19ನೇ ವಯಸ್ಸಿನಲ್ಲಿಯೇ ಪೋರ್ನ್​ ಲೋಕಕ್ಕೆ ಅರಿಯದೇ ಹೋದ ಬಗ್ಗೆ ಪೋರ್ನ್​ ಸ್ಟಾರ್​ ಲಾನಾ ರೋಡ್ಸ್ ಹೇಳಿದ್ದೇನು? 

ನನಗೆ ಆಗಿನ್ನೂ 19 ವರ್ಷ ವಯಸ್ಸು. ಮನೆಯಲ್ಲಿ ಕಷ್ಟವಿತ್ತು. 100 ಡಾಲರ್​ ಅಂದರೇನೆ ಅದು ಲಕ್ಷಾಂತರ ರೂಪಾಯಿಗೆ ಸಮ ಎಂದು ಅಂದುಕೊಂಡವಳು ನಾನು. ಆದರೆ ನನಗೆ 1200 ಡಾಲರ್​ ಗಳಿಸಬಹುದು ಎಂದು ಹೇಳಿದಾಗ ಸ್ವರ್ಗಕ್ಕೆ ಮೂರೇ ಗೇಣು ಅಂದುಕೊಂಡೆ. ಏಜೆಂಟ್​ ಒಬ್ಬ ನನ್ನನ್ನು ಕರೆದುಕೊಂಡ ಹೋದ. ನನ್ನ ಜೊತೆ ಏನಾಗುತ್ತಿದೆ ಎಂದೇ ತಿಳಿದಿರಲಿಲ್ಲ. ಕೊನೆಗೆ ನಾನು ಹೋಗಿದ್ದು ಪೋರ್ನ್​ ಲೋಕಕ್ಕೆ. ಹೇಳಿಕೊಳ್ಳಲಾಗದ ನೋವು ಅನುಭವಿಸಿದ್ದೇನೆ. ಪ್ರತಿ ದಿನವೂ 40 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಯ ಜೊತೆ ಮಲಗಬೇಕಿತ್ತು. ಅದರ ವಿಡಿಯೋ ಮಾಡುತ್ತಿದ್ದ ಅರಿವೂ ನನಗೆ ಇರಲಿಲ್ಲ. ಅದೊಂದು ದಿನ ಆ ವಿಡಿಯೋ ನೋಡಿದಾಗ ಅದರಲ್ಲಿ ಇದ್ದದ್ದು ನಾನೇ ಎಂದು ನೋಡಿದಾಗ ನಾನು ಏನು ಮಾಡುತ್ತಿದ್ದೇನೆ, ನನ್ನನ್ನು ಎಲ್ಲಿಗೆ ಕರೆದುಕೊಂಡು ಹೋದರು ಎನ್ನುವ ಅರಿವಾಯ್ತು. ಅದಾಗಲೇ ನನ್ನ ವಿಡಿಯೋಗಳು ಟಾಪ್​ ಲೆವೆಲ್​ನಲ್ಲಿ ಓಡುತ್ತಿತ್ತು. ಇಂದಿಗೂ ಅದರ ವಿಡಿಯೋಗಳು ಚಾಲ್ತಿಯಲ್ಲಿವೆ. ಈ ವೃತ್ತಿಗೆ ಹೋಗಿ ಎಂಟೇ ತಿಂಗಳಿನಲ್ಲಿ ನನಗೆ ನಾನು ಎಲ್ಲಿದ್ದೇನೆ ಎನ್ನುವ ಅರಿವಾಗಿ ಅದನ್ನು ಬಿಟ್ಟುಬಂದೆ. ನನ್ನ ವಿಡಿಯೋಗಳನ್ನು ಡಿಲೀಟ್​ ಮಾಡುವಂತೆ ಹೇಳಿದರೂ ಅದಾವುದೂ ಡಿಲೀಟ್​ ಆದಂತಿಲ್ಲ...

