ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ ಲಂಡನ್‌ನಲ್ಲಿ ಪತ್ನಿ ಗೀತಾ, ಪುತ್ರಿ ನಿವೇದಿತಾ ಹಾಗೂ ಸಹೋದರ ಪುನೀತ್ ಜೊತೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್‌ ಯಂಗ್ ಆ್ಯಂಡ್‌ ಎನರ್ಜಿಟಿಕ್ ಮ್ಯಾನ್ ಶಿವರಾಜ್‌ಕುಮಾರ್ ತನ್ನ 58ನೇ ಹುಟ್ಟುಹಬ್ಬವನ್ನು ಕುಟುಂಸ್ಥರೊಂದಿಗೆ ಸಿಂಪಲ್ ಆಗಿ ಆಚರಿಸಿದ್ದಾರೆ.

ಭುಜದ ನೋವಿನಿಂದ ಬಳಲುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಲಂಡನ್‌ಗೆ ತೆರಳಿದ್ದ ಶಿವಣ್ಣಗೆ ಸುಸೂತ್ರವಾಗಿ ಶಸ್ತ್ರ ಚಿಕಿತ್ಸೆ ನಡೆದಿದೆ. ವೈದ್ಯರ ಸೂಚನೆಯಂತೆ 20 ದಿನಗಳ ಕಾಲ ವಿಶ್ರಾಂತಿಯಲ್ಲಿರಬೇಕಿದ್ದು, ಶಿವಣ್ಣ ಅಲ್ಲಿಯೇ ರೆಸ್ಟ್‌ ಪಡೆದು ನಂತರ ಬೆಂಗಳೂರಿಗೆ ವಾಪಸಾಗಲಿದ್ದಾರೆ.

ಕೊನೆಗೂ ಸೋಷಿಯಲ್ ಮೀಡಿಯಾಗೆ ಎಂಟ್ರಿ ಕೊಟ್ರು ಶಿವಣ್ಣ

ಇನ್ನು 58ಕ್ಕೆ ಎನಪ್ಪಾ ಸ್ಪೇಷಲ್‌ ಅಂದ್ರೆ ಹುಟ್ಟು ಹಬ್ಬದ ಹಿಂದಿನ ದಿನ ಶಿವಣ್ಣ ಟ್ಟಿಟ್ಟರ್‌ ಹಾಗೂ ಫೇಸ್‌ಬುಕ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಹಾಗೂ ರಾತ್ರಿ 12 ಆಗುತ್ತಿದಂತೆ ಬರ್ತಡೇ ಬಾಯ್‌ ಶಿವಣ್ಣ ಚಾಕೋಲೇಟ್‌ ಕೇಕ್ ಕಟ್‌ ಮಾಡಿದ್ದಾರೆ. ಕೈಗೆ ಬ್ಯಾಂಡೇಜ್‌ ಇದ್ದರು ಅದನ್ನು ನಿಧಾನವಾಗಿ ತೆಗೆದು ಕೇಟ್‌ ಕಟ್‌ ಮಾಡಿದ್ದಾರೆ.

View post on Instagram