Asianet Suvarna News Asianet Suvarna News

ಕಂದ ಬಂದರೆ ಕೆಡವುದು ಅಂದ: ಬಾಣಂತಿ ಸಂಕಷ್ಟ ಕೇಳಿರಿ ಸಮೀರಾ ಬಾಯಿಂದ

ಕುಟುಂಬಕ್ಕೆ ಹೊಸ ಅತಿಥಿ ಆಗಮನದ ಸಂತಸದಲ್ಲಿರುವ ಬಾಲಿವುಡ್ ನಟಿ ಸಮೀರಾ ರೆಡ್ಡಿ ಹಾಗೂ ಪತಿ ಅಕ್ಷಯ್ ತಮ್ಮ ಪೇರೆಂಟಿಂಗ್ ಜರ್ನಿ ಬಗ್ಗೆ ಮಾತನಾಡುತ್ತಲೇ ಇದ್ದಾರೆ. ಪೋಸ್ಟ್ ಪ್ರೆಗ್ನೆನ್ಸಿ ದೇಹದಲ್ಲಿ ತರೋ ಬದಲಾವಣೆ, ಸೌಂದರ್ಯಕ್ಕೆ ತರೋ ಕುತ್ತಿನ ಬಗ್ಗೆಯೂ ಹೇಳಿ ಫೋಟೋ ಅಪ್ಲೋಡ್ ಮಾಡಿದ್ದಾರೆ ಈಗ.

Actress Sameera Reddy c section pregnancy journey post on instagram
Author
Bangalore, First Published Jul 19, 2019, 3:40 PM IST
  • Facebook
  • Twitter
  • Whatsapp

ಮುಖದಲ್ಲಿ ತುಸು ಕಲೆಯಾದರೂ, ಮುಚ್ಚಿಕೊಳ್ಳಲು ಹರಸಾಹಸ ಮಾಡುವ ಬಾಲಿವುಡ್ ನಟಿಯರ ನಡುವೆ ಸಮೀರಾ ರೆಡ್ಡಿ ವಿಭಿನ್ನ ಎನಿಸುತ್ತಾರೆ. ಪ್ರಸವದ ನಂತರ ಹಾಳಾದ ಸೌಂದರ್ಯವನ್ನೇ ಜಗತ್ತಿಗೇ ತೋರಿಸಿ, ಇವೆಲ್ಲ ಸಹಜ ಬಿಡಿ ಎಂದಿದ್ದಾರೆ. 'ಬಾಣಂತಿ ಪುರಾಣ' ಹೇಳಲು ಆರಂಭಿಸಿದ ಸಮೀರಾ, ಮುಚ್ಚಿಡಬೇಕಾದ್ದನ್ನು, ಬಿಚ್ಚಿ ತೋರಿಸಿ ನಟಿಯಾದರೇನು, ಪ್ರಕೃತಿ ಮುಂದೆ ಎಲ್ಲರೂ ಒಂದೇ ಎಂದೂ ಸಾರಿ ಸಾರಿ ಹೇಳುತ್ತಿದ್ದಾರೆ.

ಟಿಪಿಕಲ್ ಆಗಿ ಸೀಮಂತ ಮಾಡ್ಕೊಂಡು, ನೀರೊಳಗೆ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿಕೊಂಡ ಸಮೀರಾ, ಜುಲೈ 12ಕ್ಕೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಲಿಟಲ್ ಏಂಜೆಲ್ ಫೋಟೋ ರಿವೀಲ್ ಮಾಡಿಯೂ, ಅಭಿಮಾನಿಗಳಿಗೆ ತಮ್ಮ ಕುಟುಂಬದ ಸದಸ್ಯೆಯನ್ನು ಪರಿಚಯಿಸಿದ್ದಾರೆ.

ಲಿಟಲ್ ಏಂಜಲ್ ಫೋಟೋ ರಿವೀಲ್ ಮಾಡಿದ ಸಮೀರಾ ರೆಡ್ಡಿ

ಇದೀಗ ಸಮೀರಾ ಪ್ರಸವ ಅದರಲ್ಲಿಯೂ ಸಿ ಸೆಕ್ಷನ್ ನಂತರ ಕೆಡುವ ಹೊಟ್ಟೆಯ ಅಂಧದ ಫೋಟೋವನ್ನು ಪೋಸ್ಟ್ ಮಾಡಿದ್ದು, ವೈರಲ್ ಆಗುತ್ತಿದೆ. ಅದಕ್ಕೆ 'ನನ್ನು #Imperfectlyperfect ಅಭಿಯಾನದಲ್ಲಿ ಹೇಳಿಕೊಂಡಂತೆ ನನ್ನ ಪೋಸ್ಟ್ ಪ್ರೆಗ್ನೆನ್ಸಿ ಜರ್ನಿ ಬಗ್ಗೆ ನಿಮ್ಮೊಂದಿಗೆ ಹಂಚಿಕೊಳ್ಳುವೆ. c-section ಹೊಲಿಗೆಗಳು ತುಂಬಾ ನೋವು ಕೊಡುತ್ತಿದೆ. ರಾತ್ರಿ ನಿದ್ದೆ ಇಲ್ಲದೇ ಮಗಳಿಗೆ ಹಾಲು ಕುಡಿಸುವುದು ಸಹಜವಾಗಿದೆ. ಎಲ್ಲವೂ ದೇಹದ ಮೇಲಿನ ಒತ್ತೆಡವನ್ನು ಹೆಚ್ಚಿಸುತ್ತಿದೆ. ದೇಹ ಕುಗ್ಗುತ್ತಿದೆ,' ಎಂದು ಬರೆದುಕೊಂಡಿದ್ದಾರೆ.

 

 
 
 
 
 
 
 
 
 
 
 
 
 

As part of my #imperfectlyperfect campaign I promised I’d share my post partum journey so here goes. It’s really damn hard on the body when it’s a c section because the stitches hurt like mad. Nothing can ready you for the sleepless nights of endless feeding and your body just feels so out of whack it can really get you down. The tummy swelling takes a while to go and this is day 5 post delivery . Im thrilled to have my daughter in my arms but I can’t help but feel hormonally challenged because of all the changes. It all bounces back and that’s the silver lining ! #postpartum #keepingitreal #nofilter #positivebodyimage #postpregnancybody #postpregnancy #socialforgood #selflove #loveyourself #bodypositive #herewegoagain #imperfectlyperfect 🌈

A post shared by Sameera Reddy (@reddysameera) on Jul 18, 2019 at 12:42am PDT

ಹೊಟ್ಟೆ ಊತ ಕಡಿಮೆ ಆಗುವುದಕ್ಕೆ ಸಮಯ ಬೇಕು. ಈಗ ಅಪ್ಲೋಡ್ ಮಾಡಿರುವುದು ಮಗಳು ಹುಟ್ಟಿ 5 ದಿನಗಳ ನಂತರದ ಫೋಟೋ ಎಂದು ಹೇಳಿದ್ದಾರೆ. ಆ ಮೂಲಕ ತಾಯ್ತನ, ಕೆಡುವ ಅಂದ, ಪ್ರಕೃತಿಯ ಕೊಡುಗೆ ಎಲ್ಲವನ್ನೂ ಬಿಡಿ ಬಿಡಿಯಾಗಿ ಬಿಡಿಸಿ ಹೇಳಲು ಯತ್ನಿಸಿದ್ದಾರೆ ಬಾಲಿವುಡ್ ನಟಿ.

Follow Us:
Download App:
  • android
  • ios