Asianet Suvarna News Asianet Suvarna News

ಬಯೋ​ಪಿಕ್‌ ಚಿತ್ರ​ಗ​ಳಲ್ಲಿ ನಟಿ​ಸು​ವಾ​ಸೆ: ರಾಗಿ​ಣಿ

ನಟಿ ರಾಗಿಣಿ ಚಿತ್ರ​ರಂಗಕ್ಕೆ ಬಂದು ಹತ್ತು ವರ್ಷ​ಗ​ಳಾ​ಗಿವೆ. ಈ ಸಂಭ್ರ​ಮ​ವನ್ನು ಹೇಳಿ​ಕೊ​ಳ್ಳು​ವು​ದಕ್ಕೆ ಅವರು ಮಾಧ್ಯ​ಮ​ಗಳ ಮುಂದೆ ಬಂದರು. ನಟ ಸುದೀಪ್‌ ಅವ​ರೊಂದಿಗೆ ‘ವೀರ ಮದ​ಕ​ರಿ’ ಚಿತ್ರ​ದಿಂದ ತಮ್ಮ ಪಯಣ ಶುರು​ವಾ​ಗಿ​ದ್ದನ್ನು ತುಂಬಾ ಖುಷಿ​ಯಿಂದಲೇ ಹಂಚಿ​ಕೊಂಡರು. ಹಾಗೆ ರಾಗಿಣಿ ವ್ಯಕ್ತ​ಪ​ಡಿ​ಸಿದ ಭವಿ​ಷ್ಯದ ಆಸೆ ಮತ್ತು ಕನ​ಸು​ಗ​ಳೇ​ನು?

Actress Ragini Dwivedi exclusive interview
Author
Bengaluru, First Published Apr 9, 2019, 10:39 AM IST

1. ಹಳ್ಳಿ ಹುಡುಗಿ, ಕಾಲೇಜ್‌ ಗಲ್‌ರ್‍, ಪೊಲೀಸ್‌ ಅಧಿ​ಕಾರಿ, ಲೇಡಿ ಡಾನ್‌, ಐಟಂ ಡ್ಯಾನ್ಸ್‌, ಅತಿಥಿ ಪಾತ್ರ ಹೀಗೆ ಒಂದು ಕಮ​ರ್ಷಿ​ಯಲ್‌ ಚಿತ್ರಕ್ಕೆ ಬೇಕಾದ ಎಲ್ಲ ರೀತಿಯ ಪಾತ್ರ​ಗ​ಳನ್ನು ಮಾಡಿ​ಕೊಂಡು ಬಂದಿದ್ದೇನೆ. ಒಂದು ರೀತಿಯ ಪಾತ್ರಕ್ಕೆ ನಾನು ಸೀಮಿ​ತ​ಗೊ​ಳ್ಳ​ಲಿಲ್ಲ.

2. ಈ ಎಲ್ಲ ರೀತಿಯ ಪಾತ್ರ​ಗ​ಳನ್ನೂ ನನ್ನನ್ನು ಪ್ರೇಕ್ಷ​ಕರು, ಕನ್ನಡ ಚಿತ್ರ​ರಂಗಕ್ಕೆ ಪ್ರೀತಿ​ಯಿಂದಲೇ ಸ್ವಾಗತಿಸಿ, ಮೆಚ್ಚಿ​ಕೊಂಡಿದೆ. ಪ್ರೇಕ್ಷ​ಕರು ಕೊಟ್ಟಈ ಗೆಲವು, ಚಿತ್ರ​ರಂಗ ಕೊಟ್ಟಅವ​ಕಾ​ಶ​ಗ​ಳಿಂದಲೇ ನಾನು ಈ ಹತ್ತು ವರ್ಷ ಇಷ್ಟುಉತ್ಸಾ​ಹ​ದಿಂದ ಕೆಲಸ ಮಾಡು​ವು​ದಕ್ಕೆ ಸಾಧ್ಯ​ವಾ​ಯಿತು.

