ಬೆಂಗಳೂರು (ಜ.27): ರಾಕಿಂಗ್ ಸ್ಟಾರ್ ಯಶ್ ಸಮಾಜಸೇವೆಯಲ್ಲಿ ಸದಾ ಮುಂದು. ಯಶೋಮಾರ್ಗದ ಮೂಲಕ ಜನ ಸಾಮಾನ್ಯರನ್ನು ತಲುಪುವ ಪ್ರಯತ್ನದಲ್ಲಿದ್ದಾರೆ.

ಇದುವರೆಗೂ ಕೆಜಿಎಫ್ ಮಾಡಿದ ಕಲೆಕ್ಷನ್ ಎಷ್ಟು ಗೊತ್ತಾ?

 ಕೇವಲ ಸಿನಿಮಾ ಮಾತ್ರವಲ್ಲ ಜನರ ಕಷ್ಟಗಳಿಗೂ ಸ್ಪಂದಿಸುತ್ತಾರೆ.  ಇದೀಗ ಮೈಸೂರನ್ನು ನಂಬರ್ 1 ಮಾಡಲು ಮುಂದಾಗಿದ್ದಾರೆ. ಸ್ವಚ್ಛ ಸರ್ವೇಕ್ಷಣ್ ಅಭಿಯಾನದಲ್ಲಿ ಭಾಗಿಯಾಗಲು ಯಶ್ ಜನರ ಬಳಿ ಮನವಿ ಮಾಡಿದ್ದಾರೆ. 

ಯಶ್‌ ಹೂಳೆತ್ತಿಸಿದ್ದ ಕೆರೆಯಿಂದಾಗಿ ಬರ ಮಾಯ!

2019 ರಲ್ಲಿ ಮೈಸೂರನ್ನು ಮತ್ತೆ ಸ್ವಚ್ಛ ನಗರವನ್ನಾಗಿ ಮಾಡಲು ಯಶ್ ಮುಂದಾಗಿದ್ದಾರೆ. ಇದಕ್ಕೆ ಸಹಕರಿಸುವಂತೆ ಸಾರ್ವಜನಿಕರಲ್ಲಿ ಕೇಳಿಕೊಂಡಿದ್ದಾರೆ. ಈ ಬಗ್ಗೆ ವಿಡಿಯೋ ಮಾಡಿ ಫೇಸ್ ಬುಕ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.