ಬಹುಭಾಷಾ ನಟಿ ರಂಭಾ ಗುಡ್ ನ್ಯೂಸ್ ಕೊಟ್ಟಿದ್ದಾರೆ. 3 ನೇ ಮಗುವಿನ ತಾಯಿಯಾಗಿದ್ದಾರೆ. ಗಂಡು ಮಗುವಿಗೆ ಜನ್ಮ ನೀಡಿರುವ ರಂಭಾ ಈ ಖುಷಿಯ ವಿಚಾರವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

ಬೆಂಗಳೂರು (ಸೆ. 26): ಬಹುಭಾಷಾ ನಟಿ ರಂಭಾ ಗುಡ್ ನ್ಯೂಸ್ ಕೊಟ್ಟಿದ್ದಾರೆ. 3 ನೇ ಮಗುವಿನ ತಾಯಿಯಾಗಿದ್ದಾರೆ. ಗಂಡು ಮಗುವಿಗೆ ಜನ್ಮ ನೀಡಿರುವ ರಂಭಾ ಈ ಖುಷಿಯ ವಿಚಾರವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

View post on Instagram

ರಂಭಾ ಉದ್ಯಮಿ ಇಂದ್ರನ್ ಪಥಮನಥಾನ್ ಎಂಬುವವರನ್ನು ವಿವಾಹವಾಗಿದ್ದಾರೆ. ಈ ದಂಪತಿಗಳಿಗೆ ಲಾನ್ಯಾ, ಸಾಶಾ ಎನ್ನುವ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಈಗ ಮೂರನೇ ಮಗುವಿಗೆ ಸೆ. 23 ರಂದು ಜನ್ಮ ನೀಡಿದ್ದಾರೆ ರಂಭಾ.

View post on Instagram

ರಂಭಾ ಬಹುಭಾಷಾ ನಟಿಯಾಗಿದ್ದು ಹಿಂದಿ, ಮಲಯಾಳಂ, ಕನ್ನಡ, ಬಂಗಾಳಿ ಚಿತ್ರದಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಸರ್ವರ್ ಸೋಮಣ್ಣ, ಕೆಂಪಯ್ಯ ಐಪಿಎಸ್, ಓ ಪ್ರೇಮವೇ, ಪಾಂಚಾಲಿ, ಭಾವ- ಭಾಮೈದ, ಪಾಂಡುರಂಗ ವಿಠಲ, ಅನಾಥರು ಚಿತ್ರದಲ್ಲಿ ಅಭಿನಯಿಸಿದ್ದಾರೆ. 

View post on Instagram

ವೈಯಕ್ತಿಕ ಕಾರಣಕ್ಕಾಗಿ ರಂಭಾ ಕೆಲ ವರ್ಷಗಳಿಂದ ನಟನೆಯಿಂದ ದೂರ ಉಳಿದಿದ್ದರು. ನಂತರ ಡ್ಯಾನ್ಸ್ ಶೋ ಒಂದರಲ್ಲಿ ಕಾಣಿಸಿಕೊಂಡಿದ್ದರು.