3. ಒಬ್ಬ ನಟಿ ಚಿತ್ರ​ರಂಗ​ದಲ್ಲಿ ಬಹು ಬೇಡಿ​ಕೆಯ ತಾರೆ​ಯಾಗಿ ಹತ್ತು ವರ್ಷ ಪೂರೈ​ಸು​ವುದೇ ದೊಡ್ಡ ವಿಷಯ ಎನ್ನು​ತ್ತಾರೆ. ನನ್ನ ಮಟ್ಟಿಗೆ ಅದು ಸಾಧ್ಯ​ವಾ​ಗಿದೆ. ಈಗ ನನಗೆ ಹೊಸ ರೀತಿಯ ಪಾತ್ರ​ಗ​ಳನ್ನು ಮಾಡುವ ಕನಸು ಮತ್ತು ಆಸೆ ಹುಟ್ಟಿ​ಕೊಂಡಿದೆ.

Actress Ragini Dwivedi exclusive interview

4. ರೆಗ್ಯೂ​ಲರ್‌ ಕಮ​ರ್ಷಿ​ಯಲ್‌ ಚಿತ್ರ​ಗ​ಳ​ಲ್ಲಿ ಬರುವ ಪಾತ್ರ​ಗಳ ಹೊರ​ತಾ​ಗಿ​ರುವ ಕ್ಯಾರೆ​ಕ್ಟರ್‌, ಕತೆಗಾಗಿ ನಾನು ಎದುರು ನೋಡು​ತ್ತಿ​ದ್ದೇನೆ. ಇದು ನನ್ನ ಕನ​ಸಿನ ಆಲೋ​ಚ​ನೆಯೂ ಹೌದು.

5. ಮುಖ್ಯವಾಗಿ ಮಹಿಳಾ ಪ್ರಧಾನ ಚಿತ್ರ​ಗ​ಳಲ್ಲಿ ನಟಿ​ಸ​ಬೇಕು. ಜತೆಗೆ ಸ್ಪೋರ್ಟ್ಸ್ ಆಧಾ​ರಿತ ಕತೆ​ಗ​ಳನ್ನು ಒಳ​ಗೊಂಡ ಸಿನಿ​ಮಾ​ಗಳು ಹಾಗೂ ಬಯೋ​ಪಿಕ್‌ ಸಿನಿ​ಮಾ​ಗ​ಳಲ್ಲಿ ಕಾಣಿ​ಸಿ​ಕೊ​ಳ್ಳುವ ಕನಸು ಇದೆ. ಅಂದರೆ ಬಾಲಿ​ವು​ಡ್‌​ನಂತೆಯೇ ಕನ್ನ​ಡ​ದಲ್ಲೂ ಚಿರ​ಪ​ರಿ​ಚಿ​ತ​ವಾ​ಗಿ​ರುವ ವ್ಯಕ್ತಿ​ಗಳ ಜೀವನ ಪುಟ​ಗ​ಳನ್ನು ಸಿನಿಮಾ ಮಾಡಿ​ದರೆ ಖಂಡಿತ ಅಂಥ ಚಿತ್ರ​ಗ​ಳಲ್ಲಿ ನಾನು ಕಾಣಿ​ಸಿ​ಕ​ಳ್ಳುವೆ.

6. ಸದ್ಯಕ್ಕೆ ಈಗ ನಾನು ಜೋಗಿ ಪ್ರೇಮ್‌ ಅವರ ‘ಗಾಂಧಿ​ಗಿ​ರಿ’ ಚಿತ್ರ​ದಲ್ಲಿ ನಟಿ​ಸು​ತ್ತಿ​ರುವ. ಈ ಚಿತ್ರದ ನಂತರ ಮತ್ತಷ್ಟುಒಳ್ಳೆಯ ಸಿನಿ​ಮಾ​ಗಳು ನನ್ನ ಮುಂದಿವೆ.

Follow Us:
Download App:
  • android
  • ios