ಪವರ್ ಸ್ಟಾರ್ ಪುನೀತ್ ಜೊತೆ ನಟಿಸಿದ ನಟಿ ಅದಾ ಶರ್ಮಾ ಈಗ ಬೀದಿಗೆ ಬಂದಿದ್ದಾರೆ. ಅವರ ಸ್ಥಿತಿ ನೋಡಿದ್ರೆ ಅಯ್ಯೋ ಪಾಪ ಎನಿಸುತ್ತದೆ. 

ಬೆಂಗಳೂರು (ಆ. 24): ಪವರ್ ಸ್ಟಾರ್ ಪುನೀತ್ ಜೊತೆ ನಟಿಸಿದ ನಟಿ ಅದಾ ಶರ್ಮಾ ಈಗ ಬೀದಿಗೆ ಬಂದಿದ್ದಾರೆ. 

ಪುನೀತ್ ಜೊತೆ ರಣವಿಕ್ರಮದಲ್ಲಿ ನಟಿಸಿದ್ದ ನಟಿ ಅದಾ ಶರ್ಮಾ ಬೀದಿ ಬದಿಯಲ್ಲಿ ತರಕಾರಿ ಮಾರುತ್ತಿದ್ದಾರೆ. ಇವರು ತರಕಾರಿ ಮಾರುತ್ತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಫೋಟೋ ನೋಡಿದ್ರೆ ಯಾರಿಗಾದರೂ ಅಯ್ಯೋ ಎನಿಸುತ್ತದೆ. ಛೇ. ಇಂಥಾ ಪರಿಸ್ಥಿತಿ ಬರಬಾರದಿತ್ತು ಅಂತ ಅನಿಸೋದು ಸಹಜ. 

View post on Instagram
View post on Instagram

ಬಿಕಿನಿ ತೊಟ್ಟರೂ ಪರ್ಫೆಕ್ಟ್ ಆಗಿ ಕಾಣೋ ಗುಟ್ಟು 'ಅದಾ'?


ಒಂದು ನಿಮಿಷ ನಿಲ್ಲಿ. ಫೋಟೋ ನೋಡಿ ದಂಗಾಗಬೇಡಿ. ಅದಾ ಶರ್ಮಾ ಸದ್ಯದಲ್ಲೇ ಹಾಲಿವುಡ್ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕಾಗಿ ಈ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.