ಸ್ಯಾಂಡಲ್ ವುಡ್ ಮಾತ್ರವಲ್ಲದೆ ಟಾಲಿವುಡ್, ಮಾಲಿವುಡ್, ಕಾಲಿವುಡ್ ನಲ್ಲಿ ಮಿಂಚಿದ ನಟಿ ಶ್ರುತಿ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. 1998 ರಲ್ಲಿ ನಿರ್ದೇಶಕ ಮಹೇಂದ್ರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶ್ರುತಿ ಕಾರಣಾಂತರಗಳಿಂದ ವಿಚ್ಛೇದನ ನೀಡಿ ದೂರ ಉಳಿದರು. ಆದರೆ ಪುತ್ರಿ ಗೌರಿಗೆ ಮಾತ್ರ ತಂದೆಯೊಂದಿಗೆ ಕಳೆದ ನೆನಪು ಹಾಗೆ ಉಳಿದು ಇನ್ನು ಸಮಯ ಕಳೆಯಬೇಕೆಂದು ತಂದೆ ಮಹೇಂದರ್ ಗೆ ಹುಟ್ಟುಹಬ್ಬ ವಿಶ್ ಮಾಡುತ್ತಾ ಹೇಳಿಕೊಂಡಿದ್ದಾರೆ.

ಖ್ಯಾತ ನಟಿಯ ಪುತ್ರಿ ಹೀಗಿದ್ದಾಳೆ ನೋಡಿ.....

‘ಹ್ಯಾಪಿ ಬರ್ತಡೇ ಅಪ್ಪ. ನೀವು ನನ್ನ ಮೊದಲ ಪ್ರೀತಿ. ನೀವು ನನ್ನ ಫೇವರೆಟ್ ಹೀರೋ. ನಿಮ್ಮ ಮೇಲಿರುವ ನನ್ನ ಪ್ರೀತಿ ಹಾಗೂ ಹಂಚಿಕೊಂಡ ಬಂಧವನ್ನು ಯಾರೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ನಿಮ್ಮನ್ನ ಮಿಸ್ ಮಾಡಿಕೊಳ್ಳುವುದನ್ನು ಹೇಳಿಕೊಳ್ಳಲು ನನ್ನ ಬಳಿ ಪದಗಳೇ ಇಲ್ಲ. ನಿಮ್ಮೊಂದಿಗೆ ಸಮಯ ಕಳೆಯಲು ಬಯಸುತ್ತಿರುವೆ’ ಎಂದು ಬರೆದುಕೊಂಡಿದ್ದಾರೆ.