ತೆಲುಗು ಖ್ಯಾತ ನಟ ಮೋಹನ್ ಬಾಬುರವರ ಪುತ್ರ ಮಂಚು ವಿಷ್ಣು ನಾಲ್ಕನೇ ಮಗುವಿಗೆ ತಂದೆಯಾಗುತ್ತಿರುವ ವಿಚಾರವನ್ನು ತನ್ನ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಆದರೆ ಇದಕ್ಕೆ ಜನರಿಂದ ನೆಗೆಟಿವ್ ಪ್ರತಿಕ್ರಿಯೆ ಸಿಗುತ್ತಿದೆ.

2009 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಷ್ಣು ಹಾಗೂ ವಿರಾನಿಕರಿಗೆ ಈಗಾಗಲೇ ಅರಿಯಾನ್, ವಿವಿಯನ ಎಂಬ ಇಬ್ಬರು ಹೆಣ್ಣು ಮಕ್ಕಳು ಹಾಗೂ ಅವಿರಾಮ್ ಎಂಬ ಗಂಡು ಮಗನಿದ್ದಾನೆ. ಈಗ ನಾಲ್ಕನೇ ಲಿಟಲ್ ಏಂಜಲ್ ನಿರೀಕ್ಷೆಯ ಬಗ್ಗೆ ಹಂಚಿಕೊಂಡಿದ್ದಾರೆ.

 

‘ವಿಶೇಷವಾದ ಸ್ಥಳದಿಂದ ವಿಶೇಷ ವಿಚಾರ. ವಿರಾನಿಕಳ ಹುಟ್ಟೂರು ಇದಾಗಿದ್ದು, ಅರಿ,ವಿವಿ ಮತ್ತು ಅವಿರಾಮ್ ಜೊತೆಯಾಗಿ ನಾಲ್ಕನೇ ಲಿಟಲ್ ಏಂಜಲ್ ಬರಲಿದೆ’ ಎಂದು ಫೋಟೋದೊಂದಿಗೆ ಬರೆದುಕೊಂಡಿದ್ದಾರೆ.

ಈ ಟ್ಟೀಟಿಗೆ ಪ್ರತಿಕ್ರಿಯೆ ನೀಡಿದ ವ್ಯಕ್ತಿಯೊಬ್ಬ ‘ನಮ್ಮ ದೇಶಕ್ಕೆ ನಿಮ್ಮಂತಹ ಉದ್ಯಮಿ ಅವಶ್ಯಕತೆ ಇದೆ ಆದರೆ ಮತ್ತೊಂದು ಮಗು ಮಾಡಿಕೊಳ್ಳುವ ಬದಲು ದತ್ತು ಪಡೆದಿದ್ದರೆ ಒಳ್ಳೆಯದಿತ್ತು’ ಎಂದಿದ್ದಾರೆ. ಮತ್ತೊಬ್ಬ ವ್ಯಕ್ತಿ ‘ಸರ್ ಫ್ಯಾಮಿಲಿ ಪ್ಲಾನಿಂಗ್ ಬಗ್ಗೆ ನಿಮಗೆ ಗೊತ್ತಾ’ ಎಂದು ಪ್ರಶ್ನೆ ಮಾಡಿದ್ದಾರೆ.