ಎರಡನೇ ಮಗುವಿಗೆ ತಾಯಿಯಾದ ಸಂಭ್ರಮದಲ್ಲಿದ್ದಾರೆ ನಟಿ ಸಮೀರಾ ರೆಡ್ಡಿ. ಜು, 12 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗಳ ಮೊದಲ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. 

 

ಈ ಮುದ್ದು ಪುಟಾಣಿ ನನ್ನಲ್ಲಿನ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಿದೆ. ನನ್ನನ್ನು ನಾನು ಕಂಡುಕೊಳ್ಳುವಂತೆ ಮಾಡಿದವಳು. ತಾಯ್ತನವನ್ನು ಸೆಲಬ್ರೇಟ್ ಮಾಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. 

ಸಮೀರಾ ರೆಡ್ಡಿಗೆ ಈಗಾಗಲೇ ಒಬ್ಬ ಮಗನಿದ್ದಾನೆ. ಮೊದಲ ಬಾರಿ ಗರ್ಭಿಣಿಯಾದಾಗ ಜಗತ್ತು ಹೇಗೆ ನೋಡುತ್ತದೋ ಎಂಬ ಭಯದಿಂದ ಸಿನಿಮಾಗಳಿಂದ, ಸೋಷಿಯಲ್ ಮೀಡಿಯಾಗಳಿಂದ ದೂರವಾಗಿದ್ದರು. ನಂತರ ದಪ್ಪಗಾಗಿರುವುದ ಬಗ್ಗೆ, ಡಿಪ್ರೆಶ್ನನ್ ಬಗ್ಗೆ ಹೇಳಿಕೊಂಡಿದ್ದರು. 

ಎರಡನೇ ಪ್ರಗ್ನೆನ್ಸಿಯಲ್ಲಿ ಸಖತ್ ಸ್ಟ್ರಾಂಗ್ ಆಗಿದ್ದರು. ಬೇಬಿ ಬಂಪ್ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಅಂಡರ್ ವಾಟರ್ ಫೋಟೋಶೂಟ್ ಮಾಡಿಸಿಕೊಂಡು ಸುದ್ದಿಯಾಗಿದ್ದರು.