ಬೆಂಗಳೂರು (ಜ. 11): 2018 ಸ್ಯಾಂಡಲ್ ವುಡ್ ನಲ್ಲಿ ಮದುವೆ ಪರ್ ಎಂದೇ ಹೇಳಬಹುದು. ನಟಿ ಮೇಘನಾ ರಾಜ್- ಚಿರಂಜೀವಿ ಸರ್ಜಾ, ದಿಗಂತ್ -ಐಂದ್ರಿತಾ ಸೇರಿದಂತೆ ಸಾಕಷ್ಟು ಸ್ಯಾಂಡಲ್ ವುಡ್ ಮಂದಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈಗ ಇನ್ನೊಬ್ಬ ನಟಿಯ ಸರದಿ. ಯಾರಪ್ಪಾ ಅದು ಅಂತಿದೀರಾ? ನಟಿ ಹರಿಪ್ರಿಯಾ! 

ಹೌದು ಹರಿಪ್ರಿಯಾ ಅರಿಶಿನ ಶಾಸ್ತ್ರವನ್ನು ಸಂಭ್ರಮದಲ್ಲಿದ್ದಾರೆ. ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ಅರಿಶಿನ ಶಾಸ್ತ್ರದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. 

ಅಂದಹಾಗೆ ಮದುವೆಯಾಗುತ್ತಿರುವ ಹುಡುಗ ಯಾರು ಗೊತ್ತಾ? ಮಜಾ ಟಾಕೀಸ್ ಖ್ಯಾತಿಯ ಸೃಜನ್ ಲೋಕೇಶ್.

ಅರೇ, ಇದೇನಿದು ಅಂತಿದೀರಾ? ಹೌದು. ಹರಿಪ್ರಿಯಾ ಹಾಗೂ ಸೃಜನ್ ಲೋಕೇಶ್ 'ಎಲ್ಲಿದ್ದೆ ಇಲ್ಲಿ ತನಕ' ಎನ್ನುವ ಚಿತ್ರ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಸೃಜನ್ ಗೆ ಜೋಡಿಯಾಗಿ ಹರಿಪ್ರಿಯಾ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಮದುವೆ ದೃಶ್ಯಗಳಿದ್ದು ಅದರ ಚಿತ್ರೀಕರಣ ವೇಳೆ ತೆಗೆದ ಫೋಟೋ ಇದಾಗಿದೆ. 

ಎಲ್ಲಿದ್ದೆ ಇಲ್ಲಿ ತನಕ ಚಿತ್ರವನ್ನು ಸೃಜನ್ ಲೋಕೇಶ್ ನಿರ್ಮಾಣ ಮಾಡುತ್ತಿದ್ದು ತೇಜಸ್ವಿ ನಿರ್ದೇಶನ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.