ಕೇವಲ 12 ತಿಂಗಳಿನಲ್ಲಿ ಮೂರು ಸಿನಿಮಾ ಮಾಡಿ, ಆ ಮೂರೂ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಹಿಟ್ ಕಂಡು, ಕೋಟಿ ಕೋಟಿ ರುಪಾಯಿ ಹಣಗಳಿಸುವುದು ಕಡಿಮೆ ಮಾತಲ್ಲ. ಇದು ರಣವೀರ್ ಸಿಂಗ್ ಎನ್ನುವ ಪ್ರತಿಭಾವಂತ ನಟನ ಪಾಲಿಗೆ ಸಾಧ್ಯವಾಗಿದೆ.

ರಣವೀರ್ ಕೈಯಲ್ಲಿ ದೀಪಿಕಾ ಚಪ್ಪಲಿ: ಏನಿದು ಫೋಟೋ ಕಥೆ?

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತ್’, ರೋಹಿತ್ ಶೆಟ್ಟಿ ನಿರ್ದೇಶನದ ‘ಸಿಂಬಾ’, ಜೋಯಾ ಅಕ್ತರ್ ನಿರ್ದೇಶನದ ‘ಗಲ್ಲಿ ಬಾಯ್’ ಈ ಮೂರೂ ಚಿತ್ರಗಳು ರಣವೀರ್ ಪಾಲಿಗೆ ಸೂಪರ್ ಹಿಟ್ ಖ್ಯಾತಿ ಕೊಟ್ಟ ಚಿತ್ರಗಳು. ಇವುಗಳ ಒಟ್ಟು ಕಲೆಕ್ಷನ್ 800 ಕೋಟಿ ರುಪಾಯಿ. ಸ್ವತಃ ರಣವೀರ್‌ಗೂ ಈ ಬಗ್ಗೆ ತುಂಬಾ ಸಂತೋಷವೂ ಇದೆ. ಅದನ್ನವರು
ಹೇಳಿಕೊಂಡ ರೀತಿ ಇದು. ‘ಸಿನಿಮಾ ಗೆದ್ದು, ನಿರ್ಮಾಪಕ ಖುಷಿಯಾಗುವುದು ನನಗೂ ಖುಷಿ ಕೊಡುತ್ತದೆ. ಈ ನಿಟ್ಟಿನಲ್ಲಿ ಎಲ್ಲಾ ಚಿತ್ರಗಳು ಗೆಲ್ಲಬೇಕು. ಬಾಲಿವುಡ್ ದೊಡ್ಡದಾಗಿ ಬೆಳೆಯಬೇಕು. ಐ ಲವ್ ಹಿಂದಿ ಫಿಲ್ಮ್, ಐ ಲವ್ ಇಂಡಸ್ಟ್ರೀ, ನಾನು ಇಡೀ ಇಂಡಸ್ಟ್ರಿಯ ನಾಯಕತ್ವ ವಹಿಸಲು ತಯಾರಿದ್ದೇನೆ. ಬಾಲಿವುಡ್ ಅತಿ ಎತ್ತರಕ್ಕೆ ಬೆಳೆಯಬೇಕು ಎಂಬುದೇ ನನ್ನ ಆಸೆ’ ಎಂದು ಕೋಟಿ ಕೋಟಿ ಸರದಾರ ಸಿಂಗ್ ಹೇಳಿಕೊಂಡಿದ್ದಾರೆ.