ಬಾಲಿವುಡ್ ನಟಿ ಸೊನಾಲಿ ಬೇಂದ್ರೆ ಹಾಗೂ ಆಯುಷ್ಯಮಾನ್ ಖುರಾನಾ ಹೆಂಡತಿ ತಾಹಿರಾ ಕಷ್ಯಪ್ ಬಳಿಕ ಇದೀಗ ಪಾಪ್ಯುಲರ್ ಬಾಲಿವುಡ್ ನಟಿ ನಫೀಸಾ ಅಲಿಯವರೂ ಕ್ಯಾನ್ಸರ್‌ನಿಂದ ಬಳಲುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಇತ್ತೀಚೆಗಷ್ಟೇ ಮೂರನೇ ಸ್ಟೇಜ್ ಕ್ಯಾನ್ಸರ್‌ನಿಂದ ತಾನು ಬಳಲುತ್ತಿದ್ದೇನೆಂದು ಖುದ್ದು ನಫೀಸಾ ತಮ್ಮ ಸೋಷಲ್ ಮೀಡಿಯಾ ಅಕೌಂಟ್‌ನಲ್ಲಿ ಬರೆದುಕೊಂಡಿದ್ದಾರೆ.

ನಫೀಸಾ ಅಲಿ ಖಾನ್ ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಅಕೌಂಟ್‌ನಲ್ಲಿ ತನ್ನ ಓರ್ವ ಹಳೆಯ ಸ್ನೇಹಿತೆ ಹಾಗೂ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಜೊತೆಗಿರುವ ಫೋಟೋ ಶೇರ್ ಮಾಡುತ್ತಾ 'ಇತ್ತೀಚೆಗಷ್ಟೇ ನನ್ನ ಹಳೆಯ ಗೆಳತಿಯರೊಂದಿಗೆ ಅಮೂಲ್ಯ ಸಮಯವನ್ನು ಕಳೆದೆ. ಮೂರನೇ ಸ್ಟೇಜ್ ಕ್ಯಾನ್ಸರ್‌ನಿಂದ ಬಳಲುತ್ತಿರುವ ನಾನು ಶೀಘ್ರವಾಗಿ ಗುಣಮುಖವಾಗುವಂತೆ ಹಾರೈಸಿದ್ದಾರೆ' ಎಂದು ಬರೆದುಕೊಂಡಿದ್ದಾರೆ.

 
 
 
 
 
 
 
 
 
 
 
 
 

Just met my precious friend who wished me luck & to get well from my just diagnosed stage 3 cancer . 😍🤗

A post shared by nafisa ali sodhi (@nafisaalisodhi) on Nov 17, 2018 at 4:53am PST

ಒಂದು ಕಾಲದಲ್ಲಿ ಪ್ರಸಿದ್ಧ ಮಾಡೆಲ್ ಆಗಿದ್ದ ನಫೀಸಾ 'ಮೇಜರ್ ಸಾಹಬ್', 'ಲೈಫ್ ಇನ್ ಎ ಮೆಟ್ರೋ', 'ಸಾಹೆಬಿ ಬೀವಿ ಔರ್ ಗ್ಯಾಂಗ್ ಸ್ಟರ್ 3' ಹಾಗೂ 'ಯಮ್ ಲಾ ಪಗ್ ಲಾ ದಿವಾನಾ' ದಂತಹ ಪ್ರಖ್ಯಾತ ಸಿನಿಮಾಗಳಲ್ಲಿ ನಟಿಸಿದ್ದರು. ಅರ್ಜುನ ಪ್ರಶಸ್ತಿ ಪುರಸ್ಕೃತ ಪ್ರಖ್ಯಾತ ಪೋಲೋ ಪ್ಲೇಯರ್ ಸೋಧಿಯವರನ್ನು ಮದುವೆಯಾಗಿದ್ದ ನಫೀಸಾರಿಗೆ ಇಬ್ಬರು ಹೆಣ್ಮಕ್ಕಳು ಹಾಗೂ ಓರ್ವ ಗಂಡು ಮಗನಿದ್ದಾನೆ.