ಪುನೀತ್ ಚಿತ್ರಕ್ಕೆ ರಾತ್ರೋ ರಾತ್ರಿ ನಾಯಕಿ ಬದಲು; ಹೊಸ ನಾಯಕಿ ಯಾರು?

First Published 14, Mar 2018, 12:49 PM IST
Actress Change in Puneeth Movie
Highlights

ಪುನೀತ್ ರಾಜ್‌ಕುಮಾರ್ ಹೊಸ ಚಿತ್ರದ ಚಿತ್ರೀಕರಣದ  ಮೊದಲ ದಿನವೇ ಚಿತ್ರತಂಡಕ್ಕೆ ಆಘಾತ ಎದುರಾಗಿದೆ. ರಾತ್ರೋರಾತ್ರಿ ನಾಯಕಿ ಬದಲಾಗಿದ್ದಾರೆ.

ಬೆಂಗಳೂರು (ಮಾ. 14): ಪುನೀತ್ ರಾಜ್‌ಕುಮಾರ್ ಹೊಸ ಚಿತ್ರದ ಚಿತ್ರೀಕರಣದ  ಮೊದಲ ದಿನವೇ ಚಿತ್ರತಂಡಕ್ಕೆ ಆಘಾತ ಎದುರಾಗಿದೆ. ರಾತ್ರೋರಾತ್ರಿ ನಾಯಕಿ ಬದಲಾಗಿದ್ದಾರೆ.

ಪುನೀತ್ ರಾಜ್‌ಕುಮಾರ್ ಚಿತ್ರಕ್ಕೆ  ರಾತ್ರೋರಾತ್ರಿ ನಾಯಕಿ ಬದಲಾಗಿದ್ದಾರೆ.  ಪ್ರಿಯಾಂಕ ಜವಾಲ್‌’ಕರ್ ಜಾಗಕ್ಕೆ ರಚಿತಾ ರಾಮ್ ಬಂದಿದ್ದಾರೆ.  ಪ್ರಿಯಾಂಕ ಜವಾಲ್‌’ಕರ್ ಚಿತ್ರತಂಡದಿಂದ ಆಚೆ  ಹೋಗಿದ್ದಾರೆ. ಆ ಜಾಗಕ್ಕೆ ಡಿಂಪಲ್ ಕ್ವೀನ್ ರಚಿತಾರಾಮ್ ಬಲಗಾಲಿಟ್ಟು ಒಳಗೆ ಬಂದಿದ್ದಾರೆ.

‘ಅರ್ಜುನ್ ರೆಡ್ಡಿ’ ಚಿತ್ರ ಖ್ಯಾತಿಯ ವಿಜಯ್  ದೇವರಕೊಂಡ ನಟನೆಯ ‘ಟ್ಯಾಕ್ಸಿ ಡ್ರೈವರ್’ ಚಿತ್ರದಲ್ಲಿ ನಟಿಸಿದ್ದ ಪ್ರಿಯಾಂಕ ಜವಾಲ್‌ಕರ್ ಆ  ಚಿತ್ರ ಬಿಡುಗಡೆಗೆ ಮುನ್ನವೇ ಪುನೀತ್ ಚಿತ್ರಕ್ಕೆ  ಆಯ್ಕೆಯಾಗಿದ್ದರು. ತನ್ನ ಆಸೆಯಂತೆಯೇ
ತನಗೆ ಕನ್ನಡದಲ್ಲಿ ಡ್ರೀಮ್ ಪ್ರೊಜೆಕ್ಟ್ ಸಿಕ್ಕಿದೆ ಎಂದು ಹೇಳಿಕೊಂಡು ಖುಷಿಪಟ್ಟಿದ್ದ  ಪ್ರಿಯಾಂಕ ಈಗ ಈ ಚಿತ್ರದಿಂದ ಆಚೆ  ಹೋಗಿದ್ದಾರೆ. ಯಾವ ಕಾರಣಕ್ಕೆ ನಾಯಕಿ  ಬದಲಾದರು ಎಂಬುದು ಸದ್ಯಕ್ಕಂತೂ  ನಿಗೂಢ. ನಿರ್ದೇಶಕರನ್ನು
ಕೇಳೋಣವೆಂದರೆ ಅವರು  ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.  ಇಂಟರೆಸ್ಟಿಂಗ್ ಅಂದ್ರೆ ಪ್ರಿಯಾಂಕ  ಜಾಗಕ್ಕೆ ತಕ್ಷಣ ರಚಿತಾರಾಮ್  ಬಂದಿದ್ದು.

ಈ ಹಿಂದೆ ಪುನೀತ್ ಜೊತೆ  ‘ಚಕ್ರವ್ಯೆಹ’ ಚಿತ್ರದಲ್ಲಿ ನಟಿಸಿದ್ದ  ರಚಿತಾ ಈಗ ಈ ಚಿತ್ರದಲ್ಲೂ ಅಪ್ಪು  ಜೊತೆಯಾಗಿದ್ದಾರೆ. ಚಿತ್ರೀಕರಣದಲ್ಲಿ  ಪಾಲ್ಗೊಂಡಿದ್ದಾರೆ.  ರಾಕ್‌’ಲೈನ್ ವೆಂಕಟೇಶ್ ಅವರ ನೆಚ್ಚಿನ  ಪ್ರೊಜೆಕ್ಟ್ ಇದಾಗಿದ್ದು, ನಿರ್ದೇಶಕರು ಕೇಳಿದ್ದನ್ನೆಲ್ಲಾ ಪೂರೈಸುತ್ತಿದ್ದಾರೆ ಎನ್ನಲಾಗಿದೆ. ಚಿತ್ರದ ಮತ್ತೊಂದು ನಾಯಕಿ ಪಾತ್ರಕ್ಕೆ ಸದ್ಯದಲ್ಲೇ ಆಯ್ಕೆ ನಡೆಯಲಿದೆ.  

loader