ಪಾಲಕ್ಕಾಡ್‌ನಲ್ಲಿ ನಡೆದ ಜ್ಯುವೆಲ್ಲರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಖ್ಯಾತ ನಟಿ ಮಂಜು ವಾರಿಯರ್‌ಗೆ ವೇದಿಕೆ ಮೇಲೆ ಅನಿರೀಕ್ಷಿತ ಘಟನೆಯೊಂದು ಎದುರಾಗಿದೆ. ಅಭಿಮಾನಿಯೊಬ್ಬರು ಅವರಿಗೆ ಬಲವಂತವಾಗಿ ಮುತ್ತಿಟ್ಟಿದ್ದಾರೆ.

ಸಿನಿಮಾ ಸ್ಟಾರ್‌ಗಳು ಪಬ್ಲಿಕ್ ಕಾರ್ಯಕ್ರಮಗಳಿಗೆ ಹೋದಾಗ ಅವರಿಗೆ ಸೆಕ್ಯುರಿಟಿ ಕೊಡೋದು ದೊಡ್ಡ ತಲೆನೋವಿನ ಕೆಲಸ. ಯಾಕಂದ್ರೆ, ನೆಚ್ಚಿನ ನಟ-ನಟಿಯರನ್ನು ನೋಡೋಕೆ ಮುಗಿಬೀಳುವ ಅಭಿಮಾನಿಗಳ ಪ್ರೀತಿ ಯಾವ ಹಂತಕ್ಕೆ ಹೋಗುತ್ತೆ ಅಂತಾ ಹೇಳೋಕಾಗಲ್ಲ. ಬೆಳ್ಳಿತೆರೆ ಮೇಲೆ ನೋಡಿ ಮೆಚ್ಚಿದವರನ್ನು ನೇರವಾಗಿ ನೋಡಿದಾಗ ಕೆಲವರು ಹೇಗೆ ವರ್ತಿಸುತ್ತಾರೆ ಅಂತಾ ಊಹಿಸೋಕೂ ಸಾಧ್ಯವಿಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೇ ಕಾರಣಕ್ಕೆ, ಸಾರ್ವಜನಿಕ ಸ್ಥಳಗಳಲ್ಲಿ ನಟ-ನಟಿಯರಿಗೆ ಅಭಿಮಾನಿಗಳಿಂದ ಮುಜುಗರದ ಪ್ರಸಂಗಗಳು ಎದುರಾಗುತ್ತಲೇ ಇರುತ್ತವೆ. ಕೆಲವರು ಇದಕ್ಕೆ ಗರಂ ಆದ್ರೆ, ಇನ್ನು ಕೆಲವರು ಪರಿಸ್ಥಿತಿ ಹಾಳಾಗಬಾರದು ಅಂತಾ ಸುಮ್ಮನಾಗುತ್ತಾರೆ. ಇಂಥದ್ದೇ ಒಂದು ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇಲ್ಲಿ ನಟಿ ಮಂಜು ವಾರಿಯರ್ ಅವರಿಗೆ ಅಭಿಮಾನಿಯೊಬ್ಬರಿಂದ ವಿಚಿತ್ರ ಅನುಭವವಾಗಿದೆ.

ಮಾರ್ಚ್ 15ರಂದು ಪಾಲಕ್ಕಾಡ್‌ನಲ್ಲಿ ನಡೆದ ಒಂದು ಜ್ಯುವೆಲ್ಲರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಜನರೊಂದಿಗೆ ಮಾತಾಡಲು ಮಂಜು ವಾರಿಯರ್‌ಗಾಗಿ ಹೊರಗೆ ಒಂದು ಸ್ಟೇಜ್ ಹಾಕಲಾಗಿತ್ತು. ಅವರು ವೇದಿಕೆ ಮೇಲೆ ನಿಂತಿದ್ದಾಗ, ಅಭಿಮಾನಿಯೊಬ್ಬರು ದಿಢೀರ್ ಅಂತಾ ಸ್ಟೇಜ್ ಹತ್ತಿ ಬಂದು ಮಂಜು ವಾರಿಯರ್‌ಗೆ ಬಲವಂತವಾಗಿ ಮುತ್ತಿಟ್ಟಿದ್ದಾರೆ. ಈ ಅನಿರೀಕ್ಷಿತ ಘಟನೆಯಿಂದ ಅಲ್ಲಿದ್ದ ಸೆಕ್ಯುರಿಟಿ ಸಿಬ್ಬಂದಿ ಸೇರಿದಂತೆ ಎಲ್ಲರೂ ಒಂದು ಕ್ಷಣ ದಂಗಾಗಿ ನಿಂತಿದ್ದು ವಿಡಿಯೋದಲ್ಲಿ ಕಾಣಿಸುತ್ತೆ. ತಕ್ಷಣವೇ ಆ ಮಹಿಳೆಯನ್ನು ವೇದಿಕೆಯಿಂದ ಕೆಳಗಿಳಿಸಿದ್ದಾರೆ.

Scroll to load tweet…

ಸರಿಯಾದ ವರ್ತನೆಯಲ್ಲ

ಈ ವೇಳೆ, ನಿರೂಪಕಿಯೊಬ್ಬರು 'ಇದು ಸರಿಯಾದ ವರ್ತನೆಯಲ್ಲ' ಎಂದು ಹೇಳುವುದೂ ಕೇಳಿಸುತ್ತದೆ. ಇನ್ನು ಮಂಜು ವಾರಿಯರ್ ಅವರ ಸಿನಿಮಾಗಳ ಬಗ್ಗೆ ಹೇಳುವುದಾದರೆ, 'ಎಂಬುರಾನ್' ನಂತರ ಅವರ ಯಾವುದೇ ಸಿನಿಮಾ ಥಿಯೇಟರ್‌ಗೆ ಬಂದಿಲ್ಲ. ಕಳೆದ ವರ್ಷ ಮಾರ್ಚ್‌ನಲ್ಲಿ ತೆರೆಕಂಡ ಈ ಚಿತ್ರದಲ್ಲಿ ಅವರು ಪ್ರಿಯದರ್ಶಿನಿ ರಾಮದಾಸ್ ಎಂಬ ಬೋಲ್ಡ್ ಪಾತ್ರ ಮಾಡಿದ್ದರು. ಇದಲ್ಲದೆ, ಕಳೆದ ವರ್ಷವೇ ಮಂಜು ವಾರಿಯರ್ ಒಂದು ಶಾರ್ಟ್ ಫಿಲ್ಮ್‌ನಲ್ಲೂ ನಟಿಸಿದ್ದರು. ಮಮ್ಮುಟ್ಟಿ ಕಂಪನಿ ನಿರ್ಮಿಸಿ, ರಂಜಿತ್ ನಿರ್ದೇಶಿಸಿದ 'ಆರೋ' ಎಂಬ ಕಿರುಚಿತ್ರ ಅದಾಗಿತ್ತು.