ರಿಯಲ್ ಸ್ಟಾರ್ ಉಪೇಂದ್ರ ಮತ್ತು ಉಪ್ಪಿ ಕಾಂಬಿನೇಷನ್‌ನ ಈ ಚಿತ್ರ ಇಂಥದ್ದೊಂದು ಕಮಾಲ್ ಮಾಡುತ್ತದೆ ಎಂಬ ಅಂದಾಜು ಬಿಡುಗಡೆ ಪೂರ್ವದಲ್ಲಿಯೇ ಸಿಕ್ಕಿ ಹೋಗಿತ್ತು. ಯಾಕೆಂದರೆ, ಹಾಡುಗಳು ಮತ್ತು ಟ್ರೈಲರ್ ಮೂಲಕ ಐ ಲವ್‌ ಯೂ ಹುಟ್ಟಿಸಿದ್ದ ಭರವಸೆಯೇ ಅಂಥದ್ದಿತ್ತು. ಆರ್‌ ಚಂದ್ರು ಅದನ್ನು ಹುಸಿಗೊಳಿಸದೇ, ಕುಟುಂಬ ಸಮೇತರಾಗಿ ನೋಡುವ ದೃಷ್ಯ ಕಾವ್ಯವನ್ನೇ ಕಟ್ಟಿ ಕೊಟ್ಟಿದ್ದಾರೆ.

ಎರಡು ವರ್ಷಗಳ ನಂತರ ತೆರೆ ಮೇಲೆ ಉಪೇಂದ್ರ!

 

ಬಾಯಿಂದ ಬಾಯಿಗೆ ಹರಡಿ ಒಳ್ಳೆ ಅಭಿಪ್ರಾಯ ಮತ್ತು ಫ್ಯಾಮಿಲಿ ಪ್ರೇಕ್ಷಕರನ್ನೂ ಕೈ ಹಿಡಿದು ಕರೆತರುವ ಕಸುವಿನೊಂದಿಗೆ ಈ ಚಿತ್ರವೀಗ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಇದಲ್ಲದೇ ಮೊದಲ ದಿನದಂದೇ ಐ ಲವ್ ಯೂ ಖುದ್ದು ಉಪೇಂದ್ರರವರ ಇಷ್ಟೂ ವರ್ಷಗಳ ದಾಖಲೆಗಳನ್ನು ಸರಿಗಟ್ಟುವಂತೆ ಕಲೆಕ್ಷನ್ ಮಾಡಿದ್ದು, ಅದರಲ್ಲಿ ದಾಖಲೆ ನಿರ್ಮಿಸಿದೆ. ಅದು ದಿನದಿಂದ ದಿನಕ್ಕೆ ಇಮ್ಮಡಿಸುತ್ತಲೇ ಸಾಗುತ್ತಿದೆ.

ಚಿತ್ರ ವಿಮರ್ಶೆ: ಐ ಲವ್‌ ಯೂ

ಅಲ್ಲಿಗೆ ಹಿತ ಮಿತವಾಗಿ ಬೆರೆತಿದ್ದ ಉಪೇಂದ್ರ ಮತ್ತುಚಂದ್ರು ಅವರ ಶೈಲಿಗಳು ದೊಡ್ಡ ಮಟ್ಟದಲ್ಲಿಯೇ ಗೆಲುವು ದಾಖಲಿಸುತ್ತಿವೆ. ಉಪ್ಪಿಅಭಿಮಾನಿಗಳಂತೂ ಐ ಲವ್ ಯೂ ನೋಡಿ ಥ್ರಿಲ್ ಆಗಿದ್ದಾರೆ. ಅವರೆಲ್ಲರದ್ದು ದಶಕಗಳ ಹಿಂದಿನ ಉಪ್ಪಿ ಫ್ಲೇವರ್ ಮತ್ತೆ ಸಿಕ್ಕ ಸಂತಸ. ಈ ಚಿತ್ರದ ಮೂಲಕ ಕೇವಲ ಒಳ್ಳೆಯ ಸುತ್ತಲಿನ ಅಂಶಗಳನ್ನು ಮಾತ್ರವೇ ಹೇಳದೇ ಸವಕಲಾಗುತ್ತಿರೋ ಸಂಬಂಧಗಳ ದುರಂತವನ್ನೂ ಸೂಕ್ಷ್ಮವಾಗಿ ಬಿಚ್ಚಿಡಲಾಗಿದೆ. ಪ್ರೀತಿ, ಪ್ರೇಮ, ಫಿಲಾಸಫಿಗಳಾಚೆಗೆ ಬದುಕಿನ ದರ್ಶನ ಮಾಡುವಂಥ ಸಂದೇಶವನ್ನೂ ಕುಟ್ಟಿದ್ದಾರೆ. ಈ ಮೂಲಕ ಪೊಗರಸ್ತಾದ ಮನೋರಂಜನಾ ಪ್ಯಾಕೇಜಿನಂತಿರೋ ಈ ಚಿತ್ರವನ್ನು ಪ್ರೇಕ್ಷಕರು ಮಹಾ ಗೆಲುವಿನತ್ತ ಕರೆದೊಯ್ಯುತ್ತಿದ್ದಾರೆ.