ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ #BottleCapChallenge | ಮೊದಲ ಬಾರಿಗೆ ಅಕ್ಷಯ್ ಕುಮಾರ್ ಈ ಚಾಲೆಂಜ್ ಸ್ವೀಕರಿಸಿದ್ದಾರೆ | ಗಣೇಶ್ ಕೂಡಾ ಈ ಚಾಲೆಂಜ್ ನಲ್ಲಿ ಸಕ್ಸಸ್ ಆಗಿದ್ದಾರೆ. 

ಸೋಷಿಯಲ್ ಮೀಡಿಯಾಗಳಲ್ಲಿ ಆಗಾಗ ಚಾಲೆಂಜ್ ಗಳು ಶುರುವಾಗುತ್ತವೆ. ಕಿಕಿ ಚಾಲೆಂಜ್ ನಂತರ ಯಾವುದೂ ಅಷ್ಟೊಂದು ಸದ್ದು ಮಾಡಿರಲಿಲ್ಲ. ಇದೀಗ #BottleCapChallenge ಎಂದು ಶುರು ಮಾಡಲಾಗಿದೆ. ಸೆಲಬ್ರಿಟಿಗಳು ಈ ಚಾಲೆಂಜನ್ನು ಸ್ವೀಕರಿಸುತ್ತಿದ್ದಾರೆ.

ಏನಿದು #BottleCapChallenge ಚಾಲೆಂಜ್? 

ವಾಟರ್ ಬಾಟಲ್ ಮುಚ್ಚಳವನ್ನು ಸ್ವಲ್ಪ ಓಪನ್ ಮಾಡಿ ಇಟ್ಟಿರಬೇಕು. ಸ್ಪರ್ಧಿಗಳು ಆ ಮುಚ್ಚಳವನ್ನು ಕಾಲು ಬೆರಳಿನಿಂದ ಒದ್ದು ಬೀಳಿಸಬೇಕು. ಆದರೆ ಬಾಟಲ್ ಬೀಳಬಾರದು. ಬರೀ ಮುಚ್ಚಳ ಮಾತ್ರ ಬೀಳಬೇಕು. 

ಈ ವಾಟರ್ ಬಾಟಲ್ ಚಾಲೆಂಜನ್ನು ನಟ ಅಕ್ಷಯ್ ಕುಮಾರ್ ಸ್ವೀಕರಿಸಿದ್ದಾರೆ.ಅದೇ ರೀತಿ ಗೋಲ್ಡನ್ ಸ್ಟಾರ್ ಗಣೇಶ್ ಕೂಡಾ ಈ ಚಾಲೆಂಜನ್ನು ಸ್ವೀಕರಿಸಿದ್ದಾರೆ. ಅರ್ಜುನ್ ಸರ್ಜಾ ಕೂಡಾ ಈ ಚಾಲೆಂಜನ್ನು ಸ್ವೀಕರಿಸಿ ಮುಚ್ಚಳವನ್ನು ಬೀಳಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. 

View post on Instagram
View post on Instagram