ಕನ್ನಡ ಚಿತ್ರರಂಗದ ಹಿರಿಯ ನಟ ಸತ್ಯಜೀತ್ ಮಗಳ ಮದುವೆಯ ಸಂಭ್ರಮದಲ್ಲಿದ್ದಾರೆ.
ಬೆಂಗಳೂರು (ಜ.03): ಕನ್ನಡ ಚಿತ್ರರಂಗದ ಹಿರಿಯ ನಟ ಸತ್ಯಜೀತ್ ಮಗಳ ಮದುವೆಯ ಸಂಭ್ರಮದಲ್ಲಿದ್ದಾರೆ.
ಗ್ಯಾಂಗ್ರೀನ್'ನಿಂದ ಕಾಲು ಕಳೆದುಕೊಂಡು ನೋವಿನಲ್ಲಿಯೇ ಇದ್ದು ಬಣ್ಣದಲೋಕದಿಂದ ದೂರವೇ ಉಳಿದಿದ್ದ ಸತ್ಯಜಿತ್, ಇಂದು ಪ್ರೆಸ್'ಕ್ಲಬ್'ಗೆ ಬಂದಿದ್ದರು. ಮಾಧ್ಯಮಗಳ ಮೂಲಕ ಮಗಳ ಮದುವೆಗೆ ಆಹ್ವಾನಿಸಿದರು. ಲಗ್ನ ಪತ್ರಿಕೆಯನ್ನೂ ಕೊಟ್ಟು ಎಲ್ಲರನ್ನೂ ಆಮಂತ್ರಿಸಿದರು.ಮಗಳು ಮಾಹಿ ಸ್ವಾಲೆಹಾ ಸದ್ಯ ಜೆಟ್ ಏರ್ವೇಸ್'ನಲ್ಲಿ ಪೈಲೆಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಇದೇ ಜನವರಿ7 ರಂದು ಯಲಹಂಕದ ಮಧುರ ಮಿಲನಾ ಕನ್ವೆಷನ್ ಸೆಂಟರ್'ನಲ್ಲಿ ಕಾರವಾರ ಮೂಲದ ಬೆಂಗಳೂರು ನಿವಾಸಿ ತೌಸಿಫ್ ಖಾನ್ ರನ್ನ ಮದುವೆಯಾಗುತ್ತಿದ್ದಾರೆ. ಈ ವಿಚಾರವನ್ನ ತಿಳಿಸಲು ಪತ್ನಿ ಸಮೇತ ನಟ ಸತ್ಯಜೀತ ಪ್ರೆಸ್'ಕ್ಲಬ್'ಗೆ ಬಂದಿದ್ದರು.
