ಬಾಗಲಕೋಟೆಯಿಂದ ಫ್ಯಾಷನ್ ಡಿಸೈನ್ ಕಲಿಯಬೇಕು ಎಂದು ಬೆಂಗಳೂರಿಗೆ ಬಂದ ಅಪೇಕ್ಷಾ ಪುರೋಹಿತ್ ಗಾಂಧಿ ನಗರಕ್ಕೆ ಎಂಟ್ರಿಯಾಗಿದ್ದು ನಟಿಯಾಗಿ. 

‘ಕಾಫಿ ತೋಟ’, ‘ಕಿನಾರೆ’ಯಂತಹ ಚಿತ್ರಗಳಲ್ಲಿ ನಟಿಸಿದ್ದ ಇವರು ಈಗ ತಮ್ಮ ಆಸೆಯಂತೆ ಕಾಸ್ಟ್ಯೂಮ್ ಡಿಸೈನರ್ ಆಗಿದ್ದಾರೆ. ಅದು ಕೋಡ್ಲು ರಾಮಕೃಷ್ಣ ನಿರ್ದೇಶನದ ‘ಮತ್ತೆ ಉದ್ಭವ’ ಚಿತ್ರದ ಮೂಲಕ.

ಕಾಫಿ ತೋಟದ ನಟಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪವನ್ ಒಡೆಯರ್

‘ನಾನು ಬೇಸಿಕಲ್ ಫ್ಯಾಷನ್ ಡಿಸೈನರ್. ಆದರೆ ನನಗೆ ನಟನೆಗೆ ಅವಕಾಶ ಸಿಕ್ಕಿದ್ದರಿಂದ ಅತ್ತ ಗಮನ ನೀಡಿದ್ದೆ ಅಷ್ಟೆ. ನನಗೆ ಸಿನಿಮಾಗೆ ಕಾಸ್ಟ್ಯೂಮ್ ಡಿಸೈನ್ ಮಾಡಬೇಕು ಎನ್ನುವ ಆಸೆ ಇತ್ತು. ಅದು ಈಗ ನೆರವೇರಿದೆ. ದೊಡ್ಡ ಬಜೆಟ್‌ನ ಚಿತ್ರಗಳಿಗೆ ಮಾತ್ರ ಕಾಸ್ಟ್ಯೂಮ್ ಡಿಸೈನ್ ಎನ್ನುವುದು ಇದೆ. ಆದರೆ ಇದು ಬದಲಾಗಿ ಬಜೆಟ್‌ಗೆ ತಕ್ಕಂತೆ ಡಿಸೈನ್ ಮಾಡುವ ಕಲ್ಪನೆ ಕನ್ನಡದಲ್ಲಿ ಬರಬೇಕು’ ಎನ್ನುವ ಅಪೇಕ್ಷಾ ಇಲ್ಲಿಗೆ ಬಂದರೂ ನಟನೆಯಲ್ಲಿಯೂ ಮುಂದುವರೆಯುವ ಆಸೆ ಹೊಂದಿದ್ದಾರೆ. ಈಗಾಗಲೇ ‘ಸಾಗುತ ದೂರ ದೂರ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಮುಂದೆ ಮಹಿಳಾ ಪ್ರಧಾನ ಕತೆಗಳು ಬಂದರೆ ನಟನೆ ಮುಂದುವರಿಸಲಿದ್ದಾರೆ. 

ಪವನ್ ಒಡೆಯರ್ ಹೆಂಡತಿ ಕೊಟ್ಟ ವಿಶೇಷ ಬರ್ತಡೇ ಗಿಫ್ಟ್ !