ಕನ್ನಡದ ಚಿತ್ರರಂಗದ ಪಾಲಿಗೆ ರಮೇಶ್‌ ಅರವಿಂದ್‌ ಮಾಡದೆ ಇರುವ ಪಾತ್ರಗಳಿಲ್ಲ. ಹತ್ತು ಹಲವು ಬಗೆಯ ಪಾತ್ರಗಳಿಗೂ ಬಣ್ಣ ಹಚ್ಚಿ ಸೈ ಎನಿಸಿಕೊಂಡ ಖ್ಯಾತಿ ಅವರದ್ದು. ವಿಶೇಷ ಅಂದ್ರೆ ಒಂದೊಂದು ಕಾಲಘಟ್ಟದಲ್ಲೂ ಒಂದೊಂದು ಬಗೆಯ ಪಾತ್ರಗಳು ಟ್ರೆಂಡ್‌ ಆಗಿವೆ. ಸರಣಿಯಂತೆ ಆ ಪಾತ್ರಗಳಲ್ಲಿ ಅವರು ಅಭಿನಯಿಸಿದ್ದಾರೆನ್ನುವುದು ವಿಶೇಷ ಮತ್ತು ವಿಶಿಷ್ಟ. ಅದನ್ನು ಅವರೇ ನೆನಪಿಸಿಕೊಳ್ಳುತ್ತಾರೆ.

ಭೈರಾದೇವಿಯಲ್ಲಿ ಪೊಲೀಸ್‌, ‘ಶಿವಾಜಿ ಸುರತ್ಕಲ್‌’ ಚಿತ್ರದಲ್ಲಿ ಪತ್ತೇದಾರ, 100ನಲ್ಲಿ ಸೈಬರ್‌ ಕ್ರೈಮ್‌ ಪೊಲೀಸ್‌ ಹೀಗೆ ಪೊಲೀಸ್‌ ಪಾತ್ರಗಳೇ ಸಿಗುತ್ತಿರುವ ಕುರಿತೂ ರಮೇಶ್‌ ಮಾತುಗಳು ಇಲ್ಲಿವೆ.

ಶಿವಾಜಿ ಸುರತ್ಕಲ್ ನಲ್ಲಿ ಡಿಟೆಕ್ಟವ್ ಕೆಲಸ ಶುರು ಮಾಡಿದ ರಮೇಶ್ ಅರವಿಂದ್!

- ಅದೇನೋ ಗೊತ್ತಿಲ್ಲ, ಒಂದೊಂದು ಪಾತ್ರ ಆಯಾ ಸಂದರ್ಭದಲ್ಲಿ ಟ್ರೆಂಡ್‌ ಸೆಟರ್‌ ಥರ ಆಗಿವೆ. ತ್ಯಾಗರಾಜನ ಪಾತ್ರಗಳು ಒಂದು ಕಾಲದಲ್ಲಿ ದೊಡ್ಡ ಕ್ರೇಜ್‌ ಆಗಿದ್ದವು. ನಾನೇ ಸಾಕು ಎನಿಸುವಷ್ಟುಸಿನಿಮಾಗಳಲ್ಲಿ ಅಂತಹ ಪಾತ್ರ ಮಾಡಬೇಕಾಗಿ ಬಂತು. ಅನಂತರ ಕಾಮಿಡಿ ಆಧಾರಿತ ಹೀರೋ ಪಾತ್ರಗಳು. ಅವು ಕೂಡ ಸಾಕಷ್ಟುಬಂದವು. ರಾಮ ಶಾಮ ಭಾಮ ಚಿತ್ರದ ನಂತರ ಮತ್ತೊಂದು ಬಗೆಯ ಪಾತ್ರ. ಹೀಗೆ ಆಯಾ ಸಂದರ್ಭದಲ್ಲಿ ನಾನೇ ಸಾಕು ಎನ್ನುವಷ್ಟುಒಂದೊಂದು ಬಗೆಯ ಪಾತ್ರಗಳಲ್ಲಿ ಅಭಿನಯಿಸುವ ಸೌಭಾಗ್ಯ ನನ್ನದು. ಆ ಸರಣಿಯಲ್ಲಿ ಈಗ ಪೊಲೀಸ್‌ ಪಾತ್ರ.

ಇತ್ತೀಚಿನ ದಿನಗಳಲ್ಲಿ ನಾನು ತುಂಬಾ ತಾಳ್ಮೆಯಿಂದ ಅಭಿನಯಿಸುವ ಕಮಿಟ್‌ಮೆಂಟ್‌ ಮೂಲಕ ಹತ್ತಿಪ್ಪತ್ತು ಕತೆ ಕೇಳಿದ್ದೇನೆ. ಅಷ್ಟುಕತೆಗಳ ಪೈಕಿ ಆರೇಳು ಸಿನಿಮಾಗಳಲ್ಲೂ ಕ್ರೈಮ್‌ ಥ್ರಿಲ್ಲರ್‌ ಪಾತ್ರಗಳೇ. ವಿಶೇಷ ಅಂದ್ರೆ ಅವೆಲ್ಲ ಐಪಿಎಸ್‌ ಸೇರಿದಂತೆ ವೈರಟಿ ಪೊಲೀಸ್‌ ಪಾತ್ರಗಳೇ ಆಗಿದ್ದವು. ನನಗೆ ಬರುವ ಪಾತ್ರಗಳೇ ಹಾಗಿವೆ. ಅದರಲ್ಲಿ ನಾನು ಆಯ್ಕೆ ಮಾಡಿಕೊಂಡ ಪಾತ್ರಗಳು ಕ್ರೈಮ್‌ ಪೊಲೀಸ್‌, ಡಿಟೆಕ್ಟಿವ್‌ ಪೊಲೀಸ್‌ ಮತ್ತು ಸೈಬರ್‌ ಕ್ರೈಮ್‌ ಪೊಲೀಸ್‌. ಆ ಮೂರು ಪಾತ್ರಗಳು ಇಂಟರೆಸ್ಟಿಂಗ್‌ ಆಗಿವೆ ಎನ್ನುವುದು ವಿಶೇಷ. - ರಮೇಶ್‌ ಅರವಿಂದ್‌, ನಟ

