ಈ ಚಿತ್ರದಲ್ಲಿ ಶ್ರುತಿ ಹರಿಹರನ್‌ ನಟಿಸಿದ್ದಾರೆ. ಆದರೆ ಫಸ್ಟ್‌ ಲುಕ್‌ನಲ್ಲಿ ಅವರಿಲ್ಲ. ಅದರ ಬದಲು ಕಲರ್‌ ಕಲರ್‌ ಡ್ರೆಸ್‌ನಲ್ಲಿ ಸಾಧು ಕೋಕಿಲ, ರವಿಶಂಕರ್‌ ಗೌಡ, ಚಿಕ್ಕಣ್ಣ , ಕುರಿ ಪ್ರತಾಪ್‌ ಕಾಣಿಸಿಕೊಂಡಿದ್ದಾರೆ.

‘ಪಟಾಕಿ ಸಿನಿಮಾ ಆದ ಮೇಲೆ ಅದೇ ನಿರ್ಮಾಪಕ ಎಸ್‌ ವಿ ಬಾಬು ಅವರ ನಿರ್ಮಾಣದಲ್ಲಿ ನಾನು ಕೈಗೆತ್ತಿಕೊಂಡ ಸಿನಿಮಾ ಇದು. ವಿಶೇಷವಾಗಿದೆ. ಕಾಮಿಡಿ ಹಾರರ್‌ ಸಿನಿಮಾ. ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದೆ. ಈ ನಾಲ್ಕು ಮಂದಿಯ ಮೇಲೆ ಕತೆ ಸಾಗುತ್ತದೆ. ಆದರೆ, ಬೇರೆ ಬೇರೆ ಪಾತ್ರಗಳು ಇಲ್ಲಿವೆ. ನಾಯಕ, ನಾಯಕಿ ಅನ್ನುವ ಪಾತ್ರಗಳು ಇಲ್ಲ. ಎಲ್ಲ ಕಲಾವಿದರು ಮಹತ್ತರವಾದ ಪಾತ್ರಗಳಲ್ಲೇ ಮಾಡಿದ್ದಾರೆ’ ಎನ್ನುತ್ತಾರೆ ನಿರ್ದೇಶಕ ಮಂಜು ಸ್ವರಾಜ್‌.

ಯಾರು ಈ ಶೃತಿ ಹರಿಹರನ್?