ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟ ಸುನೀಲ್ ರಾವ್

Actor Sunil Rao marriage with Shreya
Highlights

ಎಕ್ಸ್ ಕ್ಯೂಸ್ ಮೀ ಚಿತ್ರದ ಸುನೀಲ್ ರಾವ್  ಮದುವೆ

ಗೆಳತಿ ಶ್ರೇಯಾ ಐಯ್ಯರ್ ಜೊತೆ ಸುನೀಲ್ ವಿವಾಹ

ನಗರದ ಜೆ.ಪಿ.ನಗರದಲ್ಲಿ ಅದ್ದೂರಿ ವಿವಾಹ
 

ಬೆಂಗಳೂರು(ಜೂ.25): ಎಕ್ಸ್ ಕ್ಯೂಸ್ ಮೀ ಚಿತ್ರದ ನಾಯಕ ನಟ ಸುನೀಲ್ ರಾವ್ ದಾಂಪತ್ಯ ಜೀವನಕ್ಕೆ ಕಾಲಿಟ್ಡಿದ್ದಾರೆ. ಜೆ.ಪಿ.ನಗರದಲ್ಲಿಂದು ಗೆಳತಿ ಶ್ರೇಯಾ ಐಯ್ಯರ್ ಅವರನ್ನು ಸುನೀಲ್ ವಿವಾಹ ಆಗಿದ್ದಾರೆ.

ವೆಬ್ ಸಿರೀಸ್ ಮಾಡೋವಾಗಲೇ  ಶ್ರೇಯಾ ಹಾಗೂ ಸುನೀಲ್ ಪರಿಚಯವಾಗಿತ್ತು. ಗುರು ಹಿರಿಯರ ಸಮ್ಮತಿಯೊಂದಿಗೆ ಸುನೀಲ್ ಹಾಗೂ ಶ್ರೇಯಾ ವಿವಾಹ‌ ನಡೆದಿದೆ. ಶ್ರೇಯಾ ಐಯರ್ ಕಾಸ್ಟೂಮ್ ಡಿಸೈರ್ ಆಗಿ ಕೆಲಸ ಮಾಡುತ್ತಿದ್ದಾರೆ. ಸುನೀಲ್ ವೆಬ್ ಸಿರೀಸ್ ಚಿತ್ರ ಕ್ಕೂ ಕೆಲಸ ಮಾಡಿದ್ದಾರೆ.


ಸುನೀಲ್ ರಾವ್ ಲೂಸ್ ಕನೆಕ್ಷನ್ ವೆಬ್ ಸಿರೀಸ್ ಮೂಲಕ ವಾಪಸ್ ಬಂದಿದ್ದಾರೆ‌. ತುರ್ತು ನಿರ್ಗಮನ ಚಿತ್ರದಲ್ಲೂ ಅಭಿನಯಿಸಿದ್ದಾರೆ. ಮದುವೆಗೆ ಸುನೀಲ್ ಸ್ನೇಹಿತರಾದ ಅನುಪಮಾ ಗೌಡ, ಡೈರೆಕ್ಟರ್ ರಘು ಶಾಸ್ತ್ರಿ,ಆರ್.ಜೆ.ಪ್ರದೀಪ್ ಬದುವೆಗೆ ಆಗಮಿಸಿ ನವ ಜೋಡಿಗೆ ಶುಭ  ಕೋರಿದರು.

loader