ಸಾಹಿತ್ಯ ಕ್ಷೇತ್ರದಿಂದ ಎಸ್.ಜಿ. ಸಿದ್ದರಾಮಯ್ಯ, ಮೀನಾಕ್ಷಿ ಬಾಳಿ, ಕೆ.ಬಿ. ಸಿದ್ಧಯ್ಯ, ಮೂಡ್ನಾಕೂಡು ಚಿನ್ನಸ್ವಾಮಿ, ಸರಜೂ ಕಾಟ್ಕರ್, ರಹಮತ್ ತರೀಕೆರೆ ಹಾಗೂ ವಸುಂಧರಾ ದೊರೆಸ್ವಾಮಿ (ನೃತ್ಯ), ನಾಗೇಶ ಹೆಗಡೆ (ಮಾಧ್ಯಮ),

ಬೆಂಗಳೂರು(ಅ.8): ಕನ್ನಡ ರಾಜ್ಯೋತ್ಸವದ 2016ನೇ ಸಾಲಿನ ಪ್ರಶಸ್ತಿಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಆಯ್ಕೆ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅಧ್ಯಕ್ಷತೆಯಲ್ಲಿ 13 ಮಂದಿ ಸದಸ್ಯರ ಸಲಹಾ ಸಮಿತಿ ರಚಿಸಲಾಗಿದೆ. ಸಮಿತಿ ಸದಸ್ಯರಾಗಿ ಡಾ. ಅಂಬಳಿಕೆ ಹಿರಿಯಣ್ಣ (ಜಾನಪದ), ಡಾ. ನಾರಾಯಣಗೌಡ (ಕೃಷಿ), ಸಾಹಿತ್ಯ ಕ್ಷೇತ್ರದಿಂದ ಎಸ್.ಜಿ. ಸಿದ್ದರಾಮಯ್ಯ, ಮೀನಾಕ್ಷಿ ಬಾಳಿ, ಕೆ.ಬಿ. ಸಿದ್ಧಯ್ಯ, ಮೂಡ್ನಾಕೂಡು ಚಿನ್ನಸ್ವಾಮಿ, ಸರಜೂ ಕಾಟ್ಕರ್, ರಹಮತ್ ತರೀಕೆರೆ ಹಾಗೂ ವಸುಂಧರಾ ದೊರೆಸ್ವಾಮಿ (ನೃತ್ಯ), ನಾಗೇಶ ಹೆಗಡೆ (ಮಾಧ್ಯಮ), ಪಿ.ಎಸ್. ಕಡೇಮನಿ (ಚಿತ್ರಕಲೆ), ನಾ. ದಾಮೋಧರ ಶೆಟ್ಟಿ (ರಂಗಭೂಮಿ), ಡಾ. ಜಯದೇವಿ ಜಂಗಮಶೆಟ್ಟಿ (ಸಂಗೀತ) ಆಯ್ಕೆ ಗೊಂಡಿದ್ದಾರೆ. ಈ ಸಮಿತಿ ಶಿಾರಸು ಮಾಡಿದ ಹೆಸರನ್ನು ಮುಖ್ಯಮಂತ್ರಿ ಅಧ್ಯಕ್ಷತೆಯ ಸಮಿತಿ ಚರ್ಚಿಸಿ ಅಂತಿಮಗೊಳಿಸುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred