ಈಗಾಗಲೇ ಪ್ರಧಾನಿ ಮೋದಿ ಜೀವನಾಧಾರಿತ ಸಿನಿಮಾ 'ಪಿಎಂ ನರೇಂದ್ರ ಮೋದಿ' ಭಾರೀ ಸದ್ದು ಮಾಡುತ್ತಿದ್ದು, ಭಾರೀ ನಿರೀಕ್ಷೆ ಹುಟ್ಟಿಸಿದೆ. ವಿವೇಕ್ ಒಬೆರಾಯ್ ಸಿನಿಮಾದಲ್ಲಿ ಮೋದಿಯಾಗಿ ಕಾಣಿಸಿಕೊಂಡು ಮುಖ್ಯ ಪಾತ್ರ ನಿಭಾಯಿಸುತ್ತಾರೆಂಬುವುದು ಎಲ್ಲರಿಗೂ ತಿಳಿದಿದೆ. ಸದ್ಯ ಸಿನಿಮಾದಲ್ಲಿ ಬಿಜೆಪಿಯ ಚಾಣಕ್ಯ ಎಂದೇ ಖ್ಯಾತಿ ಪಡೆದಿರುವ ಅಮಿತ್ ಶಾ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬುವುದು ಬಹಿರಂಗಗೊಂಡಿದೆ.

ನವದೆಹಲಿ[ಫೆ.13]: ಬಾಲಿವುಡ್ ನಟ ಮನೋಜ್ ಜೋಷಿ ಬಿಡುಗಡೆಗೊಳ್ಳಲಿರುವ ನರೇಂದ್ರ ಮೋದಿಯವರ ಜೀವನಾಧಾರಿತ ಸಿನಿಮಾ 'ಪಿಎಂ ನರೇಂದ್ರ ಮೋದಿ'ಯಲ್ಲಿ ಬಿಜೆಪಿಯ ರಾಷ್ಟ್ರಾಧ್ಯಕ್ಷರ ಪಾತ್ರವನ್ನು ಮಾಡಲಿದ್ದಾರೆ. ಈ ದಿಗ್ಗಜ ನಟ ಅದ್ಭುತ ಅವಕಾಶ ಸಿಕ್ಕಿರುವುದರಿಂದ ಬಹಳಷ್ಟು ಉತ್ಸಾಹಿತರಾಗಿದ್ದಾರೆ. 

ತಮಗೆ ಸಿಕ್ಕ ಅವಕಾಶದ ಕುರಿತಾಗಿ ಮಾತನಾಡಿರುವ ನಟ ಮನೋಜ್ ಜೋಷಿ 'ಅಮಿತ್ ಶಾ ಪಾತ್ರದಲ್ಲಿ ನಟಿಸುವುದು ನನಗೆ ಸಿಕ್ಕ ಅದ್ಭುತ ಅವಕಾಶ. ಸಂದೀಪ್ ಸಿಂಗ್ ನನಗೆ ಈ ಪಾತ್ರ ಮಾಡುವಂತೆ ಕರೆ ಮಾಡಿದ ಮರುಕ್ಷಣವೇ ನಾನು ಒಪ್ಪಿಕೊಂಡಿದ್ದೆ. ಇದು ಸಿನಿಮಾದಲ್ಲಿ ಬರುವ ಪ್ರಮುಖ ಪಾತ್ರಗಳಲ್ಲಿ ಒಂದು. ಈ ಪಾತ್ರವನ್ನು ನಾನು ಚೆನ್ನಾಗಿ ನಿಭಾಯಿಸುತ್ತೇನೆ' ಎಂದಿದ್ದಾರೆ. ಈ ಸಿನಿಮಾದಲ್ಲಿ ಸ್ಯಾಂಡಲ್‌ವುಡ್ ನಟ ವಿವೇಕ್ ಒಬೆರಾಯ್ ನರೇಂದ್ರ ಮೋದಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Scroll to load tweet…

ಸಿನಿಮಾ ನಿರ್ಮಾಪಕ ಸಂದೀಪ್ ಸಿಂಗ್ ಈ ಕುರಿತಾಗಿ ಮಾತನಾಡುತ್ತಾ 'ಸಿನಿಮಾದಲ್ಲಿ ಬರುವ ಪ್ರಮುಖ ಪಾತ್ರಗಳಲ್ಲಿ ಅಮಿತ್ ಶಾ ಪಾತ್ರವೂ ಒಂದು, ಇದನ್ನು ಮನೋಜ್ ಜೋಷಿ ಮಾಡಲಿದ್ದಾರೆ. ಅವರು ಪ್ರತಿಭಾನ್ವಿತ ಹಾಗೂ ಶ್ರಮಜೀವಿ ನಟರಲ್ಲೊಬ್ಬರು. ಅವರೊಂದಿಗೆ ಕೆಲಸ ಮಾಡುವುದೇ ಒಂದು ಅದ್ಭುತ ಅನುಭವ' ಎಂದಿದ್ದಾರೆ.