ಹೀಗೆಂದು ತಮ್ಮ ಬದುಕಿನ ಕರಾಳ ಅಧ್ಯಾಯವನ್ನು ತೆರೆದಿಟ್ಟಿದ್ದಾರೆ ಟಾಪ್​ ಪೋರ್ನ್​ ಸ್ಟಾರ್​ ಎಂದೇ ಗುರುತಿಸಿಕೊಂಡಿರೋ ಲಾನಾ ರೋಡ್ಸ್. ಈಗ ಇವರಿಗೆ 27 ವರ್ಷ ವಯಸ್ಸು. ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು, ನನ್ನ ವಿಚಾರವನ್ನು ಹೇಳಿಕೊಳ್ಳಲು ನನಗೆ ಯಾವುದೇ ಮುಜುಗರವಿಲ್ಲ. ಆದರೆ ನನ್ನಂತೆಯೇ ಸರಿಯಾದ ಮಾರ್ಗದರ್ಶನವಿಲ್ಲದೇ ಅದೆಷ್ಟೋ ಹುಡುಗಿಯರು ಪೋರ್ನ್​ ಲೋಕಕ್ಕೆ ಹೋಗುತ್ತಿದ್ದಾರೆ. ಕೊನೆಗೆ ಅಲ್ಲಿಂದ ಬಂದರೂ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಉದ್ದೇಶದಿಂದ, ನಾಚಿಕೆಯಿಂದ, ಸಮಾಜದ ಮುಂದೆ ಮರ್ಯಾದೆ ಹೋಗುತ್ತದೆ ಎನ್ನುವ ಕಾರಣಕ್ಕೆ ಯಾರ ಮುಂದೆಯೂ ಈ ವಿಷಯವನ್ನು ತಿಳಿಸುವುದೇ ಇಲ್ಲ. ಇನ್ನು ಕೆಲವು ಹುಡುಗಿಯರು ಅಲ್ಲಿಂದ ಬರಬೇಕು ಎಂದರೂ ಬರುವುದು ಸಾಧ್ಯವೇ ಆಗುವುದಿಲ್ಲ, ಜೀವನಪೂರ್ತಿ ನರಳಬೇಕಾಗುತ್ತದೆ. ಮತ್ತೆ ಕೆಲವರು ಬೇರೆ ಮಾರ್ಗವಿಲ್ಲದೇ ಅದೇ ಲೋಕದಲ್ಲಿಯೇ ಮುಂದುವರೆಯುತ್ತಾರೆ. ಕೆಲವೇ ಕೆಲವರು ಮಾತ್ರ ಇಷ್ಟಪಟ್ಟು ಈ ವೃತ್ತಿಯನ್ನು ಇಷ್ಟಪಟ್ಟು ಮಾಡುತ್ತಾರೆ ಎಂದಿದ್ದಾರೆ. 

ಬಿಗ್​ಬಾಸ್​ನಲ್ಲಿ ಅವಕಾಶ ಕೊಡ್ತೆನಂದ, ವಿಡಿಯೋ ಕಳಿಸಿದೆ, ಮಧ್ಯರಾತ್ರಿ ಕರೆದ.. ಆಮೇಲೆ.. ಮನಿಷಾ ಕಹಿ ನೆನಪು

 ಈ ವೃತ್ತಿಯಿಂದ ತುಂಬಾ ಹಿಂಸೆ ಅನುಭವಿಸಿದ್ದೇನೆ. ಜೀವನದಲ್ಲಿ ಸಾಕಷ್ಟು ಪಾಠ ಕಲಿತಿದ್ದೇನೆ. ದಿಢೀರ್​ ದುಡ್ಡು ಮಾಡುವ ಹಂಬದಲ್ಲಿ ತಾವೆಂಥ ಲೋಕಕ್ಕೆ ಹೋಗುತ್ತಿದ್ದೇವೆ ಎನ್ನುವ ಅರಿವಿಲ್ಲದ ಅದೆಷ್ಟೋ ಮಂದಿಯಲ್ಲಿ ನಾನೂ ಒಬ್ಬಳಾಗಿ ಹೋದೆ. ಅಲ್ಲಿಗೆ ಹೋದ ಎಂಟೇ ತಿಂಗಳಿಗೆ ಅದರಿಂದ ಹೊರಕ್ಕೆ ಬಂದರೂ ನನ್ನ ವಿಡಿಯೋಗಳು ಡಿಲೀಟ್​ ಆಗಿಲ್ಲ. ಅವುಗಳನ್ನು ನೋಡಿದಾಗಲೆಲ್ಲಾ ನನಗೆ ನೋವಾಗುತ್ತದೆ ಎಂದಿದ್ದಾರೆ ರೋಡ್ಸ್​. ಬಹಳಷ್ಟು ಹುಡುಗಿಯರು ಸಣ್ಣ ಪಟ್ಟಣಗಳಿಂದ ಬರುತ್ತಾರೆ ಮತ್ತು ದುಡ್ಡಿದಾಗಿ ಕಷ್ಟಪಡುತ್ತಿರುತ್ತಾರೆ. ಅಂಥ ಸಮಯದಲ್ಲಿ ಇದು ದೊಡ್ಡ ಮೊತ್ತ ಎನಿಸಿಬಿಡುತ್ತದೆ ಎಂದಿದ್ದಾರೆ.

