ಬೆಂಗಳೂರು (ಡಿ. 01): ರೆಬಲ್ ಸ್ಟಾರ್ ಅಂಬರೀಶ್ ನಮ್ಮನ್ನಗಲಿ ವಾರವೇ ಕಳೆದಿದೆ. ಈಗ ಅವರು ನಿಧನರಾಗಿರುವ ಸುದ್ದಿ ನಟಿ ಹರ್ಷಿಕಾ ಪೂಣಚ್ಚಗೆ ಗೊತ್ತಾಗಿದ್ದಂತೆ! ಹಾಗಂತ ಸ್ವತಃ ಹರ್ಷಿಕಾರೇ ಹೇಳಿಕೊಂಡಿದ್ದಾರೆ. ಇದು ಅಭಿಮಾನಿಗಳ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ವಿದೇಶದಲ್ಲಿರುವವರೇ ವಿಚಾರ ತಿಳಿದು ಅಂಬಿ ಅಂತಿಮ ದರ್ಶನಕ್ಕೆ ಆಗಮಿಸಿದ್ದಾರೆ. ದರ್ಶನ್ ಶೂಟಿಂಗ್ ನಿಲ್ಲಿಸಿ ಓಡೋಡಿ ಬಂದಿದ್ದಾರೆ. ಇಲ್ಲಿಯೇ ಇದ್ದ ಹರ್ಷಿಕಾ ಪೂಣಚ್ಚ ನನಗೆ ನೆಟ್ ವರ್ಕ್ ಇರಲಿಲ್ಲ. ವಿಚಾರ ತಿಳಿಯಲೇ ಇಲ್ಲ ಎಂದು ಹೇಳಿದ್ದು ಆಕ್ರೋಶಕ್ಕೆ ಕಾರಣವಾಗಿದೆ. 

 


ಇದಕ್ಕೆ ಸಮಜಾಯಿಷಿಯನ್ನೂ ನೀಡಿದ್ದಾರೆ. 

ನಾನು ಶೂಟಿಂಗ್ ನಲ್ಲಿದ್ದಾಗ, ನಾಟ್ ರೀಚಬಲ್ ಪ್ಲೇಸ್ ನಲ್ಲಿದ್ದಾಗ ನನ್ನ ಟ್ವಿಟರ್, ಫೇಸ್ ಬುಕ್, ಹಾಗೂ ಇನ್ಸ್ಟಾಗ್ರಾಮ್ ಅಕೌಂಟ್ ನೋಡಿಕೊಳ್ಳಲು ಕಾರ್ಪೋರೇಟ್ ಕಂಪನಿಯಿದೆ. ನಾನು ಶೂಟಿಂಗ್ ನಲ್ಲಿದ್ದ ವೇಳೆ ನನ್ನ ಪರವಾಗಿ ನ. 25 ರಂದು ಪೋಸ್ಟ್ ಮಾಡಿದ್ದಾರೆ. ತಡವಾಗಿ ನೆಟ್ ವರ್ಕ್ ಗೆ ಬಂದಮೇಲೆ ಅಂಬಿ ಅಂಕಲ್ ಹೋಗಿರುವ ವಿಚಾರ ತಿಳಿಯಿತು. ಕೊನೆಯದಾಗಿ ನಾನವರನ್ನು ನೋಡಲಾಗಲಿಲ್ಲ. ಮಿಸ್ ಯೂ ಅಂಕಲ್ ಎಂದು ಸಮಜಾಯಿಷಿ ನೀಡಿದ್ದಾರೆ.