ವೈರಲ್ ಆಯ್ತು 'ಸೂಪರ್' ನಟಿಯ ಡಬಲ್ ರೋಲ್ ಲುಕ್..

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 11, Feb 2019, 12:19 PM IST
Actress Nayanthara latest look from horror film Airaa goes viral
Highlights

ಟಾಲಿವುಡ್-ಮಾಲಿವುಡ್ ಲೇಡಿ ಸೂಪರ್ ಸ್ಟಾರ್ ಇದೇ ಮೊದಲ ಭಾರಿಗೆ ದ್ವಿಭಾಷಾ ಚಿತ್ರದಲ್ಲಿ ಡಬಲ್ ಆ್ಯಕ್ಟಿಂಗ್ ಮಾಡುತ್ತಿದ್ದಾರೆ. ಇವರ ನಟನೆಯ ಟ್ರೈಲರ್ ಮೂಲಕ ಹೊಸ ಲುಕ್ ವೈರಲ್...

ಸಿನಿ ಜರ್ನಿಯಲ್ಲಿ 63ನೇ ಚಿತ್ರವನ್ನು ಸ್ವಲ್ಪ ವಿಭ್ನಿನವಾಗಿ ಮಾಡುವ ಮನಸ್ಸು ಮಾಡಿದ ನಯನ್‌ತಾರಾ ಹಾರರ್ ಚಿತ್ರ Airaa ಲುಕ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಮೊದಲನೇ ಭಾರಿ ಡಬಲ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ನಯನ್‌ತಾರಾ ಚಿತ್ರದ ಟ್ರೈಲರ್ ನೋಡಿದವರಿಗೆ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದೆ.

ತಮಿಳು ಹಾಗೂ ತೆಲಗು ಸಿನಿಮಾದಲ್ಲಿ ಮಾತ್ರ ಅಭಿನಯಿಸುವ ನಯನ್‌ತಾರಾ ಈ ಎರಡು ಭಾಷೆಯಲ್ಲಿ ಮಾತ್ರ ಡಬಲ್ ರೋಲ್ ಮಾಡುವ ಆಸೆಯಿತ್ತಂತೆ. Airaa ಚಿತ್ರದಲ್ಲಿ ಪಾತ್ರದ ಹೆಸರು ಭವಾನಿ ಹಾಗೂ ಯಮುನಾ ಎಂದ ತಿಳಿದು ಬಂದಿದೆ.

ಇನ್ನು ಕೆ.ಮ್. ಸರ್ಜುನ್ ನಿರ್ದೇಶನದ ಈ ಚಿತ್ರ ಏಪ್ರಿಲ್‌ನಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ. ಟ್ರೈಲರ್ ರಿಲೀಸ್ ಆದ ನಂತರ ಕೆಲವೊಂದು ಫೋಟೋ ರಿವೀಲ್ ಮಾಡಲಾಗಿತ್ತು. ಇದನ್ನು ನೋಡಿದವರೂ ಅಬ್ಬಾ....! ಇದು ನಯನ್‌ತಾರಾನಾ ಎಂದು ತಮಗೆ ತಾವೇ ಪ್ರಶ್ನಿಸಿಕೊಂಡಿದ್ದಾರೆ.

ಕನ್ನಡದಲ್ಲಿ ಉಪೇಂದ್ರ ಅವರೊಂದಿಗೆ ನಯನ್‌ತಾರಾ 'ಸೂಪರ್' ಚಿತ್ರದಲ್ಲಿ ನಟಿಸಿದ್ದಾರೆ.

 

loader