ಪೋರ್ನ್​ ಸ್ಟಾರ್​ನಿಂದ ಹೊರ ಬಂದ ಮೇಲೆ ಹಲವಾರು ಯುಟ್ಯೂಬರ್​, ಇನ್​ಸ್ಟಾಗ್ರಾಮರ್​ ಸೇರಿದಂತೆ ಪ್ರಭಾವಿಗಳನ್ನು ಭೇಟಿಯಾದೆ. ಪೋರ್ನ್​ ವಿಡಿಯೋ ಮಾಡಿ ಬರುವ ಹಣಕ್ಕಿಂತಲೂ ಮೂರ್ನಾಲ್ಕು ಪಟ್ಟು ಹೆಚ್ಚಿಗೆ ಹಣ ಅವರು ಕೇವಲ ಪೋಸ್ಟ್​ ಹಾಕುವ ಮೂಲಕ ಗಳಿಸುತ್ತಾರೆ ಎಂದು ತಿಳಿಯಿತು. ಬೇರೆ ಬೇರೆ ವಿಧಗಳಲ್ಲಿ ಖ್ಯಾತಿ ಪಡೆಯಬಹುದು ಎನ್ನುವುದನ್ನು ನಾನು ಮನಗಂಡೆ ಎಂದಿರುವ ಲಾನಾ ರೋಡ್ಸ್, ಇಂಥ ಹುಡುಗಿಯರನ್ನು ಯಾರೂ ನಂಬುವುದಿಲ್ಲ ಎನ್ನುವ ಸತ್ಯವನ್ನೂ ಅರಿತುಕೊಂಡಿದ್ದೇನೆ ಎನ್ನುತ್ತಾರೆ. ತೆರೆಮರೆಯಲ್ಲಿ ಏನು ನಡೆಯುತ್ತಿದೆ ಎಂದು ನಮಗೆ ಅರ್ಥವೇ ಆಗುವುದಿಲ್ಲ. ಆದರೆ ಒಮ್ಮೆ ಪೋರ್ನ್​ ಲೋಕಕ್ಕೆ ಹೋಗಿಬಿಟ್ಟರೆ ಈ ಮಾತನ್ನು ಹೇಳಿದರೂ ಯಾರೂ ನಂಬುವುದಿಲ್ಲ ಎಂದಿದ್ದಾರೆ. ಪುರುಷರಲ್ಲಿ ಏನೂ ಸಮಸ್ಯೆ ಆಗುವುದಿಲ್ಲ. ಅವರಿಗೆ ಬೇಕಿರುವುದು ತೃಪ್ತಿ ಅಷ್ಟೇ. ಆದರೆ ಕೊನೆಗೆ ಬಲಿಯಾಗುವುದು ಹುಡುಗಿಯರು ಮಾತ್ರ ಎನ್ನುತ್ತಾರೆ. 

ಸತ್ತೆನೆಂದು ಸುದ್ದಿ ಮಾಡಿದ ಬಳಿಕ ಈ ಅವತಾರದಲ್ಲಿ ಕಾಣಿಸಿಕೊಂಡ ಪೂನಂ ಪಾಂಡೆ: ವಿಡಿಯೋ ನೋಡಿ ತರಾಟೆ