ಕರ್ನಾಟಕ ಕ್ರಶ್ ರಶ್ಮಿಕಾ ಮಂದಣ್ಣಗೆ ಬೋಲ್ಡ್ ಆದ ಪುಟ್ಟ ಪೋರನೊಬ್ಬ ’ನಿನ್ನನ್ನೇ ಮದುವೆ ಆಗುತ್ತೇನೆ’ ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಅದಕ್ಕೆ ರಶ್ಮಿಕಾ ಕೊಟ್ಟ ಕ್ಯೂಟ್ ಉತ್ತರ ಇಲ್ಲಿದೆ ನೋಡಿ.

ಕಿರಿಕ್ ಪಾರ್ಟಿ ಸಾನ್ವಿ ಸ್ಯಾಂಡಲ್ ವುಡ್ ಮಾತ್ರವಲ್ಲದೇ ಟಾಲಿವುಡ್ ನಲ್ಲೂ ಮೋಡಿ ಮಾಡಿದ್ದಾರೆ. ವಯಸ್ಸಿನ ಹಂಗಿಲ್ಲದೇ ಫ್ಯಾನ್ ಹೊಂದಿರುವ ರಶ್ಮಿಕಾಗೆ ಹೈದರಾಬಾದ್ ಪುಟ್ಟ ಹುಡುಗನೊಬ್ಬ ಮದುವೆ ಆಗುವುದಾಗಿ ಹೇಳಿಕೊಂಡಿದ್ದಾನೆ.

ಈ ಎಂಟು ವರ್ಷದ ಪುಟ್ಟ ಪೋರ ’ನೀನು ಯಾರನ್ನು ಮದ್ವೆ ಆಗ್ತೀಯಾ’ ಅಂತ ಕೇಳಿದ್ದಕ್ಕೆ ’ರಶ್ಮಿಕಾರನ್ನು ಮದುವೆ ಆಗುವೆ’ ಎಂದು ತೆಲುಗಿನಲ್ಲಿ ಮಾತನಾಡಿರುವುದನ್ನು ಟ್ವಿಟರ್ ನಲ್ಲಿ ಪ್ರವೀಣ್ ಎಂಬುವವರು ಶೇರ್ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಈ ಪೋರನಿಗೆ ಬೋಲ್ಡ್ ಆದ ರಶ್ಮಿಕಾ ಏನು ರಿಟ್ವೀಟ್ ಮಾಡಿದ್ದಾರೆ ಗೊತ್ತಾ?

Scroll to load tweet…

‘Awww..ನನ್ನ ಮದುವೆ ಆಗ್ತೀಯಾ....ಅಯ್ಯೋ ನನಗೆ ನಾಚಿಕೆ ಆಗ್ತಿದೆ. So cute! ಲವ್ ಯೂ ಟೂ ಮಚ್ ಲಿಟಲ್ ಮ್ಯಾನ್’ ಎಂದು ರಿಟ್ವೀಟ್ ಮಾಡಿ ಬರೆದುಕೊಂಡಿದ್ದಾರೆ.

Scroll to load tweet…