ಗಣೇಶ್ ಅಂದಾಕ್ಷಣ ಮೊದಲು ನೆನಪಿಗೆ ಬರುವುದು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಟೈಂ ಕಾರ್ಯಕ್ರಮ. ಮುಂಗಾರು ಮಳೆ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಟನಾಗಿ ಎಂಟ್ರಿ ಕೊಟ್ಟ ಗಣೇಶ್ ಎಲ್ಲರ ಮನಸ್ಸಿಗೆ ಹತ್ತಿರವಾಗುವ ಗೋಲ್ಡ್ ವ್ಯಕ್ತಿ ಆಗಿದ್ದಾರೆ.

ಫೆ.11 ರಂದು ಅವರ 11 ನೇ ವರ್ಷದ ಮದುವೆ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಗಣೇಶ್ ವಿಶೇಷ ಟ್ವೀಟ್ ಮಾಡಿದ್ದಾರೆ.

'ನೀನು ನನ್ನ ಸೋಲ್‌ಮೇಟ್, ನನ್ನ ಬೇಸ್ಟ್‌ ಫ್ರೆಂಡ್, ನನ್ನ ಗೈಡ್ ಹಾಗೂ ನನ್ನ ಲವ್. ಹ್ಯಾಪಿ ಆ್ಯನಿವರ್ಸರಿ ಮೈ ಲವ್' ಎಂದು ಕ್ಯೂಟ್ ಫೋಟೊ ಜೊತೆ ಬರೆದುಕೊಂಡಿದ್ದಾರೆ.

 

ಇದಕ್ಕೆ ರೀ ಟ್ವೀಟ್ ಮಾಡಿದ ಶಿಲ್ಪಾ "ಥ್ಯಾಂಕ್ ಯು ನೀನು ನೀನಾಗಿ ಇದ್ದಿದ್ದಕ್ಕೆ, ಇವತ್ತಿಗೆ ನಾವು ತೆಗೆದುಕೊಂಡ ದೊಡ್ಡ ನಿರ್ಣಯ ಅಥವ ತೀರ್ಮಾನ ಇಂದು ಹೀಗಿರಲು ಕಾರಣ' ಎಂದು ಬರೆದಿದ್ದಾರೆ ಶಿಲ್ಪ.