ಬೆಂಗಳೂರು[ಫೆ. 03]  ಬಾಲಿವುಡ್ ತಾರೆಗಳು ಏನೂ ಮಾಡಿದರೂ ಸುದ್ದಿಯಾಗುತ್ತದೆ. ಶೂಟಿಂಗ್ ಮಾಡಿದರೂ ಸುದ್ದಿ. ಶೂಟಿಂಗ್ ಸೆಟ್ ನಲ್ಲಿ ಬಿದ್ದ ಕಸ ಎತ್ತಿದ್ದರೂ ಸುದ್ದಿ. ಬಾಲಿವುಡ್ ತಾರೆ ಕತ್ರೀನಾ ಕೈಫ್ ಪೊರಕೆ ಹಿಡಿದಿದ್ದಾರೆ. ಕತ್ರೀನಾ ಕಸ ಗುಡಿಸುತ್ತಿರುವ ವಿಡಿಯೋ ಪೋಸ್ಟ್ ಮಾಡಿರುವುದು ಅಕ್ಷಯ್ ಕುಮಾರ್ ಎನ್ನುವುದು ಮತ್ತೊಂದು ವಿಶೇಷ.

ಸೂರ್ಯವಂಶಿ ಚಿತ್ರದಲ್ಲಿ ಅಕ್ಷಯ್  ಕುಮಾರ್ ಜತೆ ಹೆಜ್ಜೆ ಹಾಕುತ್ತಿದ್ದಾರೆ. ಶೂಟಿಂಗ್ ಸೆಟ್ ನಲ್ಲಿ ಕಸ ಬಿದ್ದಿರುವುದನ್ನು ಕಂಡ ಕತ್ರೀನಾ ತಾವೇ ಮುಂದಾಗಿ ಪೊರಕೆ ಕೈಯಲ್ಲಿ ಎತ್ತಿಕೊಂಡಿದ್ದಾರೆ. 

ಇದೇನು ಶೂಟಿಂಗ್ ಅಲ್ಲ ಆದರೆ ಕತ್ರೀನಾ ಸ್ವಯಂ ಪ್ರೇರಣೆಯಿಂದ ಕಸ ಗುಡಿಸಲು ಮುಂದಾಗಿದ್ದಾರೆ. ಕತ್ರೀನಾ ಅವರೇ ನೀವು ಏನು ಮಾಡುತ್ತಿರುವುರಿ? ಸ್ವಚ್ಛ ಭಾರತ ಅಭಿಯಾನಕ್ಕೆ ಹೊಸ ರಾಯಭಾರಿ ಸಿಕ್ಕಂತಾಗಿದೆ ಎಂದು ಅಕ್ಷಯ್ ಕುಮಾರ್ ಬರೆದು ಪೋಸ್ಟ್ ಮಾಡಿದ್ದಾರೆ.

ಬ್ಯಾಕ್ ಲೆಸ್ ಆಗಿ ಕಾಣಿಸಿಕೊಂಡ ಕತ್ರೀನಾ ನಿದ್ದೆಗೆ ಕೊಳ್ಳಿ ಇಟ್ಟರು

ಕರಣ್ ಜೋಹರ್ ನತ್ತು ರೋಹಿತ್ ಶೆಟ್ಟಿ ನಿರ್ಮಾಣ ಮಾಡುತ್ತಿರುವ ಚಿತ್ರಕ್ಕೆ ರೋಹಿತ್ ಶೆಟ್ಟಿ ಅವರೇ ನಿರ್ದೇಶಕ. ಅಕ್ಷಯ್ ಕುಮಾರ್ ಈ ಚಿತ್ರಕ್ಕೆ 100 ಕೋಟಿ ರೂ. ಅಧಿಕ ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಅಕ್ಷಯ್ ಕುಮಾರ್ ಮಾತ್ರವಲ್ಲದೇ ಅಜಯ್ ದೇವಗನ್, ರಣವೀರ್ ಸಿಂಗ್ ಸಹ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದು ಮಾರ್ಚ್ 27 ರಂದು ತೆರೆಗೆ ಅಪ್ಪಳಿಸಲಿದೆ.

 

 

 
 
 
 
 
 
 
 
 
 
 
 
 

Spotted : The newest #SwachhBharat brand ambassador on the sets of #Sooryavanshi 😬 @katrinakaif #BTS

A post shared by Akshay Kumar (@akshaykumar) on Feb 3, 2020 at 2:13am PST