ನಿರ್ದೇಶಕರಾಗಿ, ನಿರ್ಮಾಪಕರಾಗಿ ಕಡೆಗೆ ನಟರಾಗಿಯೂ ಯಶಸ್ಸು ಗಳಿಸಿರುವ ರಿಷಬ್‌ ಶೆಟ್ಟಿಇದೀಗ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದಾರೆ. ಅದರ ಫಲವಾಗಿ ‘ಆ್ಯಂಟಗನಿ ಶೆಟ್ಟಿ’ ಚಿತ್ರದ ಮೂಲಕ ಉತ್ತರ ಕರ್ನಾಟಕ ಮೂಲದ ಸಮಥ್‌ರ್‍ ಕಡಕೋಳ ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಈ ಚಿತ್ರವನ್ನು ನಿರ್ಮಾಣ ಮಾಡುತ್ತಿರುವುದು ರಿಷಬ್‌ ಶೆಟ್ಟಿಫಿಲ್ಮ್ಸ್.

ಸಮರ್ಥ ಹೇಳಿದ ಕತೆ ಕೇಳಿ ಖುಷಿಯಾಯಿತು. ನಾನೇ ಸಿನಿಮಾ ನಿರ್ಮಾಣ ಮಾಡಲು ಒಪ್ಪಿಕೊಂಡೆ. ಪಾತ್ರದ ಕುರಿತು ಈಗ ಹೆಚ್ಚು ಹೇಳಲಾರೆ. ನನಗೂ ಈ ಪಾತ್ರಕ್ಕೂ ಹತ್ತಿರದ ಕನೆಕ್ಷನ್‌ ಇದೆ. ಒಂದು ವಿಭಿನ್ನ ಪಾತ್ರ ಅಂತ ಹೇಳಬಲ್ಲೆ ಅಷ್ಟೇ.- ರಿಷಬ್‌ ಶೆಟ್ಟಿ

ಸಮಥ್‌ರ್‍ ಬಾಲಿವುಡ್‌ನಲ್ಲಿದ್ದವರು. ಪ್ರಸಿದ್ಧ ನಿರ್ಮಾಪಕ ಸಿದ್ದಾಥ್‌ರ್‍ ರಾಯ್‌ ಕಪೂರ್‌ ಕ್ರಿಯೇಟಿವ್‌ ಟೀಮ್‌ನಲ್ಲಿದ್ದವರು. ಯಾವಾಗ ರಿಷಬ್‌ ಶೆಟ್ಟಿಬಾಲಿವುಡ್‌ನಲ್ಲಿ ಸಿನಿಮಾ ಮಾಡಬೇಕು ಅಂತ ಹೊರಟರೋ ಆಗ ರಿಷಬ್‌ ಶೆಟ್ಟಿಸಂಪರ್ಕಕ್ಕೆ ಬಂದರು. ರಿಷಬ್‌ ನಿರ್ದೇಶನದ ಹಿಂದಿ ಸಿನಿಮಾದ ಸ್ಕಿ್ರಪ್ಟ್‌ ಮಾಡುತ್ತಿದ್ದವರು ಇದೇ ಸಮಥ್‌ರ್‍ ಮತ್ತು ಶ್ರೀಪಾದ ಜೋಶಿ. ಆ ಕೆಲಸ ನಡೆಯುತ್ತಿದ್ದಾಗಲೇ ಸಮರ್ಥ ಒಂದು ಕತೆ ಹೆಣೆದು ರಿಷಬ್‌ಗೆ ಹೇಳಿದ್ದಾರೆ. ರಿಷಬ್‌ ಖುಷಿಯಾಗಿದ್ದಾರೆ. ಅಲ್ಲದೇ ತಾನೇ ಸಿನಿಮಾ ನಿರ್ಮಿಸುವ ನಿರ್ಧಾರ ಕೈಗೊಂಡಿದ್ದಾರೆ.

ರಿಷಭ್ ಶೆಟ್ಟಿ ಕುಟುಂಬಕ್ಕೆ ವಾರಸುದಾರ ಆಗಮನ!

ಮುಂದಿನ ವರ್ಷದ ಆರಂಭದಲ್ಲಿ ಈ ಸಿನಿಮಾ ಶುರುವಾಗಲಿದೆ. ಈಗಷ್ಟೇ ಪೋಸ್ಟರ್‌ ಬಿಡುಗಡೆ ಆಗಿದ್ದು, ಸಮಥ್‌ರ್‍ ಮತ್ತು ಶ್ರೀಪಾದ ಜೋಶಿ ಚಿತ್ರಕತೆ ಬರೆದಿದ್ದಾರೆ. ಈ ಕುರಿತು ಸಮಥ್‌ರ್‍, ‘ಈ ಪಾತ್ರಕ್ಕೂ ರಿಷಬ್‌ ಅವರಿಗೂ ಹೋಲಿಕೆ ಇದೆ. ಈ ಪಾತ್ರಕ್ಕೆ ಅವರು ನಟಿಸಲೇಬೇಕಾಗಿಲ್ಲ. ಅವರು ಹೇಗಿದ್ದಾರೋ ಹಾಗೇ ಇದ್ದರೆ ಸಾಕು’ ಎನ್ನುತ್ತಾರೆ.

ಹುಬ್ಬಳ್ಳಿ ಮತ್ತು ಮುಂಬೆಯಲ್ಲಿ ನಡೆಯುವ ಕತೆ ಇದು. ಈ ಕತೆಯಲ್ಲಿ ರಿಷಬ್‌ ಅವರ ಪಾತ್ರದ 14 ವರ್ಷದ ಜರ್ನಿ ಇದೆ. ಒಂದು ವಿಭಿನ್ನ ಪಾತ್ರ ಅದು. ರಿಷಬ್‌ ಸರ್‌ ಒಪ್ಪಿ ಸಿನಿಮಾ ಮಾಡುತ್ತಿರುವುದು ನಂಗೆ ಖುಷಿ.- ಸಮರ್ಥ ಕಡಕೋಳ

ಸದ್ಯ ಚಿತ್ರದ ಪೋಸ್ಟರ್‌ ಬಿಡುಗಡೆಯಾಗಿದ್ದು, ಮುಂಬೈ ಲೋಕಲ್‌ ಟ್ರೈನ್‌ನಲ್ಲಿ ಗಬ್ಬರ್‌ ಸಿಂಗ್‌ ಗೆಟಪ್‌ನಲ್ಲಿ ಒಬ್ಬ ವ್ಯಕ್ತಿ ನಿಂತಿರುವಂತೆ ಆಕರ್ಷಕವಾಗಿ ವಿನ್ಯಾಸ ಮಾಡಲಾಗಿದೆ.

ಬೆಲ್‌ಬಾಟಂ 2 ಚಿತ್ರಕ್ಕೆ ರಿಷಬ್ ಶೆಟ್ಟಿ ನಿರ್ದೇಶಕ!