ಪರಭಾಷೆ ಚಿತ್ರಗಳಿಗೆ ಗಣೇಶ್‌ ಖಡಕ್‌ ವಾರ್ನಿಂಗ್‌!

ಗಣೇಶ್‌ ಅಭಿನಯದ ‘ಗೀತಾ’ ಸೆ.27ಕ್ಕೆ ರಿಲೀಸ್‌ ಆಗುತ್ತಿದೆ. ‘ಪೈಲ್ವಾನ್‌’ ಬೆನ್ನಲೇ ‘ಗೀತಾ’ ಚಿತ್ರಕ್ಕೂ ಪೈರಸಿ ಭೀತಿಯಿದೆ. ಪೈರಸಿ ತಡೆಗೆ ಚಿತ್ರತಂಡವು ಸೈಬರ್‌ ಕ್ರೈಮ್‌ ವಿಭಾಗಕ್ಕೂ ದೂರು ನೀಡಿದೆ. ಪರಭಾಷೆ ಚಿತ್ರಗಳ ಬಿಡುಗಡೆಯ ನಡುವೆ ಚಿತ್ರಮಂದಿರ ಹುಡುಕಿಕೊಳ್ಳುವ ಕಷ್ಟವಿದೆ.

Actor ganesh kannada film geetha talks about Gokak chaluvali and love story

ನಿಮ್ಮ ಪಾಡಿಗೆ ನೀವು ಇರಿ!

ಗೀತಾ ನನ್ನ ಕನಸಿನ ಸಿನಿಮಾ. ಪಕ್ಕಾ ಕನ್ನಡತನದ ಸಿನಿಮಾ. ಕನ್ನಡ ಭಾಷೆಯೇ ಪ್ರಧಾನ ಎನ್ನುವ ಸಂದೇಶದೊಂದಿಗೆ ನಡೆದ ಗೋಕಾಕ್‌ ಚಳವಳಿ ಹಿನ್ನೆಲೆಯ ಬರುವ ಕತೆ. ಇದೇ ಮೊದಲ ಬಾರಿಗೆ ಈ ಚಿತ್ರಕ್ಕೆ ಹತ್ತಕ್ಕೂ ಹೆಚ್ಚು ಸಲ ರೀಡಿಂಗ್‌ ತೆಗೆದುಕೊಂಡಿದ್ದೇನೆ. ಇದು ಪಕ್ಕಾ ಕನ್ನಡಿಗರ ಸಿನಿಮಾ ಎನ್ನುವ ಕಾರಣಕ್ಕೆ ನಿರ್ಮಾಣಕ್ಕೂ ಮನಸ್ಸು ಮಾಡಿದೆ. ಇಂಥ ಸಿನಿಮಾಕ್ಕೆ ಕನ್ನಡದಲ್ಲೇ ಅನ್ಯಾಯವಾಗುವುದಕ್ಕೆ ನಾನು ಬಿಡುವುದಿಲ್ಲ. ಪರಭಾಷೆ ಚಿತ್ರಗಳು ಇಲ್ಲಿ ಏನು ಆಗುತ್ತವೆಯೋ ಅದು ನನಗೆ ಬೇಕಾಗಿಲ್ಲ, ಆದರೆ ನನ್ನ ಸಿನಿಮಾದ ತಂಟೆಗೆ ಯಾರು ಬರಬೇಡಿ. ನಿಮ್ಮ ಪಾಡಿಗೆ ನೀವು ಇರಿ ಅಂತಾರೆ ಗಣೇಶ್‌

ಕನ್ನಡಪರ ಹೋರಾಟಗಾರನಾದ ಗೋಲ್ಡನ್ ಸ್ಟಾರ್ ‘ಗೀತಾ’!

ಅದ್ದೂರಿ ಸಿನಿಮಾಗಳೇ ಬರಲಿವೆ!

