ಬಂಡೀಪುರದಲ್ಲಿ ಸಸಿ ನೆಡಲು ಮುಂದಾದ ಸಂಯುಕ್ತಾ ಹೊರನಾಡು
ಬಂಡೀಪುರದಲ್ಲಿ ಸಸಿ ನೆಡಲು ಮುಂದಾದ ಸಂಯುಕ್ತಾ ಹೊರನಾಡು | ಈಗಾಗಲೇ 1 ಲಕ್ಷ ಸೀಡ್ ಬಾಲ್ ತಯಾರಿಕೆ |
ನಟಿ ಸಂಯುಕ್ತಾ ಹೊರನಾಡು ನಟನೆ, ಸಿನಿಮಾಗಳಿಗಿಂತ ಹೆಚ್ಚಾಗಿ ಸೋಷಿಯಲ್ ವರ್ಕ್ ನಿಂದನೇ ಹೆಚ್ಚು ಸುದ್ದಿಯಾಗುತ್ತಿರುತ್ತಾರೆ.
ಪರಿಸರ ಪ್ರೇಮಿಯಾಗಿರುವ ಸಂಯುಕ್ತಾ ಹೊರನಾಡು ಆಗಾಗ ಸಸಿಗಳನ್ನು ನೆಡುವುದು, ಪರಿಸರ ಜಾಗೃತಿ ಮೂಡಿಸುವ ಕೆಲಸಗಳನ್ನು ಮಾಡುತ್ತಿರುತ್ತಾರೆ. ಇದೀಗ ಬಂಡೀಪುರ ಅಭಯಾರಣ್ಯದ ಸುತ್ತಮುತ್ತಲಿನ ಪ್ರದೇಶದಲ್ಲಿ ಸೀಡ್ ಬಾಲ್ ಹಾಕುವ ಮೂಲಕ ಗಿಡಗಳನ್ನು ಬೆಳೆಸಿ ಪರಿಸರ ಸಂರಕ್ಷಣೆಗೆ ಮುಂದಾಗಿದ್ದಾರೆ. ಇದಕ್ಕೆ ಅನೇಕರು ಸಾಥ್ ನೀಡಿದ್ದಾರೆ.
‘ಏಕಪತ್ನಿಯಾಗಿರುವುದು ಆಯ್ಕೆಯಾಗಿರಬೇಕೆ ವಿನಃ ಬಲವಂತವಾಗಬಾರದು’
ಇತ್ತೀಚಿಗೆ ಬಂಡೀಪುರ ಅಭಯಾರಣ್ಯಕ್ಕೆ ಬೆಂಕಿ ಬಿದ್ದು ಸಾಕಷ್ಟು ಎಕರೆ ಪ್ರದೇಶ ಬೆಂಕಿಗಾಹುತಿಯಾಗಿತ್ತು. ಅರಣ್ಯ ಇಲಾಖೆ ಅಧಿಕಾರಿಗ ಳ ಜೊತೆ ಚರ್ಚಿಸಿ ಅಭಯಾರಣ್ಯದ ಹೊರ ವಲಯದಲ್ಲಿ ಗಿಡಗಳನ್ನು ಬೆಳೆಸಲು ಪ್ಲಾನ್ ಮಾಡಿದ್ದಾರೆ. ಹಾಗಾಗಿ ಬೇರೆ ಬೇರೆ ತಳಿಯ ಬೀಜಗಳನ್ನು ಹೊಂದಿರುವ ಸೀಡ್ ಬಾಲ್ ತಯಾರಿಸಲಾಗಿದೆ ಎಂದು ಸಂಯುಕ್ತಾ ಹೇಳಿದ್ದಾರೆ.
‘ಆಡೈ’ ಚಿತ್ರದ ಬೆತ್ತಲೆ ಗುಟ್ಟು ರಟ್ಟು ಮಾಡಿದ ಅಮಲಾ ಪೌಲ್
ಸಂಯುಕ್ತಾ ಕೆಲದಿನಗಳ ಹಿಂದೆ ಸೀಡ್ ಬಾಲ್ ತಯಾರಿಸುತ್ತಿದ್ದೇವೆ. ಆಸಕ್ತಿ ಇದ್ದವರು ಭಾಗವಹಿಸಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದರು. ಅದಕ್ಕೆ ಜನರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸುಮರು 1 ಲಕ್ಷ ಸೀಡ್ ಬಾಲ್ ತಯಾರಿಸಲಾಗಿದೆ ಎಂದು ಸಂಯುಕ್ತಾ ಬರೆದುಕೊಂಡಿದ್ದಾರೆ.