‘ಪ್ರಾಣ’ ಎನ್ನುವ ಚಿತ್ರದ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟು, ಮುಂದೆ ‘ನೆನಪಿರಲಿ’ ಪ್ರೇಮ್‌ ಎಂದೇ ಸ್ಟಾರ್‌ ಪಟ್ಟಕ್ಕೇರಿದರು. ಅವರ ಹೆಸರಿನಲ್ಲಿರುವ ‘ನೆನಪಿರಲಿ’ ಎನ್ನುವ ಮಾತಿನಂತೆ ಈ ಹದಿನೇಳು ವರ್ಷಗಳಲ್ಲಿ ಪ್ರೇಮ್‌ ಅವರನ್ನು ಯಾರೂ ಮರೆಯಲಿಲ್ಲ ಎಂಬುದು ಅವರ ಸಿನಿಮಾ ಕೆರಿಯರ್‌ಗೆ ಸಲ್ಲಬಹುದಾದ ಬಹು ದೊಡ್ಡ ಯಶಸ್ಸು. ಆದರೂ, ‘ಈಗ ಸಾಗಿ ಬಂದ ದಾರಿ ಚಿಕ್ಕದು. ಸಾಗಬೇಕಿರುವ ದಾರಿ ಬಹು ದೂರದ ವರೆಗೂ ಚಾಚಿಕೊಂಡಿದೆ. ಎಲ್ಲರ ಪ್ರೀತಿಯಿಂದ, ನನ್ನ ಶ್ರಮದಿಂದ ಆ ದಾರಿಯಲ್ಲಿ ಮತ್ತಷ್ಟುಒಳ್ಳೆಯ ಸಿನಿಮಾಗಳ ಮೂಲಕ, ಅಭಿಮಾನದ ನೆರಳಿನಲ್ಲಿ ಗಟ್ಟಿಯಾಗಿ ಸಾಗಬೇಕಿದೆ’ ಎನ್ನುವ ಪ್ರೇಮ್‌ ಅವರಿಗೆ ಈ 17ರ ಪಯಣ ದುಪಟ್ಟಾಗಲಿ ಎಂಬುದು ಅವರ ಅಭಿಮಾನಿಗಳ ಹಾರೈಕೆ.

ಈಗ ಸಾಗಿ ಬಂದ ದಾರಿ ಚಿಕ್ಕದು. ಸಾಗಬೇಕಿರುವ ದಾರಿ ದೂರದವರೆಗೂ ಚಾಚಿಕೊಂಡಿದೆ. ಎಲ್ಲರ ಪ್ರೀತಿಯಿಂದ, ನನ್ನ ಶ್ರಮದಿಂದ ಆ ದಾರಿಯಲ್ಲಿ ಮತ್ತಷ್ಟು ಒಳ್ಳೆಯ ಸಿನಿಮಾಗಳ ಮೂಲಕ, ಅಭಿಮಾನದ ನೆರಳಿನಲ್ಲಿ ಗಟ್ಟಿಯಾಗಿ ಸಾಗಬೇಕಿದೆ - ಪ್ರೇಮ್ 

ಪ್ರೇಮ್‌ ಅವರ ಬದುಕಿನ ಗೆಲುವು- ಸೋಲು ಎರಡೂ ಒಟ್ಟಿಗೆ ಬಂದಿವೆ. ಆದರೂ ನಟನಾಗಿ ಎಂದಿಗೂ ಸೋಲದ ಪ್ರೇಮ್‌, ಅವರಿಗೆ ಹೆಸರು ತಂದುಕೊಟ್ಟಸಿನಿಮಾಗಳು ಹಲವು. ಇಲ್ಲಿವರೆಗೂ 24 ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಪೈಕಿ ನೆನಪಿರಲಿ, ಜೊತೆ ಜೊತೆಯಲಿ, ಪಲ್ಲಕ್ಕಿ, ಚಾರ್‌ಮಿನಾರ್‌, ಮಳೆ, ಚೌಕಾ ಮುಂತಾದ ಚಿತ್ರಗಳು. ಇನ್ನೂ ಶತ್ರು ಹಾಗೂ ದಳಪತಿ ಚಿತ್ರಗಳು ಇವರಿಗೆ ಆ್ಯಕ್ಷನ್‌ ಇಮೇಜ್‌ ನಿಡೀದವು. ಸವಿ ಸವಿ ನೆನಪು, ಐ ಯಾಮ್‌ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ, ಚಂದ್ರ ಚಿತ್ರಗಳು ಪ್ರೇಮ್‌ ಅವರನ್ನು ಕನ್ನಡದ ಚಾಕ್‌ಲೇಟ್‌ ಬಾಯ್‌ನಂತೆ ತೋರಿಸಿದವು. ನೆನಪಿರಲಿ, ಚಾರ್‌ಮಿನಾರ್‌ ಚಿತ್ರಗಳು ವೃತ್ತಿ ಬದುಕಿನ ಬಹು ದೊಡ್ಡ ತಿರುವುಗಳಾದವು. ಹೀಗೆ ಈ 17 ವರ್ಷಗಳಲ್ಲಿ ಹತ್ತಾರು ತಿರುವು, ಸೋಲು, ಗೆಲುವು ಕಂಡುಕೊಂಡು ಬರುತ್ತಿರುವ ‘ಪ್ರಾಣ’ದ ಹುಡುಗ ಪ್ರೇಮ್‌, ಕನ್ನಡ ಚಿತ್ರರಂಗದ ನಿಜವಾದ ಲವ್ಲಿ ಸ್ಟಾರ್‌.

ಚಿತ್ರರಂಗಕ್ಕೆ ಬಂದಿದ್ದು: 2004

ಮೊದಲ ಸಿನಿಮಾ: ಪ್ರಾಣ

ನಟಿಸಿದ ಒಟ್ಟು ಚಿತ್ರಗಳು: 24

ಹೆಸರಲ್ಲಿ ಜತೆಯಾದ ಚಿತ್ರ: ನೆನಪಿರಲಿ