ಕಿಚ್ಚ ಸುದೀಪ್ ಸಾರಥ್ಯದಲ್ಲಿ ನಡೆಯುತ್ತಿರುವ  ಬಿಗ್ ಬಾಸ್ ಕನ್ನಡ ಸೀಸನ್ 6 ಕಾರ್ಯಕ್ರಮ ಸದ್ಯ 4 ವಾರ ಕಳೆದಿದೆ. ಆದ್ರೆ ಮೂರು ವಾರಗಳಲ್ಲಿ ಮೂವರು ಕಂಟೆಸ್ಟೆಂಟ್​ ಗಳು  ಎಲಿಮಿನೇಟ್ ಆಗಿದ್ದಾರೆ. ಇದೀಗ 4ನೇ ವಾರದಲ್ಲೂ ಒಬ್ಬರು ಬಿಗ್ ಬಾಸ್ ಮನಯಿಂದ ಹೊರಬಂದಿದ್ದಾರೆ. ಹಾಗಾದ್ರೆ 4ನೇ ವಾರದ 4ನೇ ವಿಕೆಟ್ ಯಾರು?

ಕಿಚ್ಚ ಸುದೀಪ್ ಸಾರಥ್ಯದಲ್ಲಿ ನಡೆಯುತ್ತಿರುವ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್ ಸೀಜನ್-6 ಸದ್ಯ 4ನೇ ವಾರ ಪೂರ್ಣಗೊಳಿಸಿದೆ. ಆದ್ರೆ, ಪ್ರತಿವಾರ ಒಬ್ಬ ಕಂಟೆಸ್ಟೆಂಟ್​ ಬಿಗ್ ಬಾಸ್ ಮನೆಯಿಂದ ಹೊರ ಹೋಗಬೇಕಾಗುತ್ತದೆ.

ಅದ್ರಂತೆ ಮೊದಲ ವಾರದಲ್ಲಿ ಕ್ರಿಕೆಟರ್ ರಕ್ಷಿತಾ ರೈ ಔಟ್ ಆಗಿದ್ದು, 2ನೇ ವಾರ ಬಿಗ್ ಬಾಸ್ ಮನೆಯಿಂದ ಸಾಫ್ಟ್ ವೇರ್ ಹುಡುಗಿ ರೀಮಾ ಎಲಿಮಿನೇಟ್ ಆಗಿದ್ದರು. ಇನ್ನು 3ನೇ ವಾರದ ಬಿಗ್ ಬಾಸ್ ಮನೆಯಿಂದ ನಟಿ ಹಾಗೂ ನೃತ್ಯ ಸಂಯೋಜಕಿ ಸ್ನೇಹ ಆಚಾರ್ಯ ಎಲಿಮಿನೇಟ್ ಆಗಿದ್ದರು.

ಕನ್ನಡ ಬಿಗ್‌ಬಾಸ್‌ ದಿಟ್ಟ ನಿರ್ಧಾರ, ಮನೆ ಪ್ರವೇಶ ಮಾಡಿದ ಗೇ!

ಆದ್ರೆ, ಇದೀಗ 4ನೇ ವಾರ ಮನೆಯಿಂದ ತೃತೀಯ ಲಿಂಗಿ ಆಡಮ್ ಪಾಶಾ ಹೊರ ಬಿದ್ದಿದ್ದಾರೆ. ಇದೇ ಮೊದಲ ಬಾರಿಗೆ ಕನ್ನಡದ ರಿಯಾಲಿಟಿ ಶೋ ಒಂದರಲ್ಲಿ ತೃತೀಯ ಲಿಂಗಿ ಒಬ್ಬರು ಇದೇ ಮೊದಲ ಬಾರಿಗೆ ಸ್ಪರ್ಧೆ ಮಾಡಿದ್ದರು.

ಬಿಗ್​​ ಬಾಸ್​-6ನ 9ನೇ ಕಂಟೆಸ್ಟೆಂಟ್​ ಆಗಿ ಎಂಟ್ರಿ ಆಡಮ್ ಪಾಶಾ ಎಂಟ್ರಿ ಕೊಟ್ಟಿದ್ದು, 4 ವಾರಗಳ ಕಾಲ ಬಿಗ್​ ಬಾಸ್​ ಮನೇಲಿದ್ದ ಆಡಮ್ ಪಾಶಾ, ಪ್ರಮುಖ ಆಕರ್ಷಣೀಯ ಆಗಿದ್ದರು. ಆಡಮ್ ​ಪಾಶಾ ಹುಟ್ಟಿದ್ದು ಬೆಳದಿದ್ದು ಎಲ್ಲಾ ಬೆಂಗಳೂರಿನಲ್ಲಿ. 

ಬಿಗ್ ಬಾಸ್ ಸ್ಪರ್ಧಿ ಆಡಂ ಪಾಶಾ ಫೋಟೋ ಗ್ಯಾಲರಿ

ಆಡಮ್ ತಾನು 19ನೇ ವರ್ಷಕ್ಕೆ ಕಾಲಿಟ್ಟಾಗ ಅವರಿಗೆ ತಾನು ಒಬ್ಬ ತೃತೀಯ ಲಿಂಗಿ ಎಂಬುದು ತಿಳಿದಿದ್ದು, ನಂತರ ಹಾಗೇ ಬೆಳೆದುಕೊಂಡು ಬಂದಿದ್ದಾರೆ. 

ತೃತೀಯ ಲಿಂಗಿ ಎಂದರೆ ಕೀಳರಿಮೆ ಇರುವ ಸಂದರ್ಭದಲ್ಲಿ ಅದನ್ನ ಲಕ್ಷಕ್ಕೆ ತೆಗೆದುಕೊಳ್ಳದೇ ಚಾಲೆಂಜ್​ ಆಗಿ ಸ್ವೀಕರಿಸಿ ಒಬ್ಬ ಅಂತಾರಾಷ್ಟ್ರೀಯ ಮಟ್ಟದ ಡ್ಯಾನ್ಸರ್​ ಆಗಿ ಬೆಳೆದಿದ್ದಾರೆ.