Asianet Suvarna News Asianet Suvarna News

(Video)ಮಕ್ಕಳ ಮುಂದೆ ಲವ್ಲಿ ಸ್ಟಾರ್ ಮದುವೆ: ಎರಡನೇ ಬಾರಿ ಮದುವೆಯಾದ ನೆನಪಿರಲಿ ಪ್ರೇಮ್

ಮಕ್ಕಳ ಸಮ್ಮುಖವೇ ಮದುವೆ ಆಗೋ ಚಾನ್ಸ್ ಯಾರಿಗೆ ಸಿಗುತ್ತೆ ಹೇಳಿ? ಅಯ್ಯೋ ಇದೇನಪ್ಪಾ ಮಕ್ಕಳಾದ ಬಳಿಕ ಮದುವೆನಾ ಅಂದ್ಕೊಂಡ್ರಾ? ಇದು ರೀಲ್ ಅಲ್ಲ ರಿಯಲ್... ರಿಯಾಲಿಟಿ ಶೋ ಒಂದರಲ್ಲಿ ನಡೆದ ಮದುವೆಯಾಗಿದ್ದು, ಈ ಚಾನ್ಸ್ ಸಿಕ್ಕಿದ್ದು, ಲವ್ಲಿ ಸ್ಟಾರ್ ಪ್ರೇಮ್'ಗೆ. ಎರಡನೇ ಸಲ ಮದುವೆ ಆಗಿರುವ ಪ್ರೇಮ್-ಜ್ಯೋತಿ ವಿವಾಹ ಸಂಭ್ರಮ ಹೇಗಿತ್ತು? ಇಲ್ಲಿದೆ ದೃಶ್ಯಾವಳಿಗಳು

Actor Prem Married For Second time

ಬೆಂಗಳೂರು(ಆ.19): ನೆನಪಿರಲಿ ಪ್ರೇಮ್ ಕನ್ನಡದ ಹ್ಯಾಂಡ್ಸಮ್ ನಾಯಕ ನಟ. ಚಿತ್ರ ಜೀವನದಲ್ಲಿ ಬಂದು ಹೋದ ಸಿನಿಮಾಗಳಲ್ಲೂ ಲವ್ಲಿತನ ಉಳಿಸಿದವರು. ಆದರೆ, ಈಗ ಈ ಸ್ಟಾರ್'ಗೆ 2 ನೇ ಸಲ ಮದುವೆ ಆಗಿದ್ದಾರೆ. ಹಾಗಂತ ಅದು ಅಷ್ಟು ಈಸಿಯಾಗಿ ಧಕ್ಕಿದ್ದಲ್ಲ.

ಹೌದು..! ಇದು ಡ್ರಾಮಾ ಅಲ್ಲ.ಗಿಮಿಕ್ಕೂ ಅಲ್ಲವೇ ಅಲ್ಲ. ಸ್ಟಾರ್ ಸುವರ್ಣ ವಾಹಿನಿಯ ಡಾನ್ಸ್ ಡಾನ್ಸ್ ಜ್ಯೂನಿಯರ್ಸ್ ಷೋದಲ್ಲಿ ನಡೆದಿರುವುದು. ಈ ವೇದಿಕೆಯಲ್ಲಿ ಭಾವನೆಗಳಿಗೆ ಬೆಲೆ ಕೊಡಲಾಗಿದೆ. ಮದುವೆ ಮಾಡುವ ಮೂಲಕ ಸಂಬಂಧಕ್ಕೆ ಮಹತ್ವ ಕೊಡಲಾಗಿದೆ. ಅದಕ್ಕೆ ಸಾಕ್ಷಿ ಪ್ರೇಮ್-ಜ್ಯೋತಿ ಮರು ಮದುವೆ.

ನೆನಪಿರಲಿ ಪ್ರೇಮ್ ಮದುವೆ ಆಗಿದ್ದಾರೆ. ಎರಡನೇ ಸಲ ಎನ್ನುವುದು ವಿಶೇಷ. ಅದೇ ಹುಡ್ಗಿನೇ ಎನ್ನುವುದು ನ್ನೋದು ಇನ್ನೊಂದು ಸತ್ಯ. ರಿಯಲ್ ಲೈಫ್​'ನಲ್ಲಿ ಪ್ರೀತಿಸಿ ರಿಜಿಸ್ಟರ್ ಮದುವೆ ಆಗಿದ್ದ ಲವ್ಲಿ ಸ್ಟಾರ್ ಪ್ರೇಮ್, ಈ ಡಾನ್ಸಿಂಗ್ ವೇದಿಕೆಯಲ್ಲಿ ರಿಯಲ್ ಆಗಿಯೇ ಮ್ಯಾರೇಜ್ ಆಗಿದ್ದಾರೆ.

ಸ್ಟಾರ್ ಸುವರ್ಣ ಮಾಹಿನಿಯಲ್ಲಿ ಪ್ರಸಾರವಾಗುವ ಡಾನ್ಸ್ ಡಾನ್ಸ್ ಜ್ಯೂನಿಯರ್ಸ್ ನ ಈ ಷೋದಲ್ಲಿ ಫ್ಯಾಮಿಲಿ ರೌಂಡ್ಸ್ ಆಯೋಜಿಸಲಾಗಿತ್ತು. ಆ ಷೋದಲ್ಲಿಯೇ ಕಾರ್ಯಕ್ರಮದ ಜಡ್ಜ್ ಸ್ಥಾನದಲ್ಲಿದ್ದ ನೆನಪಿರಲಿ ಪ್ರೇಮ್ ಅವರಿಗೆ ಮರು ಮದುವೆ ಆಗುವ ಚಾನ್ಸ್ ಸಿಕ್ಕಿದೆ.

ಈ ಎಪಿಸೋಡ್ ಇಂದು ಮತ್ತು ನಾಳೆ ರಾತ್ರಿ 8 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿದೆ.

ವಿಡಿಯೋ ಕೃಪ: ಸ್ಟಾರ್ ಸುವರ್ಣ ವಾಹಿನಿ

Follow Us:
Download App:
  • android
  • ios