ನಾಯಕ ಕಂ ನಿರ್ದೇಶಕ ಒಬ್ಬರೇ ಆಗುತ್ತಿರುವ ಈ ಪಾರ್ಟ್ 2 ಚಿತ್ರ ಈ ವರ್ಷದ ಕೊನೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಸೆಟ್ಟೇರಲಿದೆ.

ಇಬ್ಬರು ಸಿಎಂಗಳ ಹಿಂದೆ ದಿವಾಕರ: ಈ ಬಾರಿ ಕತೆಗಾರ ಟಿ ಕೆ ದಯಾನಂದ ಅವರು ಒಂದು ರಿಯಲ್ ಘಟನೆಯನ್ನು ಆಧರಿಸಿ ಕತೆ ಮಾಡಿದ್ದಾರೆ. 1980-1986ರ ನಡುವೆ ರಾಜ್ಯದಲ್ಲಿ ನಡೆದ ಒಂದು ಸಂಚಲನಾತ್ಮಕ ಘಟನೆಯೇ ಈ ಕತೆಯ ತಳಹದಿ. ಅಲ್ಲದೆ ರಾಜ್ಯ ಸರ್ಕಾರದ ಬಜೆಟ್‌ಗೆ ಸಂಬಂಧಿಸಿದ ಈ ಘಟನೆಯಲ್ಲಿ ರಾಜ್ಯದ ಇಬ್ಬರು ಮುಖ್ಯ ಮಂತ್ರಿಗಳ ಕೈವಾಡವೂ ಇದೆ. ಇಬ್ಬರು ಪವರ್ ಫುಲ್ ಸಿಎಂಗಳ ಹಿಂದೆ ಬೀಳುವ ಡಿಟೆಕ್ಟಿವ್ ದಿವಾಕರನ ಕತೆ ಇದು.

ಅದೇ ಪಾತ್ರಗಳು- ಬಾಂಡ್ ಶೈಲಿ: ಬೆಲ್‌ಬಾಟಂ ಮುಂದುವರಿದ ಭಾಗವನ್ನು ಜೇಮ್ಸ್ ಬಾಂಡ್ ಶೈಲಿಯಲ್ಲಿ ರೂಪಿಸುವುದಕ್ಕೆ ಹೊರಟಿದ್ದಾರೆ. ಅದರೆ ದಿವಾಕರನ ಕೈಗೆ ಪುಟ್ಟ ಪಿಸ್ತೂಲು ಬರಲಿದೆ. ಪಾರ್ಟ್ 2ನಲ್ಲಿ ಹಿಂದಿನ ಭಾಗದಲ್ಲಿ ಕಾಣಿಸಿಕೊಂಡ ಕಲಾವಿದರೂ ಮುಂದುವರಿಯಲಿದ್ದಾರೆ.

ದಿವಾಕರನೇ ನಾಯಕ,ನಿರ್ದೇಶಕ

ಬೆಲ್‌ಬಾಟಂ-2 ಚಿತ್ರಕ್ಕೆ ನಾಯಕಿ, ತಂತ್ರಜ್ಞರ ತಂಡವನ್ನು ಇನ್ನಷ್ಟೆ ಆಯ್ಕೆ ಮಾಡಬೇಕಿದೆ. ಸಂತೋಷ್ ಅವರೇ ಪಾರ್ಟ್ 2ಗೂ ನಿರ್ಮಾಪಕರು. ಆದರೆ, ಈ ಚಿತ್ರಕ್ಕೆ ರಿಷಬ್ ಶೆಟ್ಟಿ ಅವರೇ ನಾಯಕನಾಗುವ ಜತೆಗೆ ನಿರ್ದೇಶಕರೂ ಆಗಲಿದ್ದಾರೆಂಬ ಸುದ್ದಿ ಇದೆ. ಆದರೆ, ಇದನ್ನು ಚಿತ್ರತಂಡ ಖಚಿತಪಡಿಸಿಲ್ಲ. ‘ಕತೆ ಸಿದ್ಧವಾಗಿದೆ. ಬೆಲ್‌ಬಾಟಂನಲ್ಲಿ ಕೆಲಸ ಮಾಡಿದ ಎಲ್ಲರು ಬೇರೆ ಬೇರೆ ಚಿತ್ರಗಳಲ್ಲಿ ಬ್ಯುಸಿಯಾಗಿದ್ದೇವೆ. ಅದನ್ನು ಮುಗಿಸಿಕೊಂಡು ಪಾರ್ಟ್ 2 ಶುರು ಮಾಡುತ್ತೇವೆ ಎನ್ನುತ್ತಾರೆ ರಿಷಬ್ ಶೆಟ್ಟಿ.