಿದ್ದು ಕ್ಯಾಂಪೇನ್ ಗಾಗಿ ಆಯ್ಕೆ ಮಾಡಿಕೊಂಡಿದೆ. ಶೀಘ್ರದಲ್ಲೇ ಇದಕ್ಕೆ ಫೋಟೊ ಶೂಟ್ ಕೂಡ ನಡೆಯಲಿದೆ.