ತಾಪ್ಸಿ ಪನ್ನು ಹಾರ್ಡ್ ವರ್ಕ್ ಮಾಡ್ತಾ ಇರೋದು ಯಾಕೆ?

First Published 22, Feb 2018, 2:49 PM IST
Actress Tapsi Pannu Hard Work
Highlights

‘ನಾನು ದೊಡ್ಡ ಸ್ಟಾರ್ ಅಲ್ಲ. ಈಗಲೂ ಶ್ರಮಜೀವಿ. ಮುಂದೆಯೂ ಇದೇ ರೀತಿ ಶ್ರಮಜೀವಿಯಾಗಿಯೇ ಇರುವೆ. ಪ್ರೇಕ್ಷಕರು ಯಾವಾಗ ಇದು ತಾಪ್ಸಿ ಪನ್ನು ಸಿನಿಮಾ ಎನ್ನುವ ಒಂದೆ ಕಾರಣಕ್ಕೆ ಸಿನಿಮಾ ನೋಡಲು ಬರುತ್ತಾರೋ ಆಗ ನನ್ನ ಶ್ರಮಕ್ಕೆ ನಿಜವಾದ ಪ್ರತಿಫಲ ಸಿಕ್ಕಂತೆ ಆಗುತ್ತದೆ’. ಹೀಗೆ ಹೇಳಿದ್ದು ರಾಷ್ಟ್ರೀಯ ಮ್ಯಾಗ್‌'ಜೀನ್ ವತಿಯಿಂದ ‘ಮೋಸ್ಟ್ ಪವರ್ ಫುಲ್ ವುಮೆನ್ ಆಫ್ ದಿ ಇಯರ್’ ಪ್ರಶಸ್ತಿ ಪಡೆದುಕೊಂಡಿರುವ ತಾಪ್ಸಿ ಪನ್ನು ಮಾತು.

ಬೆಂಗಳೂರು (ಫೆ.22): ‘ನಾನು ದೊಡ್ಡ ಸ್ಟಾರ್ ಅಲ್ಲ. ಈಗಲೂ ಶ್ರಮಜೀವಿ. ಮುಂದೆಯೂ ಇದೇ ರೀತಿ ಶ್ರಮಜೀವಿಯಾಗಿಯೇ ಇರುವೆ. ಪ್ರೇಕ್ಷಕರು ಯಾವಾಗ ಇದು ತಾಪ್ಸಿ ಪನ್ನು ಸಿನಿಮಾ ಎನ್ನುವ ಒಂದೆ ಕಾರಣಕ್ಕೆ ಸಿನಿಮಾ ನೋಡಲು ಬರುತ್ತಾರೋ ಆಗ ನನ್ನ ಶ್ರಮಕ್ಕೆ ನಿಜವಾದ ಪ್ರತಿಫಲ ಸಿಕ್ಕಂತೆ ಆಗುತ್ತದೆ’. ಹೀಗೆ ಹೇಳಿದ್ದು ರಾಷ್ಟ್ರೀಯ ಮ್ಯಾಗ್‌'ಜೀನ್ ವತಿಯಿಂದ ‘ಮೋಸ್ಟ್ ಪವರ್ ಫುಲ್ ವುಮೆನ್ ಆಫ್ ದಿ ಇಯರ್’ ಪ್ರಶಸ್ತಿ ಪಡೆದುಕೊಂಡಿರುವ ತಾಪ್ಸಿ ಪನ್ನು ಮಾತು.

‘ನಾನು ಎಂದಿಗೂ ದೊಡ್ಡ ಸ್ಟಾರ್ ಎಂದುಕೊಂಡು ಬೀಗುವುದಿಲ್ಲ. ಕಠಿಣ ಶ್ರಮದೊಂದಿಗೆ ಎಲ್ಲಾ ರೀತಿಯ ಪಾತ್ರಗಳಲ್ಲಿಯೂ ನಟನೆ ಮಾಡುತ್ತೇನೆ. ಹಾರರ್, ಕಾಮಿಡಿ, ಆಕ್ಷನ್ ಜೊತೆಗೆ ರೊಮ್ಯಾಂಟಿಕ್  ಚಿತ್ರಗಳಲ್ಲಿ ಕಾಣಿಸಿಕೊಂಡು ಒಳ್ಳೆಯ ಪ್ರದರ್ಶನ ನೀಡಬೇಕು ಎನ್ನುವ ಹೆಬ್ಬಯಕೆ ಇದೆ. ಇದರ ಜೊತೆಗೆ ಮಹಿಳಾ ಪ್ರಧಾನವಾದ ಚಿತ್ರದಲ್ಲಿ ಬಣ್ಣ ಹಚ್ಚಬೇಕು. ಅದಕ್ಕಾಗಿಯೇ ಈಗಿನಿಂದಲೇ ಹೆಚ್ಚು ಪರಿಶ್ರಮ ಹಾಕುತ್ತಿದ್ದೇನೆ. ನನ್ನ ಪಾತ್ರಕ್ಕೆ ನ್ಯಾಯ ಒದಗಿಸಲು ಏನೇ ಸಾಹಸ ಬೇಕಿದ್ದರೂ ಮಾಡುತ್ತೇನೆ’ ಎಂದಿರುವ ತಾಪ್ಸಿ ಮಾತು ಈಗ ಉತ್ಸಾಹಿ ನಿರ್ದೇಶಕರನ್ನು ತಾಪ್ಸಿಯತ್ತ ತಿರುಗಿ ನೋಡುವಂತೆ ಮಾಡಿದೆ. ಅಲ್ಲದೇ ರೊಮ್ಯಾಂಟಿಕ್, ಲವ್, ಆಕ್ಷನ್ ಚಿತ್ರಗಳಿಗಾಗಿ ಸಾಕಷ್ಟು ತಯಾರಿ ನಡೆಸುತ್ತಿದ್ದೇನೆ ಎಂದು ಹೇಳಿರುವುದರಿಂದ ಮುಂದಿನ ದಿನಗಳಲ್ಲಿ ತಾಪ್ಸಿ ಹೊಸ ಅವತಾರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸಣ್ಣ ಸುಳಿವು ಸಿಕ್ಕಂತಾಗಿದೆ. ಮಾಡೆಲ್ ಆಗಿ, ನಟಿಯಾಗಿ ಸೈ ಎನ್ನಿಸಿಕೊಂಡಿರುವ ತಾಪ್ಸಿ ಮತ್ತಷ್ಟು ಸಿದ್ಧತೆಯೊಂದಿಗೆ ಹೊಸ ಅವತಾರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

loader