ವಾರದಲ್ಲಿ 2 ದಿನ ಮೂಡಿ ಬರುತ್ತಿರುವ ಮಜಾ ಟಾಕೀಸ್ ಹಿಂದಿಯ ಕಲರ್ಸ್'ನಲ್ಲಿ ಪ್ರಸಾರವಾಗುತ್ತಿರುವ ಕಪೀಲ್ ಶರ್ಮಾ ಆಯೋಜಿಸುತ್ತಿರುವ 'ಕಾಮಿಡಿ ವಿಥ್ ಕಪೀಲ್ ಶರ್ಮಾ'ದ ಪರಿಕಲ್ಪನೆಯಾದರೂ ಪರಿಪೂರ್ಣವಾಗಿ ಕನ್ನಡೀಕರಣಗೊಳಿಸಲಾಗಿದೆ
ಕಿರುತೆರೆಯಲ್ಲಿ ಯಶಸ್ವಿಯಾಗಿ ಮೂಡಿಬರುತ್ತಿರುವ ಕಾರ್ಯಕ್ರಮಗಳಲ್ಲಿ ನಟ ಸೃಜನ್ ಲೋಕೇಶ್ ನಿರೂಪಿಸಿ ಕೊಡುತ್ತಿರುವ ಕಲರ್ಸ್ ಕನ್ನಡ ವಾಹಿನಿಯ ಹಾಸ್ಯ ಕಾರ್ಯಕ್ರಮ 'ಮಜಾ ಟಾಕೀಸ್' ಕೂಡ ಒಂದು. ವಾರದಲ್ಲಿ 2 ದಿನ ಮೂಡಿ ಬರುತ್ತಿರುವ ಮಜಾ ಟಾಕೀಸ್ ಹಿಂದಿಯ ಕಲರ್ಸ್'ನಲ್ಲಿ ಪ್ರಸಾರವಾಗುತ್ತಿರುವ ಕಪೀಲ್ ಶರ್ಮಾ ಆಯೋಜಿಸುತ್ತಿರುವ ' ಕಪೀಲ್ ಶರ್ಮಾ ಶೊ'ದ ಪರಿಕಲ್ಪನೆಯಾದರೂ ಪರಿಪೂರ್ಣವಾಗಿ ಕನ್ನಡೀಕರಣಗೊಳಿಸಲಾಗಿದೆ.
ವಾರದ 2 ದಿನವೂ ಹೊಸ ಸಿನಿಮಾ ತಂಡ ಅಥವಾ ನಟರು ಬಂದು ವೀಕ್ಷಕರನ್ನು ರಂಜಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಈ ಕಾರ್ಯಕ್ರಮ 200 ಕಂತುಗಳನ್ನು ಪೂರ್ಣಗೊಳಿಸಿದೆ. ಇನ್ನೂರನೇ ಕಂತನ್ನು ವಾಹಿನಿಯವರು ಅದ್ಧೂರಿಯಾಗಿ ಆಯೋಜಿಸಿದ್ದರು. 200 ಕಂತು ಪೂರೈಸಿದ್ದಕ್ಕೆ ಚಾಲೆಂಜಿಗ್ ಸ್ಟಾರ್ ದರ್ಶನ್ ಕಾರ್ಯಕ್ರಮ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದು,
' ಮಜಾ ಟಾಕೀಸ್ 200 ಕಂತು ಪೈರೈಸುತ್ತಿರುವ ಯಶಸ್ಸಿನ ಹಿಂದೆ ಎಲ್ಲ ತಾಂತ್ರಿಕ ವರ್ಗದವರು/ಕಲಾವಿದರು ಪರಿಶ್ರಮವಿದ್ದು, ಅತ್ಯುತ್ತಮವಾಗಿ ನಿಮ್ಮ ಕೆಲಸವನ್ನು ನಿರ್ವಹಿಸಿದ್ದೀರಿ. ಇಷ್ಟು ಕಂತು ಪೂರೈಸುವುದು ಸುಲಭದ ಕೆಲಸವಲ್ಲ ನಿಮ್ಮ ಈ ಉತ್ತಮ ಕೆಲಸವನ್ನು ಮುಂದುವರಿಸಿಕೊಂಡು ಹೋಗಿ. ಪ್ರತಿಯೊಬ್ಬರಿಗೂ ನನ್ನ ಅಭಿನಂದನೆಗಳು' ಎಂದು ಟ್ವೀಟ್ ಮಾಡಿದ್ದಾರೆ. ಹೀಗೆ ಟ್ವೀಟ್ ಮಾಡುವಾಗ ತಮ್ಮ ಸ್ನೇಹಿತ ಸೃಜನ್ ಲೋಕೇಶ್ ಟ್ಯಾಗ್ ಮಾಡಿದ್ದಾರೆ.