- 100ನಲ್ಲಿ ಸೈಬರ್‌ ಕ್ರೈಮ್‌ ವಿಭಾಗದ ಪೊಲೀಸ್‌. ಪೊಲೀಸ್‌ ಆಗಿಯೇ ಅಭಿನಯಿಸಿರುವ ಭೈರಾದೇವಿ ಹಾಗೂ ಶಿವಾಜಿ ಸುರತ್ಕಲ್‌ ಚಿತ್ರಗಳಲ್ಲಿ ಪಾತ್ರಗಳಿಗೆ ಹೋಲಿಸಿದರೆ ಇದು ತುಂಭಾ ವಿಭಿನ್ನ. ಆ ಕಾರಣಕ್ಕೆ ನನ್ನ ಈಗಿನ ಪೊಲೀಸ್‌ ಪಾತ್ರಗಳಲ್ಲಿ ಏಕತಾನತೆ ಇಲ್ಲ.

ಔಟ್ ಆಫ್ ಔಟ್ ಮಾರ್ಕ್ಸ್ ತೆಗೆದರೆ 'Shake Hand with Ramesh' ಪಟ್ಟಿಯಲ್ಲಿ!

- ಪಾತ್ರಗಳಲ್ಲಿ ಭಿನ್ನತೆ ಇಲ್ಲದಿದ್ದರೆ, ಒಂದೊಂದು ಕನೆಕ್ಷನ್‌ ರೀತಿಯಲ್ಲಿ ಕಂಡರೆ ಸಹಜವಾಗಿಯೇ ಬೇಸರ ಇದ್ದೇ ಇರುತ್ತೆ. ಇದು ನನಗೆ ಮಾತ್ರವಲ್ಲ ಪ್ರೇಕ್ಷಕರಿಗೂ ಇರುತ್ತೆ. ಆದರೆ ಇಲ್ಲಿ ಹಾಗಿಲ್ಲ, ಒಂದಕ್ಕೊಂದು ಪಾತ್ರವೂ ವಿಭಿನ್ನ. ಒಂದರಲ್ಲಿ ಕ್ರೈಮ್‌ ಪೊಲೀಸ್‌, ಮತ್ತೊಂದರಲ್ಲಿ ಡಿಟೆಕ್ಟಿವ್‌ ಪೊಲೀಸ್‌, ನಾನೇ ನಿರ್ದೇಶಿಸುವ ಸಿನಿಮಾದಲ್ಲಿ ಸೈಬರ್‌ ಕ್ರೈಮ್‌ ಪೊಲೀಸ್‌. ನೀವೇ ನೋಡಿ, ತೊಡುವ ಬಟ್ಟೆಯ ಬಣ್ಣ ಒಂದೇ ಆಗಿರಬಹುದು, ಆದರೆ ಅವುಗಳ ವರ್ಕ್ ನೇಚರ್‌ ಎಷ್ಟುವಿಭಿನ್ನ? ಅದೇ ಕಾರಣಕ್ಕೆ ಆ ಪಾತ್ರಗಳಲ್ಲಿ ಅಭಿನಯಿಸುವುದಕ್ಕೂ ಒಂಥರ ಥ್ರಿಲ್‌ ಇದೆ.

- ‘ಈಗ ಜಗತ್ತಿನ ಸಿನಿಮಾ ಟ್ರೆಂಡ್‌ ಕೂಡ ಹಾಗೇ ಇದೆ. ಒಂದು ರೀತಿಯ ಕ್ರೈಮ್‌ ಥ್ರಿಲ್ಲರ್‌ ಸಿನಿಮಾಗಳು, ಪತ್ತೇದಾರಿ ಕತೆಗಳು ಪ್ರೇಕ್ಷಕರನ್ನು ರಂಜಿಸುತ್ತಿವೆ. ಜನರಿಗೆ ಅವು ಇಷ್ಟವಾಗುತ್ತಿವೆ. ಅದಕ್ಕೆ ನಾನು ಅಭಿನಯಿಸುತ್ತಿರುವ ಪಾತ್ರಗಳು ಪೂರಕವಾಗಿವೆ. ಆ ಕಾರಣಕ್ಕೆ ನಾನು ವೆರೈಟಿ ಪೊಲೀಸ್‌ ಪಾತ್ರಗಳಿಗೆ ಬಣ್ಣ ಹುಚ್ಚುವಂತಾಗಿದೆ.

ಗಡ್ಡವಿಲ್ಲದೆ ರಮೇಶ್‌ಗೆ ಭಾರಿ ಸ್ವಾಗತ!