ಪ್ರೇಮಿಗಳ ದಿನದಂದು 'ಅಮರ್' ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದೆ. ಅಂಬರೀಷ್ ಪುತ್ರ ಅಭಿಷೇಕ್ ಅಭಿನಯಿಸುತ್ತಿರುವ ಈ ಮೊದಲ ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಶುಭ ಹಾರೈಸಿದ್ದು ಹೀಗೆ....
'ಅಮರ್' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿರುವ ಅಭಿಷೇಕ್ ಅಂಬರೀಶ್‌ಗೆ ಚಿತ್ರರಂಗದ ಗಣ್ಯರೆಲ್ಲರೂ ಶುಭ ಹಾರೈಸುತ್ತಿದ್ದಾರೆ. ಇದೇ ಚಿತ್ರದಲ್ಲಿ ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಮತ್ತೊಂದು ವಿಶೇಷ.
ಅಭೀಷೆಕ್ ಅಣ್ಣನಾಗಿ ದರ್ಶನ್ಈ ಚಿತ್ರದಲ್ಲಿ ನಟಿಸಿದ್ದಾರೆ. ದರ್ಶನ್‌ಗೆ ಈ ಚಿತ್ರದಲ್ಲಿ ಒಬ್ಬ ಶ್ರೀಮಂತ ಬ್ಯುಸಿನೆಸ್ ಮ್ಯಾನ್ ಪಾತ್ರವಂತೆ. ಬಹಳಷ್ಟು ಕಾರಣಗಳಿಗೆ ನಿರೀಕ್ಷೆ ಹುಟ್ಟಿಸಿರುವ 'ಅಮರ್' ಚಿತ್ರಕ್ಕೆ ದಾಸ ದರ್ಶನ್ ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ.
'ಪ್ರೀತಿಯ ತಮ್ಮ ಅಭಿಷೇಕ್ ಅಂಬರೀಷ್‌ಗೆ ಕನ್ನಡ ಚಿತ್ರರಂಗಕ್ಕೆ ಹಾರ್ಟೀ ವೆಲ್‌ಕಮ್. ನಾಳೆ ಅಭಿಷೇಕ್ ಹೊಸ ಸಿನಿಮಾ 'ಅಮರ್' ಟೀಸರ್ ಬಿಡುಗಡೆಯಾಗುತ್ತಿದೆ. ಎಲ್ಲರೂ ನೋಡಿ ಆಶೀರ್ವದಿಸಿ, ಹರಿಸಿ ಬೆಳೆಸಿ,' ಎಂದು ದರ್ಶನ್ ಟ್ಟೀಟ್ ಮಾಡಿದ್ದಾರೆ.
ಪ್ರೀತಿಯ ತಮ್ಮ ಅಭಿಷೇಕ್ ಅಂಬರೀಷ್ ಗೆ ಕನ್ನಡ ಚಿತ್ರರಂಗಕ್ಕೆ ಹಾರ್ಟ್ ಲೀ ವೆಲ್ ಕಮ್ ನಾಳೆ ಆತನ ಹೊಸ ಸಿನಿಮಾ ‘ಅಮರ್’ ಟೀಸರ್ ಬಿಡುಗಡೆಯಾಗುತ್ತಿದೆ. ಎಲ್ಲರೂ ನೋಡಿ ಆಶೀರ್ವದಿಸಿ ಹರಿಸಿ ಬೆಳೆಸಿ pic.twitter.com/9pjIspAqSQ
— Darshan Thoogudeepa (@dasadarshan) February 13, 2019
ದರ್ಶನ್ ಟ್ಟೀಟ್ಟನ್ನು ಸುಮಲತಾ ಅಂಬರೀಷ್ ರೀ-ಟ್ಟೀಟ್ ಮಾಡಿದ್ದಾರೆ.
ಕಳೆದ ನವೆಂಬರ್‌ನಲ್ಲಿ ಅಂಬರೀಷ್ ನಿಧನರಾಗಿದ್ದು, ಮಗನ ಮೊದಲ ಚಿತ್ರ ನೋಡದೇ ಕೊನೆಯುಸಿರೆಳೆದರೆಂಬ ನೋವು ಅಂಬರೀಷ್ ಅಭಿಮಾನಿಗಳಿಗಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 13, 2019, 12:29 PM IST