ಪ್ರಸವ ಬೇನೆ, ಮಗುವಿಗೆ ಜನ್ಮ ನೀಡುವುದು ಮತ್ತೊಂದು ಜನ್ಮ ಪಡೆದಂತೆ. ಆ ನೋವು, ಅನುಭವ ಅನುಭವಿಸಿದವರಿಗಷ್ಟೇ ಗೊತ್ತು. ಅದರಲ್ಲಿಯೂ ಮೊದಲ ಪ್ರಸವವೆಂದರೆ ಆತಂಕ, ಭಯ...ಎಲ್ಲವುದರೊಂದಿಗೆ ವಿಪರೀತ ಕುತೂಹಲವೂ ಇರುತ್ತೆ. ಇಂಥ ಸಂದರ್ಭದಲ್ಲಿ ಹೆಣ್ಣಿಗೆ ಅಮ್ಮನ ಸ್ಥಾನದಲ್ಲಿ ನಿಂತು ಧೈರ್ಯ ತುಂಬುವುದು ವೈದ್ಯೆ.

ಇಂಥ ವೈದ್ಯಯೊಬ್ಬರನ್ನು ಡಿಸೆಂಬರ್ 2 ರಂದು ಲಿಟಲ್ ಸಿಂಡ್ರೆಲಾಗೆ ಜನ್ಮ ನೀಡಿದ ರಾಧಿಕಾ ಪಂಡಿತ್ ನೆನಪಿಸಿಕೊಂಡಿದ್ದಾರೆ. ಹೆರಿಗೆ ಮಾಡಿಸಿದ ಡಾ. ಸ್ವರ್ಣಲತಾ ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡಿ, ಅವರು ಶುಭ ಹಾರೈಸಿದ್ದು ಹೀಗೆ....

‘ಡಾಕ್ಟರ್ ಒಬ್ಬರ ಜೀವನದಲ್ಲಿ ಮುಖ್ಯ ಪಾತ್ರ ನಿರ್ವಹಿಸುತ್ತಾರೆ. ಅಂಥವರಲ್ಲಿ ಡಾ. ಸ್ವರ್ಣಲತಾ ಸಹ ಒಬ್ಬರು. ನನ್ನ ಪ್ರೆಗ್ನೆನ್ಸಿ ಜರ್ನಿಯಲ್ಲಿ ನಮ್ಮೊಂದಿಗಿದ್ದವರು ವಂಡರ್‌ಫುಲ್ ಸೋಲ್ ಡಾ. ಸ್ವರ್ಣಲತಾ. ಡಾಕ್ಟರ್‌ಗಿಂತ ಹೆಚ್ಚು ನಮ್ಮವರಂತೆ ಪ್ರೀತಿ ಕಾಳಜಿ ತೋರಿಸಿದ್ದಾರೆ. ನನ್ನ ಆರೋಗ್ಯದ ಪ್ರತಿಯೊಂದೂ ಅಂಶವನ್ನೂ ಅವರು ಗಮನಿಸುತ್ತಿದ್ದರು. ಈ ಜರ್ನಿ ಪ್ರೀಷಿಯಸ್ ಆಗುವಲ್ಲಿ ಅವರ ಪಾಲು ದೊಡ್ಡದು. ಅವರಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು. ಯಶ್ ಹಾಗೂ ನಾನು ಅವರನ್ನು ತುಂಬಾ ಪ್ರೀತಿಸುತ್ತೇವೆ, ಗೌರವಿಸುತ್ತೇವೆ. ನಿಮಗೆ ಹುಟ್ಟು ಹಬ್ಬದ ಶುಭಾಶಯಗಳು ಅಕ್ಕಾ...’ಎಂದು ಹುಟ್ಟು ಹಬ್ಬಕ್ಕೆ ಶುಭ ಕೋರಿದ್ದಾರೆ.

ಮಗುವಿಗೆ ಜನ್ಮವಿತ್ತು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವಾಗ ರಾಧಿಕಾ ಹಾಗೂ ಯಶ್ ನಡೆಸಿದ ಸುದ್ದಿ ಗೋಷ್ಠಿಯಲ್ಲಿ ಈ ಡಾ.ಸ್ವರ್ಣಲತಾ ಸಹ ಇದ್ದರು. ಮಗು ಹಿಡಿಯಲೂ ಬಾರದ ನನಗೆ ಎಲ್ಲವನ್ನೂ ಈ ವೈದ್ಯೆ ಕಲಿಸಿದರು, ಎಂದು ತಮ್ಮ ಅನುಭವವನ್ನು ರಾಧಿಕಾ ಆಗಲೇ ಹೇಳಿ ಕೊಂಡಿದ್ದರು.