ಕುದುರೆ ಸವಾರಿ ಕಲಿತ ಶಾನ್ವಿ ಶ್ರೀ ವಾಸ್ತವ್!

Actress Shanvi Srivastava learn horse riding
Highlights

ಶಾನ್ವಿ ಶ್ರೀವಾಸ್ತವ್ ಕನ್ನಡದ ಬಹು ಬೇಡಿಕೆಯ ನಟಿ. ಸದ್ಯಕ್ಕೀಗ ರಕ್ಷಿತ್ ಶೆಟ್ಟಿ ಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಈ ನಡುವೆ ಶಾನ್ವಿ ಹಾರ್ಸ್ ರೈಡಿಂಗ್ ಕಲಿಯುತ್ತಿದ್ದಾರೆ. 

ಬೆಂಗಳೂರು (ಜು. 16): ಶಾನ್ವಿ ಶ್ರೀವಾಸ್ತವ್ ಕನ್ನಡದ ಬಹು ಬೇಡಿಕೆಯ ನಟಿ. ಸದ್ಯಕ್ಕೀಗ ರಕ್ಷಿತ್ ಶೆಟ್ಟಿ ಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ.

ಈ ನಡುವೆ ಶಾನ್ವಿ ಹಾರ್ಸ್ ರೈಡಿಂಗ್  ಕಲಿಯುತ್ತಿದ್ದಾರೆ. ‘ಅವನೇ ಶ್ರೀಮನ್ನಾರಾಯಣ’ ಚಿತ್ರದ  ಪಾತ್ರಕ್ಕಾಗಿ ಈ ತರಬೇತಿಯೋ ಅಥವಾ ಹೊಸ ಸಿನಿಮಾದ ತಯಾರಿಯೋ ಎನ್ನುವುದು ಗೊತ್ತಾಗಿಲ್ಲ. ಆದ್ರೆ, ಇದು ಸುಮ್ಮನೆ ಕಲಿಕೆಗಾಗಿ ಎನ್ನುತ್ತಾರೆ ಶಾನ್ವಿ.

‘ಆ್ಯಕ್ಟರ್ ಅಂತೆನಿಸಿಕೊಂಡಾಗ ಎಲ್ಲ ತರಹದ ಕಲಿಕೆ  ಅಗತ್ಯ. ನನಗೆ ಮೊದಲಿನಿಂದಲೂ ಈ ತರಹದ ಸಾಹಸದ  ಹುಚ್ಚು. ಕಾರು, ಬೈಕು ಓಡಿಸುವ ಹಾಗೆಯೇ ಹಾರ್ಸ್ ರೈಡಿಂಗ್ ಮಾಡ್ಬೇಕು ಅನ್ನೋ ಆಸೆ. ಅದಕ್ಕಾಗಿಯೇ ಈಗ ತರಬೇತಿ ಪಡೆಯುತ್ತಿದ್ದೇನೆ. ಎರಡು ದಿನಗಳ ಮಟ್ಟಿಗೆ ಈಗ  ತರಬೇತಿ ನಡೆದಿದೆ. ಇಲ್ಲಿಯೇ ಸಹಕಾರ ನಗರದಲ್ಲಿರುವ  ಹಾರ್ಸ್ ರೈಡಿಂಗ್ ತರಬೇತಿ ಕೇಂದ್ರದಲ್ಲಿ ಅಭ್ಯಾಸ ನಡೆದಿದೆ. ಇನ್ನು 10 ದಿನಗಳು ಬಾಕಿ ಉಳಿದಿವೆ.

ಹಾರ್ಸ್ ರೈಡಿಂಗ್ ಕಲಿಕೆ ಅಷ್ಟು ಸುಲಭವಾದದ್ದಲ್ಲ ಅನ್ನೋದು ನನಗೆ ಈಗ ಗೊತ್ತಾಗುತ್ತದೆ. ಕುದುರೆಗಳ ಮನಸ್ಥಿತಿ, ಪರಿಸ್ಥಿತಿ ಅಧ್ಯಯನ ಮಾಡಿಕೊಂಡೇ ತರಬೇತಿ ಶುರು ಮಾಡಬೇಕು. ಏನಾದ್ರೂ ಯಾಮಾರಿ ರೈಡಿಂಗ್ ಮಾಡಲು ಹೋದ್ರೆ, ಅವು ಸಿಟ್ಟು ಬಂದು ಬೇಸಾಕುವುದು ಗ್ಯಾರಂಟಿ. ಆ ಭಯದಲ್ಲೇ ಕಲಿಕೆ ನಡೆದಿದೆ. ಆದ್ರೂ ಖುಷಿ ಆಗುತ್ತಿದೆ’ ಎನ್ನುತ್ತಾರೆ ಶಾನ್ವಿ ಶ್ರೀವಾಸ್ತವ್

loader