ಸುಮಾರು 19 ವರ್ಷಗಳ ಸಿನಿಜರ್ನಿಯಲ್ಲಿ ಅವರು, ತುಂಬಾ ಇಷ್ಟಪಟ್ಟು -ಕಷ್ಟಪಟ್ಟು ಪ್ರೀತಿಯಿಂದ ಮಾಡಿದ ಸಿನಿಮಾ ಇದಂತೆ. ಮುಂದಿನ ವಾರವೇ ಅದ್ಧೂರಿ ವೆಚ್ಚದ ತೆಲುಗು ಚಿತ್ರ ‘ಸೈರಾ ನರಸಿಂಹರೆಡ್ಡಿ' ರಿಲೀಸ್‌ ಆಗುತ್ತಿದೆ. ಅದರ ಕನ್ನಡ ಆವತರಣಿಕೆಯ ಅದ್ಧೂರಿ ರಿಲೀಸ್‌ಗೂ ಇಲ್ಲಿ ಸಿದ್ಧತೆ ನಡೆದಿದೆ. ಅದರ ಜತೆಗೆ ಹೃತಿಕ್‌ ರೋಷನ್‌ ಹಾಗೂ ವಾಣಿ ಕಪೂರ್‌ ಅಭಿನಯದ ಹಿಂದಿಯ ‘ವಾರ್‌’ ಕೂಡ ಬರುತ್ತಿದೆ. ಪರಭಾಷೆ ಚಿತ್ರಗಳಿಗೆ ಗಣೇಶ್‌, ಮುಂಚೆಯೇ ವಾರ್ನಿಂಗ್‌ ಪಾಸ್‌ ಮಾಡಿದ್ದಾರೆನ್ನುವುದು ಸುಳ್ಳಲ್ಲ.

ಕನ್ನಡಿಗರನ್ನು ಬಡಿದೆಬ್ಬಿಸಿದ ಸ್ವಾಭಿಮಾನಿ ಗಣೇಶ್!

ಕಠಿಣ ಕ್ರಮ ಗ್ಯಾರಂಟಿ!

ನಾನು ಪರಭಾಷೆ ಚಿತ್ರಗಳ ವಿರೋಧಿ ಅಲ್ಲ. ಆದರೆ ನಮ್ಮ ಸಿನಿಮಾಗಳು ರಿಲೀಸ್‌ ಆದ ಚಿತ್ರಮಂದಿರಗಳನ್ನ ಟಾರ್ಗೆಟ್‌ ಮಾಡಿ, ತೊಂದರೆ ಕೊಟ್ಟು ಪರಭಾಷೆ ಸಿನಿಮಾ ರಿಲೀಸ್‌ ಮಾಡುತ್ತೆವೆಂದರೆ ನಾನು ಸಹಿಸುವುದಿಲ್ಲ. ಅದು ಯಾರೇ ಆದರೂ ಸರಿ, ನಾನು ಸುಮ್ಮನೆ ಕೂರುವುದಿಲ್ಲ. ಕಠಿಣ ವಿರೋಧವನ್ನೇ ಎದುರಿಸಬೇಕಾಗುತ್ತದೆ. ಆದರೆ ಆ ರೀತಿ ಆಗದಿರಲಿ. ನಮ್ಮ ಸಿನಿಮಾ ಚೆನ್ನಾಗಿದೆ. ಇನ್ನೊಂದು ಲೆವೆಲ್‌ಗೆ ಹೋಗುತ್ತೆ ಎನ್ನುವ ನಂಬಿಕೆಯಿದೆ’ ಎನ್ನುತ್ತಾರೆ ಗಣೇಶ್‌.

ಎರಡು ವರ್ಷದ ಬಳಿಕ ಎರಡು ಶೇಡ್‌ನಲ್ಲಿ ಶಾನ್ವಿ!

ಪೈರಸಿ ಮೇಲೂ ಹದ್ದಿನ ಕಣ್ಣು!

ಪೈರಸಿ ಪಿಡುಗಿಗೆ ಗೀತಾ ಚಿತ್ರ ತಂಡ ಎಚ್ಚರಿಕೆ ವಹಿಸಿದೆ. ಈಗಾಗಲೇ ಸೈಬರ್‌ ಕ್ರೈಮ್‌ ವಿಭಾಗಕ್ಕೆ ದೂರು ನೀಡಿ, ಎಚ್ಚರಿಕೆ ಕ್ರಮ ತೆಗೆದುಕೊಳ್ಳಲು ಮನವಿ ಮಾಡಿದೆ. ಹಾಗೆಯೇ ಚಿತ್ರಮಂದಿರಗಳಲ್ಲಿ ಪ್ರತ್ಯೇಕ ಸಿಬ್ಬಂದಿ ನಿಯೋಜಿಸಿ, ಪ್ರೇಕ್ಷಕರ ಮೇಲೆ ನಿಗಾ ಇಡಲು ಮುಂದಾಗಿದೆ. ಟಾಕೀಸ್‌ ಒಳಗಡೆ ಕುಳಿತು ಅಕ್ರಮವಾಗಿ ವಿಡಿಯೋ ಮಾಡುವವರನ್ನು ವಶಕ್ಕೆ ಪಡೆಯಲು ಮುಂದಾಗಿದೆ.

Latest Videos
Follow Us:
Download App:
  • android
  • ios