ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಸಿನಿಮಾ ರಾಬರ್ಟ್. ಈ ಚಿತ್ರದ ಪೋಸ್ಟರ್ ಕೂಡಾ ರಿಲೀಸ್ ಆಗಿದ್ದು ಎಲ್ಲಾ ಕಡೆ ಚರ್ಚೆ ಶುರುವಾಗಿದೆ. ಸಾರಥಿಗೆ ಸಾಥ್ ಕೊಡುವವರ್ಯಾರು ಎಂಬ ವಿಚಾರ ಮಾತ್ರ ಇನ್ನೂ ಬಹಿರಂಗವಾಗಿಲ್ಲ. 

ಉಪ್ಪಿ- ಡಿಂಪಲ್ ಕ್ವೀನ್ ರೊಮ್ಯಾನ್ಸ್; ಪ್ರಿಯಾಂಕ ಫುಲ್ ಗರಂ!

ಈಗ ನಾಯಕಿ ಯಾರು ಎಂಬ ಕುತೂಹಲಕ್ಕೆ ಬಹುತೇಕ ತೆರೆ ಬಿದ್ದಿದೆ. ರಾಬರ್ಟ್ ನಾಯಕಿ ಆಯ್ಕೆ ಬಹುತೇಕ ಖಚಿತವಾಗಿದೆ.  ತಮಿಳು, ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿರುವ ನಟಿ ಮೆಹ್ರೀನ್ ಪಿರ್ ಜಾದ ಕನ್ನಡಕ್ಕೆ ಬರಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. 

ಅಪಘಾತ ಗಾಯಾಳುಗೆ ನೆರವು ನೀಡಿ ಮಾನವೀಯತೆ ಮೆರೆದ ದರ್ಶನ್

ಪಂಜಾಬಿ ಮೂಲದವರಾದ ಮೆಹ್ರೀನ್ ತೆಲುಗು ಚಿತ್ರರಂಗದ ಮೂಲಕ ಸಿನಿಮಾ ಲೋಕಕ್ಕೆ ಕಾಲಿಟ್ಟಿದ್ದಾರೆ.  ಜವಾನ್, ರಾಜ ದಿ ಗ್ರೇಟ್, ನೋಟ ಚಿತ್ರಗಳಲ್ಲಿ ನಟಿಸಿದ್ದಾರೆ. ಅನುಷ್ಕಾ ಶರ್ಮಾ ಜೊತೆ ‘ಫಿಲೌರಿ’ ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ.