Asianet Suvarna News Asianet Suvarna News

ನಮೋಭೂತಾತ್ಮ-2 ಭಯಾನಕ, ಹಾಸ್ಯ ಮಿಶ್ರಿತ ಸಿನಿಮಾ: ನಟ ಕೋಮಲ್‌

ಹಾರರ್‌, ಕಾಮಿಡಿ ಕಥಾ ಹಂದರದ ನಮೋ ಭೂತಾತ್ಮ-2 ಚಲನಚಿತ್ರವು ರಾಜ್ಯಾದ್ಯಂತ 109 ಚಿತ್ರ ಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಎರಡನೇ ವಾರವೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯು ನಮ್ಮ ಉತ್ಸಾಹ ಹೆಚ್ಚಿಸಿದೆ ಎಂದು ಚಿತ್ರದ ನಾಯಕ ಕೋಮಲ್‌ ತಮ್ಮ ಸಂತಸ ಹಂಚಿಕೊಂಡರು.

Actor Komal Talks Over Namo Bhootatma 2 Movie At Davanagere gvd
Author
First Published Aug 11, 2023, 7:07 PM IST

ದಾವಣಗೆರೆ (ಆ.11): ಹಾರರ್‌, ಕಾಮಿಡಿ ಕಥಾ ಹಂದರದ ನಮೋ ಭೂತಾತ್ಮ-2 ಚಲನಚಿತ್ರವು ರಾಜ್ಯಾದ್ಯಂತ 109 ಚಿತ್ರ ಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಎರಡನೇ ವಾರವೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯು ನಮ್ಮ ಉತ್ಸಾಹ ಹೆಚ್ಚಿಸಿದೆ ಎಂದು ಚಿತ್ರದ ನಾಯಕ ಕೋಮಲ್‌ ತಮ್ಮ ಸಂತಸ ಹಂಚಿಕೊಂಡರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸುಮಾರು 9 ವರ್ಷದ ನಂತರ ನಮೋಭೂತಾತ್ಮ-2 ಚಿತ್ರೀಕರಣ ಮಾಡಲಾಗಿದೆ. ಎಲ್ಲಾ ಯಶಸ್ಸಿನ ಕಥೆಗಳ ಹಿಂದೆ ಭಯಾನಕ ಕಥೆಗಳು, ತಮಾಷೆಯೂ ಉತ್ತಮವಾಗಿ ಸಾಥ್‌ ನೀಡುತ್ತವೆಂಬುದಕ್ಕೆ ಹಲವು ಸಿನಿಮಾಗಳು ಯಶಸ್ವಿಯಾಗಿರುವುದು ಸಾಕ್ಷಿ. ನಮೋಭೂತಾತ್ಮ-2ನ್ನು ಬಹುತೇಕ ರಾತ್ರಿ ವೇಳೆಯೇ ಚಿತ್ರೀಕರಿಸಲಾಗಿದೆ. ಬೆಳಿಗ್ಗೆಯಿಂದ ತಡರಾತ್ರಿ 2 ಗಂಟೆವರೆಗೂ ಸಿನಿಮಾ ಚಿತ್ರೀಕರಣ ಮಾಡಿದ್ದೇವೆ ಎಂದು ತಿಳಿಸಿದರು.

ಮೋದಿ ಮನ್ ಕೀ ಬಾತ್ ಐಡಿಯಾ: ಬಾಳೆ ದಿಂಡಿನಿಂದ ರಸವಾಯ್ತು ಬದುಕು!

ನಮ್ಮೆಲ್ಲರ ಪರಿಶ್ರಮಕ್ಕೆ ರಾಜ್ಯಾದ್ಯಂತ ಪ್ರೇಕ್ಷಕರು ಆಶೀರ್ವದಿಸಿದ್ದಾರೆ. ಹೊಸ ನಿರ್ದೇಶಕರ ಜೊತೆಗೆ ನಾನು ಕೆಲಸ ಮಾಡಿದ್ದೇನೆ. ಸುಮಾರು ವರ್ಷಗಳ ನಂತರ ನಾನು ಅಭಿನಯಿಸಿದ್ದೇನೆ. ನಮ್ಮ ಅಣ್ಣ ಸೇರಿದಂತೆ ನಮ್ಮ ಕುಟುಂಬ ಜ್ಯೋತಿಷ್ಯ ನಂಬುತ್ತದೆ. ಕೇತು ದೆಶೆ ನಡೆಯುತ್ತಿದ್ದ ಕಾರಣಕ್ಕೆ ಅಣ್ಣ(ಹಿರಿಯ ನಟ ಜಗ್ಗೇಶ್‌)ನ ಸಲಹೆಯಂತೆ ಸಿನಿಮಾಗಳಿಂದ ದೂರವಿದ್ದೆ. ಈಗ ಮತ್ತೆ ಅಣ್ಣನ ಸಲಹೆಯಂತೆ ಅಭಿನಯಿಸುತ್ತಿದ್ದೇನೆ ಎಂದು ತಿಳಿಸಿದರು.

ಮಧ್ಯ ಕರ್ನಾಟಕದಲ್ಲಿ ಅದರಲ್ಲೂ ದಾವಣಗೆರೆಯಲ್ಲಿ ತಮ್ಮ ಚಿತ್ರಕ್ಕೆ ಹಿಂದಿನಿಂದಲೂ ಉತ್ತಮ ಸ್ಪಂದನೆ, ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೇ ಕಾರಣಕ್ಕೆ ಇಲ್ಲಿಂದ ಎಲ್ಲಾ ಕಡೆ ಪ್ರವಾಸ ಆರಂಭಿಸಿದ್ದೇವೆ. ಸಿನಿಮಾಕ್ಕಾಗಿ ನಾನು ತೂಕ ಇಳಿಸಿಕೊಂಡಿದ್ದೇನೆ. ಹಾರರ್‌ ಮತ್ತು ಕಾಮಿಕಿ ಕಥಾ ಹಂದರದ ನಮೋ ಭೂತಾತ್ಮ-2 ಸಿನಿಮಾವನ್ನು ಇಡೀ ಕುಟುಂಬ ಸದಸ್ಯರೆಲ್ಲರೂ ಒಟ್ಟಿಗೆ ಕುಳಿತು ನೋಡಬಹುದು ಎಂದು ಕೋಮಲ್‌ ವಿವರಿಸಿದರು. ತಂಡದ ಮಹಾಂತೇಶ, ಸಂತೋಷ ಇತರರಿದ್ದರು.

ದಾವಣಗೆರೆಯಲ್ಲಿ ಚುರುಕುಗೊಂಡಿದೆ ಬಿಜೆಪಿ ಭ್ರಷ್ಟಾಚಾರದ ತನಿಖೆ: ದಿನೇಶ್.ಕೆ.ಶೆಟ್ಟಿ

ಸಾಮಾನ್ಯವಾಗಿ ರಾತ್ರಿ ಶೂಟಿಂಗ್‌ನಲ್ಲಿ ತಮ್ಮ ಚಿತ್ರದ ನಾಯಕ ನಟರಾದ ಕೋಮಲ್‌ ಅಭಿನಯಿಸುವುದಿಲ್ಲ. ಆದರೆ, ನಮ್ಮ ಚಿತ್ರಕ್ಕೆ ಬೆಳಿಗ್ಗೆಯಿಂದ ರಾತ್ರಿ 2 ಗಂಟೆವರೆಗೂ ಅಭಿನಯಿಸಿದ್ದಾರೆ. ಅಲ್ಲದೇ, ಇಡೀ ಚಿತ್ರ ತಂಡಕ್ಕೆ ಸ್ಪಂದಿಸಿ, ಪ್ರೋತ್ಸಾಹಿಸುತ್ತಾ ಬಂದರು. ಈವರೆಗೆ ಸಾವಿರಾರು ಸಿನಿಮಾಗಳಿಗೆ ನೃತ್ಯ ಸಹಾಯಕನಾಗಿ, ನೃತ್ಯ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ನಮೋ ಭೂತಾತ್ಮ-2 ಮೂಲಕ ನಿರ್ದೇಶಕನಾಗಿದ್ದೇನೆ.
-ಮುರುಳಿ, ಚಿತ್ರದ ನಿರ್ದೇಶಕ

Follow Us:
Download App:
  • android
  • ios