ಮನಸ್ಸು ಹಗುರವಾಗಲು ಹಿಂದಿಯಲ್ಲಿ 'ದಿ ಕಪಿಲ್ ಶೋ' ಎಂಬ ಕಾಮಿಡಿ ಶೋ ಜನಪ್ರಿಯವಾಗಿದ್ದರೆ, ಕನ್ನಡದಲ್ಲಿ 'ಮಜಾ ಟಾಕೀಸ್' ಅದೇ ಸಾಲಿಗೆ ಸೇರುತ್ತದೆ. ಇಂಥ ಶೋನಲ್ಲಿ ಸಿನಿ ದಿಗ್ಗಜರು ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ. ಒಬ್ಬರ ಕಾಲನ್ನು ಮತ್ತೊಬ್ಬರು ಎಳೆದು, ತಮ್ಮ ಚಿತ್ರಗಳನ್ನು ಪ್ರಮೋಟ್ ಮಾಡುವುದಲ್ಲದೇ, ಹೊಟ್ಟೆ ಹುಣ್ಣಾಗುವಷ್ಟು ನಕ್ಕು, ಸ್ಟುಡಿಯೋದಿಂದ ಹೊರ ಬರುತ್ತಾರೆ. ಇದನ್ನು ನೋಡಿದ ವೀಕ್ಷಕರೂ ಸಾಕಾಗುವಷ್ಟು ನಕ್ಕು, ನೆಮ್ಮದಿಯಾಗುತ್ತಾರೆ.

ಇಂಥ ಕಿರುತೆರೆಯ ಖ್ಯಾತ ಕಾಮಿಡಿ ಶೋನಲ್ಲಿ ಒಂದಾದ ‘ದಿ ಕಪಿಲ್ ಶೋ’ನಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಭಾಗಿಯಾಗಿದ್ದರು.

ಬಾಲಿವುಡ್ ಖ್ಯಾತ ನಟರು ಹಾಗೂ ರಾಜಕಾರಣಿಗಳು ಭಾಗಿಯಾಗುವ ಕಾರ್ಯಕ್ರಮ ಈ ಕಾಮಿಡಿ ಶೋನಲ್ಲಿ ಇದೇ ಮೊದಲು ಕನ್ನಡ ನಟ ಸುದೀಪ್ ಪಾಲ್ಗೊಂಡಿರುವುದು ವಿಶೇಷ.

‘#KapilSharmaShow ಶೋ ಗಾಲಾ ಟೈಂ ಕಳೆದೆ. ಎಂದೂ ನಗದಷ್ಟು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದೇನೆ. ನನ್ನನ್ನು ಬರ ಮಾಡಿ ಕೊಂಡವರಿಗೆ ಧನ್ಯವಾದಗಳು,’ ಎಂದು ಟ್ವೀಟ್ ಮಾಡಿ, ಫೋಟೋಗಳೊಂದಿಗೆ ಶೇರ್ ಮಾಡಿಕೊಂಡಿದ್ದಾರೆ.