ನಟ ರಜಿನಿಕಾಂತ್ 167 ನೇ ಚಿತ್ರ 'ದರ್ಬಾರ್' ಫಸ್ಟ್ ಲುಕ್ ಬಿಡುಗಡೆಯಾಗಿದ್ದು ಅಭಿಮಾನಿಗಳು ಫುಲ್ ಬೋಲ್ಡ್ ಆಗಿದ್ದಾರೆ.
ಸೂಪರ್ ಸ್ಟಾರ್ ರಜನಿಕಾಂತ್ ತೆರೆಮೇಲೆ ಕಂಡರೆ ಸಾಕು ಸ್ಕ್ರೀನ್ ಗೆ ಹಾಲಿನ ಅಭಿಷೇಕ್ ಮಾಡಿ ಮಂಗಳಾರತಿ ಮಾಡುವಷ್ಟು ಕ್ರೇಜಿ ಫ್ಯಾನ್ ಗಳು ಇದ್ದಾರೆ.
ರಜಿನಿ ನಟನೆಯ 167 ನೇ ತಮಿಳು ಸಿನಿಮಾಗೆ ’ದರ್ಬಾರ್’ ಎಂದು ಹೆಸರಿಡಲಾಗಿತ್ತು. ಅಷ್ಟೇ ಅಲ್ಲದೆ ಇದೇ ಮೊದಲ ಬಾರಿಗೆ ಖಡಕ್ ಐಪಿಎಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ನಿರ್ದೇಶಕ ಮುರುಗದಾಸ್ ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ.
ವಿಶೇಷವೇನೆಂದರೆ ಮುರುಗದಾಸ್ ರಜನಿಗೆ ಅ್ಯಕ್ಷನ್ ಕಟ್ ಹೇಳುತ್ತಿದ್ದು ಇದೇ ಮೊದಲು. ರಜಿನಿಯನ್ನು ಐಪಿಎಸ್ ಅಧಿಕಾರಿ ಹಾಗೂ ಸಾಮಾಜ ಸೇವಕನಾಗಿ ದ್ವಿಪಾತ್ರದಲ್ಲಿ ತೋರಿಸುತ್ತಿದ್ದಾರೆ.
ಇನ್ನು LYCA Productions ನಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾಗೆ ನಯನತಾರ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಶೂಟಿಂಗ್ ಏಪ್ರಿಲ್ 10 ರಿಂದ ಶುರುವಾಗಲಿದ್ದು ಮುಂದಿನ ವರುಷ ಸಂಕ್ರಾಂತಿಗೆ ತೆರೆ ಕಾಣಲಿದೆ.
