ಮಿಸ್ಟರ್ ಆ್ಯಂಡ್ ಮಿಸ್ ರಾಮಲೀಲಾ ನೋಡಿದರೆ ಸಾಕು ವಾ....! ಎಂಥಾ ಸೂಪರ್ ಕಪಲ್ಸ್‌ ಇವರು ಎಂದನಿಸುವುದು ಗ್ಯಾರಂಟಿ. ಅದರಲ್ಲೂ ಕೆಲವೊಮ್ಮೆ ರಣವೀರ್ ಮಾಡುವ 'HusbandGoals' ಎಲ್ಲಾ ಹುಡುಗಿಯರ ಹಾರ್ಟ್‌ ಟಚ್ ಮಾಡಿದೆ.

ಕೆಲ ದಿನಗಳ ಹಿಂದೆ ರಣವೀರ್ ಹಾಗೂ ದೀಪಿಕಾ ಮುಂಬೈನಲ್ಲಿ ನಡೆದ ಸ್ನೇಹಿತರ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆ ವೇಳೆ ಪತ್ರಕರ್ತನೊಬ್ಬ ರಣವೀರ್ ಕೈಯಲ್ಲಿ ದೀಪಿಕಾಳ ಹೈ ಹೀಲ್ಸ್ ಇರುವುದನ್ನು ಕ್ಲಿಕ್ ಮಾಡಿದ್ದಾರೆ. ಆ ಫೋಟೋ ಎಲ್ಲೆಡೆ ವೈರಲ್‌ ಆಗುತ್ತಿದೆ.

 

ರಣವೀರ್ ಸದ್ಯಕ್ಕೆ 83 ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು ದೀಪಿಕಾ ’ಚಪಾಕ್’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇವರಿಬ್ಬರಲ್ಲಿ ವಿಶೇಷವೇನೆಂದರೆ ಎಷ್ಟೇ ಬ್ಯುಸಿ ಶೆಡ್ಯೂಲ್‌ನಲ್ಲಿದ್ದರೂ ಒಬ್ಬರಿಗೊಬ್ಬರು ಪರ್ಸನಲ್ ಟೈ ಕೊಡುತ್ತಾರಂತೆ.